Advertisement
ಹಿನ್ನೆಲೆ: ಜಾಯವಾಡಗಿ ಗ್ರಾಮದಲ್ಲಿ ಸುಮಾರು 157 ವರ್ಷಗಳ ಹಿಂದೆ ಇಲ್ಲಿ ಕಾಲಗರ್ಭದಲ್ಲಿ ಹೂತು ಹೋದ ಶಿವಪ್ಪ ಮುತ್ಯಾನ ಚೇತನದ ಆಗೋಚರ ದೈವಿಶಕ್ತಿ ಜಾಯವಾಡಗಿ ಗ್ರಾಮದಲ್ಲಿ ಮತ್ತೆ ಚೇತನಗೊಂಡು ಭಾವಿಕರ ಆಶೋತ್ತರಗಳನ್ನು ನೀಗಿಸುವ ಪುಣ್ಯಕ್ಷೇತ್ರವಾಗಿದೆ.ಶಿವಪ್ಪ ಮುತ್ಯಾನ ಐಕ್ಯತಾಣದಲ್ಲಿ ಯಾವದೋ ಆಗೋಚರ ದೈವಿಶಕ್ತಿ ಇರಬೇಕು. ಈಗ ಗುರು ಶಿಷ್ಯರು ಲಿಂಗೈಕ್ಯರಾಗಿದ್ದು,
ಇವರ ಭಕ್ತರು ಇಬ್ಬರಿಗೂ ತಲಾ ಒಂದು ದೇವಾಲಯಗಳನ್ನು ನಿರ್ಮಿಸಿ ಸ್ಮರಣೆ ಮಾಡುತ್ತಿದ್ದಾರೆ. ಯಾಕೆಂದರೆ ಲಕ್ಷಗಟ್ಟಲೇ ಜನ, ಜಾನುವಾರುಗಳು ಪ್ರತಿ ಅಮಾವ್ಯಾಸೆಗೊಮ್ಮೆ ಬಂದು ತಮಗಾದ ನೋವಿನ ತೊಂದರೆಯನ್ನು ಶಿವಪ್ಪ ಮುತ್ಯಾನ ಕಟ್ಟೆಗೆ ಸುತ್ತು ಹಾಕಿ ನಿವಾರಣೆ ಹೊಂದುವ ವೈಚಿತ್ರಯಮಯವಾದ ಭಕ್ತಿ ಭಾವನೆ ಕಾಣಬಹುದು. ಈ ಒಂದು ಜನ, ಜಾನುವಾರುಗಳು ತೊಂದರೆ ನೀಗಬೇಕಾದರೆ ಸಾಮಾನ್ಯ ಮಾತಲ್ಲ. ಹೀಗಾಗಿ ಜಾಗೃತೆಯ ತಾಣವಾಗಿ ಜನ, ಜಾನುವಾರು ಸಂಕಷ್ಟಗಳನ್ನು ನಿವಾರಣೆಗೊಳಿಸುವ ಪುಣ್ಯ ತಾಣವಾಗಿದೆ.
Related Articles
Advertisement
ಭಾವೈಕ್ಯ ಪ್ರತೀಕ: ಗುರು ಶಿಷ್ಯರ ಸಮ್ಮಿಲನವಾದ ಸುಕ್ಷೇತ್ರ ಜಾಯವಾಡಗಿ ಸಮಾನತೆ ಹಾಗೂ ಭಾವೈಕ್ಯತೆ ಪ್ರತೀಕವಾಗಿದೆ. ಈ ದೇವಾಲಯಗಳು ಕೇವಲ ಹಿಂದೂಗಳಿಗೆ ಸೀಮಿತವಾಗಿಲ್ಲ.
ಮುಸ್ಲಿಮರೂ ಭೇಟಿ ನೀಡಿ ದೇವಾಲಯಕ್ಕೆ ತುಪ್ಪ ನೀಡುತ್ತಾರೆ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯ ಕಾಡುತ್ತಿದ್ದರೆ (ದೇಹದಲ್ಲಿ ಗಡ್ಡೆ, ಕಿವಿ ಸೋರುವಿಕೆ ಸೇರಿದಂತೆ ಇನ್ನೀತರ ಅನಾರೋಗ್ಯ) ದೇವಾಲಯದಲ್ಲಿ ಸಿಗುವ ತುಪ್ಪವನ್ನು ತೆಗೆದುಕೊಂಡು ಹೋಗಿ ಗಾಯದ ಮೇಲೆ ಲೇಪನ ಮಾಡುತ್ತಾರೆ. ನಿಷ್ಠೆಯಿಂದ ಗುರು ಶಿಷ್ಯರಿಗೆ ಹರಕೆ ಇಡುತ್ತಾರೆ. ಇದರಿಂದ ತಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ ಎಂಬ ಪ್ರತೀತಿಯಿದೆ.ಜಾತ್ರೆಯಲ್ಲಿ ಏನೇನು: ರಾಜ್ಯದ ಹಾಗೂ ಹೊರ ರಾಜ್ಯದಿಂದ ಲಕ್ಷಗಟ್ಟಲೇ ಭಕ್ತರು ಜಾತ್ರೆಗೆ ಆಗಮಿಸುವರು. ಜಾತ್ರಾ ನಿಮಿತ್ತ ನಾಟಕ, ಕೃಷ್ಣ ಪಾರಿಜಾತ, ಜಾನುವಾರುಗಳ ಪ್ರದರ್ಶನ. ಯುಗಾದಿ ದಿನದಂದು ರಥೋತ್ಸವ, ದನಗಳ ಜಾತ್ರೆ, ಭಾರವಾದು ಗುಂಡು , ಸಂಗ್ರಾಣಿ ಕಲ್ಲು, ಭಾರವಾದ ಚೀಲ ಎತ್ತುವ ಶಕ್ತಿ ಪ್ರದರ್ಶನ, ಜಂಗೀ ಕುಸ್ತಿಗಳು ಸೇರಿದಂತೆ ಭಕ್ತಿ ಭಾವದ ಸಲೀಲ ಸಂಗಮವಾಗಿ ಹಲವಾರು ರಚನ್ಮಾತಕ ಕಾರ್ಯಕ್ರಮ ಈ ತಾಣದಲ್ಲಿ ನಡೆಯುತ್ತವೆ. ಇಂದು ಈ ಭಕ್ತಿ ಭಾವನಳಿಸುವ ಈ ವಿಜ್ಞಾನ ಯುಗದಲ್ಲಿ ಭಕ್ತಿ ಭಾಗದ ಕೃಷಿ ತಾಣದಲ್ಲಿ ನಡೆಯಬೇಕಾದರೆ ಶಿವಪ್ಪ ಮುತ್ಯಾನ ಆತ್ಮ ಒಲುಮೆಯ ವೈಚಿತ್ರಮಯವಾದ ದೈವಿಶಕ್ತಿಯಾಗಿದೆ. ಗುರುರಾಜ ಕನ್ನೂರ