Advertisement
ಕೆಲವು ದಿನಗಳಿಂದ ಪ್ರತೀ ದಿನ ಸರಾಸರಿ 15 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ರವಿವಾರ ಮಧ್ಯಾಹ್ನದ ಅನ್ನಪ್ರಸಾದ ಸ್ವೀಕರಿಸಲು 9 ಸಾವಿರದಷ್ಟು ಭಕ್ತರು ಇದ್ದರೆ ರಾತ್ರಿ ವೇಳೆ 15 ಸಾವಿರ ಮಂದಿ ಕ್ಷೇತ್ರಕ್ಕೆ ಆಗಮಿಸಿದ್ದರು. ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರಿಂದಾಗಿ ವಸತಿಗೃಹಗಳು ತುಂಬಿದ್ದರಿಂದ ದೇಗುಲದ ಹೊರಭಾಗ ಹಾಗೂ ಸನಿಹದ ಅರಣ್ಯದ ಅಂಚಿನಲ್ಲೂ ಜನರು ಆಶ್ರಯ ಪಡೆದಿರುವುದು ಕಂಡುಬಂತು.
ಎ. 30ರಿಂದ ಮೇ 11ರ ತನಕ ಕೊಲ್ಲೂರು ದೇಗುಲದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. 1972 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಅನಂತರ 2002ರಲ್ಲಿ ನಡೆದಿದೆ. ಇದೀಗ 21 ವರುಷಗಳ ಅನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಎ. 30ರಿಂದ ಧಾರ್ಮಿಕ ವಿ ಧಿ ವಿಧಾನ ನಡೆಯಲಿವೆ. ಮೇ 1ರಂದು ಪೀಠ ಚಲನೆ, ಮೇ 4ರಂದು ಸಹಸ್ರ ಕಲಶ ಸ್ಥಾಪನೆ, ಮೇ 5ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮಕಲಶಾಭಿಷೇಕ, ಮೇ 9ರಂದು ಬ್ರಹ್ಮರಥೋತ್ಸವ ಹಾಗೂ ಮೇ 11ರಂದು ಪೂರ್ಣ ಕುಂಭಾಭಿಷೇಕ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಕಾರ್ಯನಿರ್ವಹಣಾ ಕಾರಿ ಎಸ್.ಸಿ. ಕೊಟಾರಗಸ್ತಿ ತಿಳಿಸಿದ್ದಾರೆ.
Related Articles
ಬ್ರಹ್ಮಕಲಶೋತ್ಸವದ ಅಂಗವಾಗಿ ಪೀಠ ಚಲನೆ ಪ್ರಕ್ರಿಯೆ ನಡೆಯುವುದರಿಂದ ಮೇ 2 ಮತ್ತು 3ರಂದು ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿಲ್ಲ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
Advertisement