ಹನೂರು: ತಾಲೂಕು ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ 27 ಕೋಟಿ ರೂ. ವೆಚ್ಚದ 10 ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶೈಕ್ಷಣಿಕ ಅಭಿವೃದ್ಧಿಗಾಗಿ ಒತ್ತು ನೀಡಲಾಗುತ್ತಿದ್ದು 2 ಕೋಟಿ ರೂ. ವೆಚ್ಚದ ಐಟಿಐ ಕಾಲೇಜು,5.79 ಕೋಟಿ ವೆಚ್ಚದಲ್ಲಿ ನೆಕ್ಕುಂದಿಯಲ್ಲಿ ಆಶ್ರಮಶಾಲೆ, 3.25 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್‌ಗಳನ್ನುತೆರೆಯಲಾಗಿದ್ದು, ಬಂಡಳ್ಳಿಯಲ್ಲಿ 1.94 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಕಟ್ಟಡವನ್ನು ಲೋಕಾರ್ಪಣೆ ಗೊಳಿಸಲಾಗಿದೆ ಎಂದರು.
ಇದೇ ವೇಳೆ ತಾಲೂಕಿನ ಲಾಸರ್‌ದೊಡ್ಡಿಯಲ್ಲಿ 1.90 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇದೊಂದು ಬಹುಮುಖ್ಯವಾದ ಕಾಮಗಾರಿ ಯಾಗಿದ್ದು ಈ ಕಾಮಗಾರಿಯಿಂದ ಲಾಸರ್ ದೊಡ್ಡಿಯ ಸಾರ್ವಜನಿಕರಿಗೆ ಸೇತುವೆ ದೊರೆತಂತಾಗಿದೆ ಎಂದರು. ಇದೇ ವೇಳೆ 50 ಲಕ್ಷ ರೂ. ವೆಚ್ಚದಲ್ಲಿ ಹನೂರು ಪಟ್ಟಣದ ರೈತ ಸಂಪರ್ಕ ಕೇಂದ್ರ, 44 ಲಕ್ಷ ರೂ.ವೆಚ್ಚದಲ್ಲಿ ರಾಮಾಪುರ ರೈತ ಸಂಪರ್ಕ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ರಾಮಾಪುರಗ್ರಾಮದಲ್ಲಿ 2.10 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಆರೋಗ್ಯ ಕೇಂದ್ರ, ಅಜ್ಜೀಪರದಲ್ಲಿ 4.89 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಉಪಕೇಂದ್ರ ಮತ್ತು 4.25 ಕೋಟಿ ವೆಚ್ಚದ ನಾಲಾರೋಡ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.
ಇದೇ ವೇಳೆ ಶಾಸಕ ನರೇಂದ್ರ ಮಾತನಾಡಿ, ನಾಲಾರೋಡ್ ಸಮೀಪ ಹರಿಯುವ ಹಳ್ಳಕ್ಕೆ ಸೇತುವೆನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಹೂಗ್ಯಂ, ಮೀಣ್ಯಂ ಗ್ರಾಮಗಳ ಜನರ ಬಹುದಿನದಬೇಡಿಕೆಯಾಗಿತ್ತು. ಇದೀಗ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಸಚಿವರ ಕಾರ್ಯಕ್ರಮಕ್ಕೆ ನಿಯಮ ಅನ್ವಯ ಇಲ್ಲವೇ? :
ಸೋಂಕು ತಡೆಗೆ ಸರ್ಕಾರ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕುಎಂದು ಆದೇಶಿಸಿದೆ. ಕೋವಿಡ್‌ಮಾರ್ಗಸೂಚಿ ಉಲ್ಲಂ ಸಿದ ಸಾರ್ವಜನಿಕರವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ,ಸಚಿವರು ಆಯೋಜಿಸುವ ಕಾರ್ಯಕ್ರಮಗಳಲ್ಲಿಇವುಗಳನ್ನು ಉಲ್ಲಂ ಸಿದರೆ ಏಕೆ ಕ್ರಮ ಇಲ್ಲಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಶುಕ್ರವಾರ ವಿವಿಧ ಕಾಮಗಾರಿಗಳನ್ನುಉದ್ಘಾಟಿಸಿದ ಸಂದರ್ಭದಲ್ಲಿ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕಅಂತರವಂತೂ ಇರಲೇ ಇಲ್ಲ. ಗಣ್ಯರಿಗೆ ಒಂದು ನಿಯಮ, ಜನಸಾಮಾನ್ಯರಿಗೆಒಂದು ನಿಯಮ ಇದಿಯಾ, ಏಕೆ ತಾರತಮ್ಯನೀತಿ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ