Advertisement

ನನಗೆ ಅವರೇ ಸ್ಪೂರ್ತಿ: ಠಾಕ್ರೆಯನ್ನು ಹೊಗಳಿದ ಫಡ್ನವೀಸ್

09:46 AM Nov 18, 2019 | keerthan |

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಯವರು ನನಗೆ ಸ್ಪೂರ್ತಿಯಾಗಿದ್ದರು ಎಂದು ಹೇಳಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನಾ ನಡುವಿನ ಮೈತ್ರಿ ಮುರಿದುಬಿದ್ದ ನಂತರ ದೇವೆಂದ್ರ ಫಡ್ನವೀಸ್ ಈ ಹೇಳಿಕೆ ಮಹತ್ವ ಪಡೆದಿದೆ.

ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆಯವರ ಏಳನೇ ವರ್ಷದ ಪುಣ್ಯತಿಥಿಯ ದಿನವಾದ ಇಂದು ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸದ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕಡಿದ ನಂತರ ಶಿವಸೇನೆ ಕೇಂದ್ರ ಸರಕಾರದಲ್ಲೂ ತನ್ನ ಮೈತ್ರಿಯನ್ನು ಹಿಂಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next