Advertisement

ದೇವೀರಮ್ಮ ಸುಗ್ಗಿ ಹಬ್ಬದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ತಡೆ

05:07 PM Apr 04, 2022 | Team Udayavani |

ಆಲ್ದೂರು : ಸಮೀಪದ ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ, ಹಳಿಯೂರು, ಸಾರಳ್ಳಿ, ದೋಣಗುಡಿಗೆ, ಹಳ್ಳಿ ಗ್ರಾಮಗಳಲ್ಲಿ ಸೋಮವಾರದಿಂದ ಆರಂಭವಾಗುವ ದೇವೀರಮ್ಮ
ದೇವಿಯ ಸುಗ್ಗಿ ಹಬ್ಬದಲ್ಲಿ ಹಿಂದೂ ಧರ್ಮದವರನ್ನು ಬಿಟ್ಟು ಅನ್ಯಧರ್ಮದವರಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಈ 5 ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಭಾನುವಾರ ಆಲ್ದೂರಿನ ಕೆಳ ಬಸ್‌ ನಿಲ್ದಾಣದ ಬಳಿ ಬ್ಯಾನರ್‌ ಅವಳಡಿಸಿದ್ದಾರೆ.

Advertisement

ಹಿಂದು ಸಂಘಟನೆಯ ಪ್ರಮುಖ ಸಿ.ಡಿ. ಶಿವಕಮಾರ್‌ ಈ ಕುರಿತು ಮಾತನಾಡಿ, ಈ ದೇಶದ ಕಾನೂನಿಗೆ ಗೌರವ ನೀಡದೆ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಕಾನೂನಿಗೆ ಅಗೌರವ
ತೋರಿರುವ ಮುಸ್ಲಿಂ ಸಮುದಾಯಕ್ಕೆ ನಾವು ನಮ್ಮ ಊರಿನ ದೇವರ ಉತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ. ನಾವು ಪೂಜಿಸುವ ಗೋವುಗಳನ್ನು ಕಡಿದು ತಿನ್ನುವ, ದೇಶದ ಅಖಂಡತೆಗೆ ಸವಾಲು ಹಾಕುವ ಅವರಿಗೆ ನಾವು ಸಹಕಾರ ನೀಡುವುದಿಲ್ಲ.

ನಮ್ಮ ಊರಿನ ದೇವಿರಮ್ಮ ದೇವಿಯ ಸುಗ್ಗಿ ಹಬ್ಬವನ್ನು ಬಹಳ ನಿಷ್ಟೆ ಹಾಗೂ ಸಂಪ್ರದಾಯಗಳನ್ನು ಪಾಲಿಸಿ ಆಚರಿಸುತ್ತೇವೆ. ಎಲ್ಲಾ ಗ್ರಾಮಗಳ ಹಿರಿಯರು, ಪ್ರಮುಖರು ಒಟ್ಟಾಗಿ ಚರ್ಚಿಸಿ ಪಕ್ಷ ಬೇಧ ಮರೆತು ಒಗ್ಗಟ್ಟಿನಿಂದ ಈ ತೀರ್ಮಾನ ಕೈಗೊಂಡಿದ್ದು ನಮ್ಮ ಊರಿನ ಸುಗ್ಗಿ ಹಬ್ಬದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯಧರ್ಮದವರಿಗೆ ನಾವು ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪತ್ರಿಕೆಗೆ ತಿಳಿಸಿದರು. ಗ್ರಾಮಸ್ಥರಾದ ನಿಶ್ಚಲ್‌ , ಸುಪ್ರಿತ್‌, ನವೀನ್‌, ಮಿಥುನ್‌, ಶರತ್‌, ಪ್ರಜ್ವಲ್‌, ತೇಜಸ್‌, ಸತೀಶ್‌, ಶಿವರಾಂ, ಅನುಜಿತ್‌, ಸನ್ಮಯ್‌, ಸಚಿನ್‌,
ಅರ್ಜುನ್‌. ಭರತ್‌ ಇದ್ದರು.

ಇದನ್ನೂ ಓದಿ : ಹೊಸಪೇಟೆ-ಗುತ್ತಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ : ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ

Advertisement

Udayavani is now on Telegram. Click here to join our channel and stay updated with the latest news.

Next