ತುಮಕೂರು: ಸರ್ವಧರ್ಮದ ಸಮನ್ವಯ ಕ್ಷೇತ್ರವಾಗಿ, ಬಸವಣ್ಣನವರ ತತ್ವಾದರ್ಶ ಪಾಲಿಸಿಕೊಂಡು ಬಂದಿದ್ದ, ಸಿದ್ಧಗಂಗೆಯ ಸಿದ್ಧಿ ಪುರುಷ ಶ್ರೀ ಶಿವಕುಮಾರ ಸ್ವಾಮೀಜಿ ಐಕ್ಯರಾದ ಶಿವ ಮಂದಿರದಲ್ಲಿ ಮಾಡಿರುವ ಕ್ರಿಯಾ ಸಮಾಧಿ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಬುಧವಾರವೂ ಭಕ್ತರ ದಂಡೇ ಹರಿದುಬರುತ್ತಿದೆ. ಶ್ರೀಗಳ ಗದ್ದುಗೆ ನೋಡಿ ಜನ ಭಕ್ತಿಯಿಂದ ನಮಸ್ಕರಿಸಿ, ಶ್ರೀಗಳಿಲ್ಲದ ಮಠ ನೆನೆದು ಅವರ ಆದರ್ಶಗಳನ್ನು ಮೆಲುಕು ಹಾಕುತ್ತಿದ್ದದ್ದು ಕಂಡು ಬಂದಿದೆ.
ಸಿದ್ಧಗಂಗಾ ಶ್ರೀಗಳು ಕ್ರಿಯಾ ಸಮಾಧಿಯಲ್ಲಿ ಐಕ್ಯರಾದ ಬಳಿಕ ಅಲ್ಲಿ ನಿರ್ಮಿಸಿರುವ ಶ್ರೀಗಳ ಗದ್ದುಗೆಗೆ ಪೂಜೆ ನಿರಂತರವಾಗಿ ನಡೆಯುತ್ತಲೇ ಇದೆ. ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಇಷ್ಟಲಿಂಗ ಪೂಜೆ ನೆರವೇರಿಸಿದ ಸಿದ್ಧಲಿಂಗ ಶ್ರೀ: ಶ್ರೀ ಮಠದಲ್ಲಿ ಎಂದಿನಂತೆ ಚಟುವಟಿಕೆಗಳು ಆರಂಭಗೊಂಡಿವೆ. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಎಂದಿನಂತೆ ಇಷ್ಟಲಿಂಗ ಪೂಜೆಯನ್ನು ಶ್ರೀ ಮಠದಲ್ಲಿ ನೆರವೇರಿಸಿದ್ದಾರೆ.
ನಂತರ ಸಿದ್ಧಗಂಗೆಯ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಐಕ್ಯರಾಗಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿ ದರು. ನಂತರ ಮಠದ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿತು.
ಸರದಿಯಲ್ಲಿ ನಿಂತು ಗದ್ದುಗೆ ದರ್ಶನ: ಮಂಗಳವಾರ ರಾತ್ರಿ ಶ್ರೀಗಳ ಗದ್ದುಗೆಯ ದರ್ಶನ ಪಡೆಯಲು ಸಾಧ್ಯವಾಗದ ಹಿನ್ನೆಲೆ ಯಲ್ಲಿ ರಾತ್ರಿ ಇಡೀ ಸಹಸ್ರಾರು ಭಕ್ತರು ಮಠದ ಆವರಣದÇ್ಲೇ ತಂಗಿದ್ದರು. ಬುಧ ವಾರ ಮುಂಜಾನೆಯಿಂದಲೇ ಗದ್ದುಗೆ ಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭ ವಾಗುತ್ತಿದ್ದಂತೆ ಸ್ವಯಂ ಪ್ರೇರಿತರಾಗಿಯೇ ಸರದಿಯಲ್ಲಿ ನಿಂತು ಪೂಜಾ ವಿಧಿ ವಿಧಾನ ಗಳು ಮುಗಿದ ನಂತರ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಸೂಚನೆ ಮೇರೆಗೆ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ನಂತರ ಭಕ್ತರೆಲ್ಲಾ ಶ್ರೀಮಠದಲ್ಲೇ ಪ್ರಸಾದ ಸ್ವೀಕರಿಸಿ ತಮ್ಮ ಊರುಗಳತ್ತ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಸುತ್ತೂರು ಶ್ರೀಗಳಿಂದ ಗದ್ದುಗೆ ಪೂಜೆ: ಬುಧವಾರ ಬೆಳಗಿನ ಜಾವವೇ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮೊದಲು ಸಿದ್ಧಗಂಗೆಯ ಬೆಟ್ಟದ ಶ್ರೀ ಸಿದ್ಧಲಿಂಗೇಶ್ವರ ದೇವಾಲಯ ದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿಯವ ರೊಂದಿಗೆ ಪೂಜೆ ಸಲ್ಲಿಸಿದ ನಂತರ ಶ್ರೀಗಳ ಗದ್ದುಗೆಗೆ ಪೂಜಾ ವಿಧಾನ ನೆರವೇರಿಸಲಾಯಿತು.
ಚಿ.ನಿ.ಪುರುಷೋತ್ತಮ್