Advertisement
ಸಸಿಗೆ ಒಬ್ಬರೊ ಇಬ್ಬರೊ ನೀರು ಚಿಮುಕಿಸಿದರಾಯ್ತು, ನಾವೆಲ್ಲ ಸಸಿಗೆ ಹೀಗೆ ನೀರು ಸುರಿದರೆ ಅದು ಬುಡಮೇಲಾಗುವುದು ಖಾತರಿ. ಅದು ಕೊಳೆಯಲೂಬಹುದು ಎಂದರು. ಪರಿಸರ ಕಾಳಜಿಯೆ ಇರಲಿ ಅತಿರೇಕವಾದರೆ ಅದು ಆಡಂಬರದ ದಿಕ್ಕು ಹಿಡಿದೀತೆನ್ನಲು ಈ ಸಂದರ್ಭ ಉದಾಹರಿಸಿದೆನಷ್ಟೆ. ಮೇರೆ ಮೀರಿದ ನಗರೀಕರಣದ ಮೋಹ, ಅಭಿವೃದ್ಧಿಯ ಅಮಲಿನಲ್ಲಿ ಮನುಷ್ಯ ತೇಲಿಹೋಗಿರುವ ಫಲವೇ ನೈಸರ್ಗಿಕ ವಿಕೋಪದ ಉಗ್ರತೆ, ವ್ಯಗ್ರತೆ. ನೆರೆ ನಮ್ಮ ವಾಸನೆಲೆ ಭೂಮಿಯಲ್ಲೇ ಅತಿ ಪ್ರಬಲ ಬಲ. ಅಂತರ್ಜಲವನ್ನೇ ಬರಿದಾಗಿಸುವಷ್ಟು ಅದು ರೌದ್ರಾವತಾರ ತಳೆಯಬಲ್ಲದು. ಪ್ರಕೃತಿಯ ಮುನಿಸನ್ನು ಯಾರೂ ತಡೆಯಲಾಗದು ನಿಜ. ಆದರೆ ಮನುಷ್ಯನೇ ಅದರ ಪೈಶಾಚಿಕ ನೃತ್ಯಕ್ಕೆ ಮೃದಂಗ ನುಡಿಸಿದರೆ? ಈಗಾಗುತ್ತಿರುವುದು ಅದೇ.
Related Articles
Advertisement
ಒಂದು ನಿವೇಶನ ಖರೀದಿಸುವಾಗ ಅದರ ಉದ್ದಗಲಕ್ಕಿಂತಲೂ ಮಿಗಿಲಾಗಿ ಅಲ್ಲಿ ಮೊದಲು ಯಾವುದಾದರೂ ಜಲಮೂಲವಿತ್ತೆ? ನೀರು ಪ್ರವಹಿಸುವ ಸರಾಗ ಇಳಿಜಾರಿತ್ತೆ? ಎನ್ನುವ ಅರಿವು ಪ್ರಾಧಾನ್ಯವಾಗಬೇಕಿದೆ. ನೀರಿನ ದಾರಿಯನ್ನು ಅತಿಕ್ರಮಿಸಬಾರದೆಂಬ ಪರಿಸರ ಪ್ರಜ್ಞೆ ನಮ್ಮದಾಗಬೇಕು. ಮನೆ, ಕಟ್ಟಡ ನಿರ್ಮಿಸುವವರು ತಮ್ಮ ನಿವೇಶನವಿರುವುದು ಏರಿನಲ್ಲೋ, ತಗ್ಗಿನಲ್ಲೋ ಎನ್ನುವುದನ್ನು ಲಕ್ಷಿಸುವುದೂ ಅಪರೂಪವೆ! ಜಲ ವರವೋ ಕಂಟಕವೋ ಎನ್ನುವುದು ನಾವು ಯಾವ ತೆರದಿ ಅದನ್ನು ನಿರ್ವಹಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ತನ್ನದೇ ತಾಳ, ಲಯ, ಗೊತ್ತು ಗುರಿಯುಳ್ಳ ನದಿಗೆ ರಾಕ್ಷಸ ಪ್ರವೃತ್ತಿಯನ್ನು ಆರೋಪಿಸಬಾರದು. ಸೇವೆಗೆ ಮತ್ತೂ ಅಧಿಕಾರ ಬೇಕೆಂದು ಹಠಹೂಡಿ ಐಷಾರಾಮಿ ಬಸ್ಸು, ವಿಶೇಷ ವಿಮಾನವೇ ರುತ್ತಿದ್ದವರು ಈಗೆಲ್ಲಿ? ಒಂದು ಹೆಲಿಕಾಪrರ್ ಗೊತ್ತು ಮಾಡಿಕೊಂಡು ನೆರೆಪೀಡಿತರನ್ನು ಕಂಡು ಸಂತೈಸಲು, ಸಹಾಯ ಹಸ್ತ ಚಾಚಲು ತೆರಳಬಹುದಲ್ಲ? ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಬದುಕಿದರೆ ಸಾಕಪ್ಪ ಎನ್ನುವಷ್ಟು ಮಳೆ, ಪ್ರವಾಹ ಸಂಭವಿಸಿದೆ. ಮಳೆಗಾಗಿ ಪ್ರಾರ್ಥಿಸಿ, ಪೂಜೆ ಪುನಸ್ಕಾರಕ್ಕೆ ನಿರ್ದಿಷ್ಟ ಹಣ ಬಳಸಿಕೊಳ್ಳಿ ಎಂದು ಈಚೆಗಷ್ಟೆ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ನೆರೆ ತಗ್ಗಿಸಲು ಅಂಥದ್ದೆ ಆದೇಶ ಹೊರಡಿಸುವುದೇ? ನೀರಿನ ತೊಟ್ಟಿ, ಹಂಡೆಯಲ್ಲಿ ಕೂತು ವರ್ಷಧಾರೆಗೆ ಜಪಿಸುತ್ತಿದ್ದವರು ಇದೀಗ ನದಿಗಳ ಉಕ್ಕನ್ನು ಶಮನಗೊಳಿಸಲು ಕೆಂಡದಲ್ಲಿ ಬೇಡ, ಬೆಚ್ಚಗಿನ ನೀರಿರುವ ಬೋಗುಣಿಯಲ್ಲಿ ಕೂರುವರೇ? ಮಳೆ ಬರಲೆಂದು ಕಪ್ಪೆಗಳ ಮದುವೆ ಮಾಡಿಸಿದವರು ಈಗ ಅವುಗಳ ವಿಚ್ಛೇದನ ನಡೆಸುತ್ತಾರೆಯೇ? ವುಳೆ ಒಂದು ವೈಜ್ಞಾನಿಕ ವಿದ್ಯಮಾನ, ಪ್ರಾಕೃತಿಕ ಪ್ರಕ್ರಿಯೆ. ಅದನ್ನು ವಿಶ್ಲೇಷಣೆಗೊಳಪಡಿಸಿ ಕನಿಷ್ಠವಾಗಿಯಾದರೂ ಅತಿವೃಷ್ಟಿ, ಅನಾವೃಷ್ಟಿ ನಿಯಂತ್ರಿಸಿಕೊಳ್ಳುವ ಮಾರ್ಗ ಹುಡುಕಾಡಬೇಕು.
ಮಳೆ, ಬಿಸಿಲು, ಬರವನ್ನು ಮೂರ್ತಗೊಳಿಸಿ ‘ಸುರ'(‘ಅಸುರ’) ಎಂದು ಕಲ್ಪಿಸಿ ಹೋಮ, ಹವನ, ಯಾಗಗಳಿಗೆ ಮುಂದಾಗುವುದು ಮೌಡ್ಯ. ಎಲ್ಲವನ್ನೂ ದಹಿಸುವ ಅಗ್ನಿಯ ಗುಣ ಎಳೆಯ ಮಗುವಿಗೂ ಗೊತ್ತಿದೆ. ಯಾವುದೇ ಪದಾರ್ಥವನ್ನು ಸುಟ್ಟಾಗ ಪರಿಣಮಿಸುವುದು ಹೈಡ್ರೋಕಾರ್ಬನ್. ಹೇಳಿಕೇಳಿ ಆಹಾರ ವಸ್ತುಗಳ ಅಭಾವ ತಾಂಡವವಾಡಿದೆ. ಇಷ್ಟಾರ್ಥ ಈಡೇರಲೆಂದು ಹಣ್ಣು, ಕಾಯಿ, ವಸ್ತ್ರ, ದವಸ ಧಾನ್ಯಾದಿಗಳನ್ನು ಬೆಂಕಿಯ ಕುಂಡಕ್ಕೆ ಸುರಿಯುವುದೇ?! ಟರ್ಕಿಯ ನಾಟಕಕಾರ, ಕಥೆಗಾರ ಮೆಹಮತ್ ಮುರಾತ್ ಇಲ್ದಾನ್ ಕಲ್ಪನೆಯಲ್ಲಿ ಸಾಗರ ನೀಡುವ ಸಂದೇಶ ಇಂತಿದೆ: ‘ಪ್ರತೀ ನದಿ. ಮಳೆ, ನೆರೆ, ಚಿಲುಮೆ ಅಪಾಯವಿಲ್ಲದೆ ನಿಮ್ಮತ್ತ ಸರಾಗವಾಗಿ ಹರಿಯಗೊಟ್ಟರೆ ನೀವೂ ನನ್ನಂತೆ ಸಮುದ್ರವೇ ಆಗುವಿರಿ’.
ಬಿಂಡಿಗನವಿಲೆ ಭಗವಾನ್