ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಯಶ್ವಂತ್‌ರಾಜ್ ನಾಗಿರೆಡ್ಡಿ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿ ಈಡೇರಿಸುವಂತೆ ಮನವಿ ಮಾಡಿದ್ದಾರೆ.
Advertisement
ರಾಜ್ಯದ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ, ಕೆ.ಸಿ.ರಾಮ ಮೂರ್ತಿ, ಪಿ.ಸಿ.ಗದ್ದಿಗೌಡರ್ಇನ್ನಿತರೆ ರಾಜ್ಯದ ಸಂಸದರು ಮತ್ತು ಸಚಿವರು ಉಪಸ್ಥಿತರಿದ್ದ ಸಭೆಯಲ್ಲಿ ಯಶ್ವಂತ್‌ರಾಜ್ ಅವರು, ನಗರದ ಸುಧಾ ಕ್ರಾಸ್ ಬಳಿ ಫ್ಲೈ ಓವರ್ ನಿರ್ಮಾಣ ಮಾಡುವುದು, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಮತ್ತು ಎಸ್ಕ್ಲೇಟರ್ ಅಳವಡಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರದ ಕ್ರಮಗಳನ್ನು ಬೇಗನೆ ಪೂರೈಸಿ ಜನತೆಗೆ ಲಿಫ್ಟ್ ಮತ್ತು ಎಸ್ಕೆಲೇಟರ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಬಳ್ಳಾರಿ ಬೆಂಗಳೂರು ನಡುವೆ ಇಂಟರ್‌ಸಿಟಿ ರೈಲನ್ನು ಆರಂಭಿಸಬೇಕು.
ರೈತರ ಭೂಮಿ ವಶಪಡಿಸಿಕೊಂಡು ಹನ್ನೆರೆಡು ವರ್ಷಗಳು ಕಳೆದರೂ ನಿರ್ಮಾಣವಾಗದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಬೇಕು. ತೋರಣಗಲ್ಲು-ಬಳ್ಳಾರಿ
ಮಧ್ಯದಲ್ಲಿ ಎಂಎಂಟಿಸಿ ಮತ್ತು ಮಿತ್ತಲ್ ಗ್ರೂಪ್ ಗೆ ನೀಡಿರುವ ನೂರಾರು ಎಕರೆ ಭೂಮಿಯಲ್ಲಿ ತ್ವರಿತವಾಗಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು, ಇಲ್ಲದೇ ಹೋದರೆ ರೈತರ ಭೂಮಿಯನ್ನು
ರೈತರಿಗೆ ಹಿಂದಿರುಗಿಸಬೇಕು ಎಂದವರು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಬಿಜೆಪಿ ವಿರುದ್ಧ ಯಾವುದೇ ರಂಗವನ್ನು ಮುನ್ನಡೆಸಲು ಹೋಗುವುದಿಲ್ಲ: ಶರದ್ ಪವಾರ್
Related Articles
Advertisement