Advertisement
ಕಲ್ಮಾಡಿ ಬಬ್ಬರ್ಯ ಪಾದೆ ಬಳಿ ಜೆಟ್ಟಿಮೀನುಗಾರರ ಬೇಡಿಕೆಯಂತೆ ಬಂದರಿನಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಉಂಟಾಗುತ್ತಿರುವ ಜಾಗದ ಕೊರತೆಯನ್ನು ನೀಗಿಸಲು ಕಲ್ಮಾಡಿ ಬೊಬ್ಬರ್ಯ ಪಾದೆ ಸಮೀಪದ ಹೊಳೆಯ ಬಲಬದಿಯ ಬಾಪುತೋಟ ಸಸಿತೋಟ ಸಮೀಪ ಮೀನುಗಾರಿಕಾ ಜೆಟ್ಟಿ ನಿರ್ಮಾಣಗೊಂಡಿದ್ದು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 2.4 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಜೆಟ್ಟಿ 75ಮೀ. ಉದ್ದ, 8.5 ಮೀ. ಅಗಲವಿದ್ದು 18 ಮೀ. ಆಳದಲ್ಲಿ ಪಿಲ್ಲರ್ ನ್ನು ಅಳವಡಿಸಲಾಗಿದೆ. ಇಲ್ಲಿ ಸುಮಾರು 100 ಅಧಿಕ ಬೋಟ್‌ಗಳು ನಿಲ್ಲಲು ಅವಕಾಶವಿದೆ. ಸುಮಾರು 4 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಂಡು ಮೀನುಗಾರರ ಉಪಯೋಗಕ್ಕೆ ತೆರೆದುಕೊಂಡಿದೆ.
ಮಲ್ಪೆ ಬೀಚ್‌ನಿಂದ ಕಡೆಕಾರು ಪಡುಕರೆವರೆಗಿನ ಕಡಲತೀರದ 5 ಕಡೆಗಳಲ್ಲಿ ಸುಮಾರು 12.5 ಕೊಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಲ್ಪೆಯ ಹನುಮಾನ್ ವಿಠೊಭಾ ಭಜನಾ ಮಂದಿರದ ಎದುರುಗಡೆ ನಗರೋತ್ಥಾನ ಅನುದಾನದಲ್ಲಿ 3 ಕೋ. ರೂ. ವೆಚ್ಚದಲ್ಲಿ ಸುಮಾರು
600 ಮೀ., ಶಿವಪಂಚಾಕ್ಷರಿ ಭಜನಾ ಮಂದಿರ ಸಮೀಪ 1.3 ಕೋ. ರೂ. ವೆಚ್ಚದಲ್ಲಿ 120ಮೀ ಮತ್ತು ಬೀಚ್‌ನ ಉತ್ತರ ಭಾಗದಲ್ಲಿ 1.90 ಕೋ. ರೂ. 260 ಮೀ. ಉದ್ದದ ತಡೆಗೋಡೆಯನ್ನು ನಿರ್ಮಿಸಲಾಗಿದ್ದು ಅದರ ಕಾಮಗಾರಿ ಪೂರ್ಣಗೊಂಡಿದೆ.
Related Articles
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೋಟ್‌ಗಳ ನಿಲುಗಡೆಗೆ ಜೆಟ್ಟಿ ವಿಸ್ತರಣೆ ರಸ್ತೆ ನಿರ್ಮಾಣ, ಹರಾಜು ಪ್ರಾಂಗಣ ನವೀಕರಣಗೊಳಿಸಲಾಗುತ್ತದೆ. ಈಗಿರುವ 1 ಮತ್ತು 2ನೇ ಹಂತ ಬಂದರಿನ ಬೇಸಿನ್‌ಗೆ ತಾಗಿ ಕೊಂಡು ಇಲ್ಲಿಯೂ 75 ಮೀ. ಉದ್ದದ ಜೆಟ್ಟಿ, ಮೀನುಗಾರಿಕಾ ಚಟುವಟಿಕೆ ಸುಗಮ ಸಂಚಾರಕ್ಕೆ ಆಂತರಿಕ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.
Advertisement
ಮಲ್ಪೆ ಬಾಪುತೋಟ ಸಸಿತೋಟದಲ್ಲಿ ಸುರಕ್ಷತಾ ನಿಲುಗಡೆಗೆ ಅವಶ್ಯವಿರುವ ಸೂಕ್ತ ಮಾದರಿಯ 75ಮೀ ಉದ್ದದ ಆರ್‌ಸಿಸಿ ಫೈಲ್ ಜೆಟ್ಟಿಯನ್ನು ನಿರ್ಮಿಸಲಾಗಿದೆ. ಯೋಜನೆಯ ಅವಧಿ 18 ತಿಂಗಳು ಇದ್ದರೂ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಶೀರೂರು, ಕೊಡೇರಿ ಬಂದರುಗಳ ಜೆಟ್ಟಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಿ ಮೀನುಗಾರರ ಉಪಯೋಗಕ್ಕೆ ನೀಡಲಾಗಿದೆ.– ಎಸ್. ನಾಗರಾಜ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಬಂದರು ಮತ್ತು ಮೀನುಗಾರಿಕಾ ಉಪ ವಿಭಾಗ ಉಡುಪಿ