Advertisement

200 ಸ್ಟ್ರೈಕ್‌ ರೇಟ್‌ ಗುರಿ: ಡೇವನ್‌ ಕಾನ್ವೇ

11:22 PM Apr 18, 2023 | Team Udayavani |

ಬೆಂಗಳೂರು: ಚೆನ್ನೈ ತಂಡವು ಉತ್ತಮ ಬ್ಯಾಟಿಂಗ್‌ ಪಿಚ್‌ನಲ್ಲಿ 200 ಸ್ಟ್ರೈಕ್‌ ರೇಟ್‌ನೊಂದಿಗೆ ಉತ್ತಮ ಮೊತ್ತಕ್ಕೆ ಗುರಿ ಇಟ್ಟುಕೊಂಡು ಆಡಲಿದೆ.

Advertisement

ಎದುರಾಳಿಗೆ ಕಠಿನ ಸವಾಲನ್ನು ನೀಡುವುದರಿಂದ ಗೆಲ್ಲುವ ಅವಕಾಶ ಬಹಳಷ್ಟಿದೆ ಎಂದು ಚೆನ್ನೈ ತಂಡದ ಆರಂಭಿಕ ಆಟಗಾರ ಡೇವನ್‌ ಕಾನ್ವೇ ಹೇಳಿದ್ದಾರೆ.

ಕಾನ್ವೇ ಸಹಿತ ಎಡಗೈ ಆಟಗಾರರ ಉತ್ತಮ ಆಟದಿಂದಾಗಿ ಚೆನ್ನೈ ತಂಡ 6 ವಿಕೆಟಿಗೆ 226 ರನ್ನುಗಳ ಬೃಹತ್‌ ಮೊತ್ತ ಪೇರಿಸಿದ್ದರೆ ಆರ್‌ಸಿಬಿ ಪ್ಲೆಸಿಸ್‌ ಮತ್ತು ಮ್ಯಾಕ್ಸ್‌ವೆಲ್‌ ಅವರ ಹೋರಾಟದ ಬ್ಯಾಟಿಂಗ್‌ ಹೊರತಾಗಿಯೂ 218 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಕಾನ್ವೇ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ತಂಡ ಉತ್ತಮ ಮೊತ್ತ ಪೇರಿಸಲು ಪ್ರಮುಖ ಪಾತ್ರ ವಹಿಸಿದ್ದರು. ಈ ಮೂವರು 180 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿದ್ದರು. 200 ಪ್ಲಸ್‌ ಸ್ಟ್ರೈಕ್‌ರೇಟ್‌ನಲ್ಲಿ ಆಡಿದ್ದರೆ ತಂಡ ಬೃಹತ್‌ ಮೊತ್ತ ಪೇರಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next