Advertisement

ಮೊದಲ ಟೆಸ್ಟ್‌ ಪಂದ್ಯದಲ್ಲೇ ಕಾನ್ವೆ ಸೆಂಚುರಿ

11:52 PM Jun 02, 2021 | Team Udayavani |

ಲಂಡನ್‌: ನ್ಯೂಜಿಲ್ಯಾಂಡಿನ ಎಡಗೈ ಆರಂಭಕಾರ ಡೇವನ್‌ ಕಾನ್ವೆ ಮೊದಲ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದಾರೆ. ಇಂಗ್ಲೆಂಡ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಸರದಿಯನ್ನು ಆಧರಿಸಿ ನಿಂತಿದ್ದಾರೆ.

Advertisement

ಬುಧವಾರ ಆರಂಭಗೊಂಡ ಲಾರ್ಡ್ಸ್‌ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲ್ಯಾಂಡ್‌ 3 ವಿಕೆಟಿಗೆ 198 ರನ್‌ ಗಳಿಸಿ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ. ಇದರಲ್ಲಿ ಕಾನ್ವೆ ಕೊಡುಗೆ ಅಜೇಯ 115 ರನ್‌ (172 ಎಸೆತ, 13 ಬೌಂಡರಿ).

ಆರಂಭಕಾರ ಟಾಮ್‌ ಲ್ಯಾಥಂ (23), ನಾಯಕ ಕೇನ್‌ ವಿಲಿಯಮ್ಸನ್‌ (13) ಮತ್ತು ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ (14) ಅವರನ್ನು ಕಿವೀಸ್‌ ಅಗ್ಗಕ್ಕೆ ಕಳೆದುಕೊಂಡಿದೆ. ಇದರಲ್ಲಿ 2 ವಿಕೆಟ್‌ ಮಧ್ಯಮ ವೇಗಿ ಓಲೀ ರಾಬಿನ್ಸನ್‌ ಪಾಲಾಯಿತು. ರಾಬಿನ್ಸನ್‌ ಅವರಿಗೂ ಇದು ಪದಾರ್ಪಣ ಟೆಸ್ಟ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next