Advertisement
ಕೇಸರಿ ಉಡುಪು: ಬೆಂಗಳೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಯ ಅನೇಕ ತಾಲೂಕುಗಳಿಂದ ಪಾದಯಾತ್ರೆ ಕೈಗೊಂಡಿರುವವರು ಕೇಸರಿ ಉಡುಪು ತೊಟ್ಟಿದ್ದಾರೆ. ಇವರಲ್ಲಿ ಅನೇಕ ಮಂದಿ ಪ್ರತಿ ಹೆಜ್ಜೆಯನ್ನುಮಂಜು ನಾಥನ ಜಪ ಮಾಡುತ್ತ ಹಾಕುತ್ತಿದ್ದರೆ, ಇನ್ನುಹಲವು ಮಂದಿ ಭಕ್ತಿ ಗೀತೆ ಹಾಡುತ್ತಾ ದೇವರನ್ನು ಜಪತಪ ಮಾಡುತ್ತಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾರೆ. ಯುವಕರು ಕೇಸರಿ ಬಣ್ಣದ ಧರ್ಮ ಧ್ವಜ ಹಿಡಿದು ಯಾತ್ರೆ ಕೈಗೊಂಡಿದ್ದಾರೆ.
Related Articles
Advertisement
ಹರಕೆ ಹೊತ್ತವರು: ಯಾವುದೇ ವಯೋಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಫೆ.28ರ ಸಂಜೆ ವೇಳೆಗೆ ಎಲ್ಲಾ ಭಕ್ತರು ಶ್ರೀಕ್ಷೇತ್ರವನ್ನುತಲುಪಲಿದ್ದಾರೆ. ಕಂಕಣ, ಸಂತಾನ ಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜಿನ ನಿವಾರಣೆಸಲುವಾಗಿ ಹರಕೆ ಹೊತ್ತವರು, ಇಷ್ಟಾರ್ಥ ಫಲಿಸಿದ ಹಿನ್ನೆಲೆ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.
ಕಳೆದ 13 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡುಶಿವರಾತ್ರಿ ಮಹೋತ್ಸವದಲ್ಲಿ ಮಂಜುನಾಥನದರ್ಶನ ಪಡೆಯುತ್ತಿದ್ದೇನೆ. ತಾಯಿಯಆಶಯದಂತೆ ಈ ಬಾರಿ ಮದುವೆ ವಿಚಾರವಾಗಿಹರಕೆ ಹೊತ್ತು ಪಾದಯಾತ್ರೆ ಕೈಗೊಂಡಿದ್ದೇನೆ. – ಮೋಹನ್, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು
ನನ್ನ ಜೀವನ ಮುಗಿಯಿತು ಎನ್ನುವ ವೇಳೆ ಹಿರಿಯರ ಮಾತಿನಂತೆ ಒಲ್ಲದಮನಸ್ಸಿನಿಂದ ಕಳೆದ 16 ವರ್ಷಗಳ ಹಿಂದೆ ಪಾದಯಾತ್ರೆ ಪ್ರಾರಂಭಿಸಿದೆ. ಎಲ್ಲವೂಒಳ್ಳೆಯದಾಯಿತು. ಬದುಕಿರುವವರೆಗೂ ಪಾದಯಾತ್ರೆ ಮುಂದುವರಿಸುವೆ. – ಲಕ್ಷ್ಮಣ, ಪಾದಯಾತ್ರಿ, ನೆಲಮಂಗಲ.
ಶತಮಾನದ ಹಿಂದೆ ಕಾಶಿಯತ್ರೆ ಹೆಸರಿನಲ್ಲಿ ವಯೋವೃದ್ಧರು ಧರ್ಮಿಕ ಕ್ಷೇತ್ರಗಳ ಯಾತ್ರೆಮಾಡುತ್ತಿದ್ದರು. ಈಗ ಇತಿಹಾಸ ಮರುಕಳಿಸಿದ್ದು,ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪ್ರತಿ ವರ್ಷಸಾವಿರಾರು ಮಂದಿ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. – ಗೌರಮ್ಮ, ಕತ್ತರಿಘಟ್ಟ ಗ್ರಾಮ, ಹೆದ್ದಾರಿಯಲ್ಲಿ ಪಾದಯಾತ್ರಿಕರಿಗೆ ಹಣ್ಣು ನೀರು ವಿತರಿಸುವ ಗೃಹಿಣಿ
–ಶಾಮಸುಂದರ್ ಕೆ.ಅಣ್ಣೇನಹಳ್ಳಿ