Advertisement
ಹೀಗೆ ಕೇಳುತ್ತಾ ಹೋದರೆ ಪ್ರಶ್ನೆಗಳೇ ಮುಗಿಯುವುದಿಲ್ಲ. ಹಾಗೇ ಸ್ಪಷ್ಟ ಉತ್ತರವೂ ಸಿಗುವುದಿಲ್ಲ. ನೀವು “ಆ್ಯಂಗ್ರಿ ಬರ್ಡ್ಸ್’ ಗೇಮ್ ಬಗ್ಗೆ ಕೇಳಿದ್ದೀರಿ. ಆದ್ರೆ “ಆ್ಯಂಗ್ರಿ ಗೋಸ್ಟ್’ ಬಗ್ಗೆ ಎಂದಾದರೂ ಕೇಳಿದ್ದೀರಾ? ಈ ಪ್ರಶ್ನೆ ಏಕೆಂದರೆ, ಪ್ರಸ್ತುತ ತಮಿಳುನಾಡಿನಾದ್ಯಂತ ಜಯಲಲಿತಾರ “ಆ್ಯಂಗ್ರಿ ಗೋಸ್ಟ್’, ಅಂದರೆ ಅಮ್ಮನ “ಕೋಪೋದ್ರಿಕ್ತ ಭೂತ’ದ ಕುರಿತ ಚರ್ಚೆ ತಾರಕಕ್ಕೇರಿದೆ. ಅಮ್ಮನ ಅಧಿಕೃತ ನಿವಾಸ ಪೊಯೆಸ್ ಗಾರ್ಡನ್‌ನಲ್ಲಿ ಕಳೆದ ಕೆಲ ವಾರಗಳಿಂದ ಯಾರೋ ಅಳುವ ಅಥವಾ ಕೂಗುವ ಸದ್ದು ಕೇಳಿಬರುತ್ತಿದೆ. ದಿನಕರನ್ ಕುಟುಂಬದ ಸದಸ್ಯರು ಕೂಡ ನಿರಂತರ 4 ದಿನ ರಾತ್ರಿ ಈ “ಅಶರೀರ ಅಳು’ ಕೇಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ “ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.ಜಯಲಲಿತಾ ಅವರ ಸಾವಿನ ನಂತರ ಅವರ ಸಾವು ಅಸಹಜ ಎಂಬ ವದಂತಿ ಹಬ್ಬಿತ್ತು. “ಜಯಲಲಿತಾ ಅವರ ಕೆನ್ನೆ ಮೇಲೆ ಗಾಯಗಳಾಗಿದ್ದವು ಮತ್ತು ಅವರ ಕಾಲು ಮುರಿದಿತ್ತು,’ ಎಂದು ಕೆಲವರು ಆರೋಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ಪನ್ನೀರ್ ಸೆಲ್ವಂ ಬಣ ಅಮ್ಮನ ಸಾವಿನ ತನಿಖೆಗೆ ಆಗ್ರಹಿಸಿತ್ತು. ನಂತರದ ಕ್ಷಿಪ್ರ ತಾಜಕೀಯ ಬೆಳವಣಿಗೆಯಲ್ಲಿ ಜಯಾ ಆಪೆ¤ ಶಶಿಕಲಾ ಪರಪ್ಪನ ಅಗ್ರಹಾರದ ಪಾಲಾಗಿದ್ದರು. ನಂತರ ದಿನಕರನ್ ಬಂಧನವಾಯಿತು.
ಈ ನಡುವೆ ಜಯಲಲಿತಾ ಅವರ ಕೊಡನಾಡು ಟೀ ಎಸ್ಟೇಟ್ ದರೋಡೆ ಯತ್ನ ನಡೆದು, ಸೆಕ್ಯೂರಿಟಿಯೊಬ್ಬ ಹತ್ಯೆಯಾಗಿ ಮತ್ತೂಬ್ಬ ಗಾಯಗೊಂಡಿದ್ದ. ಈ ಪ್ರಕರಣದಲ್ಲಿ ಕನಕರಾಜು ಮತ್ತು ಸಯಾನ್ ಎಂಬುವವರನ್ನು ಪ್ರಮುಖ ಆರೋಪಿಗಳಾಗಿ ಗುರುತಿಸಲಾಗಿತ್ತು. ಈ ಪೈಕಿ ಕನಕರಾಜು ಅಪಘಾತದಲ್ಲಿ ಮೃತಪಟ್ಟರೆ, ಅದೇ ದಿನ ನಡೆದ ಮತ್ತೂಂದು ಅಪಘಾತದಲ್ಲಿ ಸಯಾನ್ ಗಾಯಗೊಂಡಿದ್ದ.
ಜಯಲಲಿತಾ ಅವರ ಸಮಾಧಿ ಇರುವ ಮರೀನಾ ಬೀಚ್‌ನಲ್ಲಿ ಅಶರೀರ ಅಳು ಒಂದು ಕೇಳಿಬರುತ್ತಿದೆ. ಜಗತ್ತಿನ ಎರಡನೇ ಅತಿ ಉದ್ದದ ಬೀಚ್‌ನ ಅಲೆಗಳ ಶಬ್ದವನ್ನೂ ಮೀರಿ, ಯಾರೋ ಕೂಗುವ ಶಬ್ದ ಕೇಳಿಬರುತ್ತಿದೆ. ಹೀಗೆ ಹೇಳುತ್ತಿರುವುದು ಸಮಾಧಿ ಕಾವಲಿಗಿರುವ ಸೆಕ್ಯುರಿಟಿಗಳು. “ಕೆಲ ವಾರಗಳಿಂದ ಈ ಸಮಾಧಿ ಸ್ಥಳದಲ್ಲಿ ಸುಮಾರು 20 ಭದ್ರತಾ ಸಿಬಂದಿ ಬದಲಾಗಿದ್ದಾರೆ. ಸಮಾಧಿ ಕಾವಲಿಗಿರಲು ಯಾರೊ ಬ್ಬರೂ ಸಿದ್ಧರಿಲ್ಲ. ಕೆಲವರು ಜ್ವರ ಬಂದು ಮನೆ ಸೇರಿ ದ್ದಾರೆ,’ ಎಂದು ಭದ್ರತಾ ಸಿಬಂದಿಯೊಬ್ಬರು ಹೇಳಿದ್ದಾರೆ. ಇನ್ನು ಪಯಸ್ ಗಾರ್ಡನ್‌ನ ಭದ್ರತಾ ಸಿಬಂದಿಗೂ ಕೆಲದ ವಾರಗಳಿಂದ ಅಳುವ ಹೆಣ್ಣಿನ ಧ್ವನಿ ಕೇಳುತ್ತಿದೆ!