Advertisement
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಈ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವಿಶೇಷ ಘಟಕ ಯೋಜನೆಯಡಿ 5.20 ಕೋಟಿ ವೆಚ್ಚದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ನದಿಯಿಂದ ದೊಡ್ಡಹೆಜ್ಜೂರು, ಕಪ್ಪನಕಟ್ಟೆ ಹಾಡಿಯ ಪರಿಶಿಷ್ಟ ಜಾತಿ- ವರ್ಗಗಳ ಸಮುದಾಯದವರ 700 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಯೋಜನೆ ಅನುಷ್ಟಾನಗೊಳಿಸಲಾಗಿತ್ತು. ಆದರೆ ಇನ್ನೂ ಸಾಕಷ್ಟು ಮಂದಿ ರೈತರ ಭೂಮಿಗೆ ನೀರು ಪೂರೈಸಲು ಪೈಪ್ ಅಳವಡಿಕೆ ಹಾಗೂ ಕಾಲುವೆ ನಿರ್ಮಾಣದ ಕಾಮಗಾರಿ ಅಗತ್ಯತೆ ಇತ್ತು. ಇದರಿಂದ ಯೋಜನೆ ಉದ್ಘಾಟನೆಗೊಂಡಿರಲಿಲ್ಲ.
Related Articles
Advertisement
ಕಾರ್ಯಕ್ರಮ ಬಹಿಷ್ಕರಿಸಿದ ಆದಿವಾಸಿಗಳು:
ದೊಡ್ಡಹೆಜ್ಜೂರಿನ ಟ್ಯಾಂಕ್ ಬಳಿಯಿಂದ ಕಪ್ಪನಕಟ್ಟೆ ಹಾಡಿವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥರು ಗುದ್ದಲಿ ಪೂಜೆ ನೆರವೇರಿಸಿ ಎರಡು ತಿಂಗಳಾಗಿದ್ದರೂ ಕಾಮಗಾರಿ ಆರಂಭಿಸದಿದ್ದರಿಂದ ಮುನಿಸಿಕೊಂಡ ಹಾಡಿಯ ಗಿರಿಜನರು ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಈ ಬಗ್ಗೆ ಶಾಸಕ ಮಂಜುನಾಥರು ಪಿಎಂಜಿಎಸ್‌ವೈ ಯೋಜನೆಯಡಿ 70 ಲಕ್ಷ ವೆಚ್ಚದ ಕಾಮಗಾರಿಗೆ ಪೂಜೆ ನೆರವೇರಿಸಿದ್ದರೂ ಟೆಂಡರ್ ಪಡೆದಿರುವ ಗುತ್ತಿಗೆದಾರ ಅನುದಾನ ಬಂದಿಲ್ಲವೆಂಬ ಕಾರಣವೊಡ್ಡಿ ಕಾಮಗಾರಿ ಆರಂಭಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿ ಅಲ್ಲಿಂದಲೇ ಮುಖ್ಯ ಇಂಜಿನಿಯರ್ ಜೊತೆ ಚರ್ಚಿಸಿ, ತಕ್ಷಣವೇ ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಿದರು.