Advertisement
ಬಡಗ ಎಡಪದವು ಗ್ರಾ.ಪಂ. ವ್ಯಾಪ್ತಿಯ ಉರ್ಕಿ, ಶಾಸ್ತಾವು, ತಿಪ್ಲಬೆಟ್ಟು ಪ್ರದೇಶ ಜನರಿಗೆ ಈ ರಸ್ತೆ ಅತೀ ಪ್ರಾಮುಖ್ಯವಾಗಿದ್ದು, ಸುಮಾರು 8 ವರ್ಷಗಳಿಂದ ದುರಸ್ತಿಯಾಗದೇ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ರಿಕ್ಷಾ ಚಾಲಕರಿಗೆ, ದ್ವಿಚಕ್ರವಾಹನ ಚಾಲಕರಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಕ್ಲಿಷ್ಟಕರವಾಗಿತ್ತು. ಸ್ಥಳೀಯ ಜನರು ಹಾಗೂ ಪಂಚಾಯತ್ ಆಡಳಿತದವರ ಮನವಿಗೆ ಸ್ಪಂದಿಸಿದ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಈ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು.
Related Articles
Advertisement
2 ರಾ. ಹೆ. ಗಳನ್ನು ಸಂಪರ್ಕಿಸುವ ರಸ್ತೆ
ಮೂಡುಬಿದಿರೆ-ಮಂಗಳೂರು ರಾ. ಹೆದ್ದಾರಿಗೆ ಇದು ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಮುಂದೆ ಮೂಲರ ಪಟ್ನ -ಆರಳ – ಸೊರ್ನಾಡ್ ಮೂಲಕ ಬಿ.ಸಿ. ರೋಡ್ ಗೆ ಹೋಗುತ್ತದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಮೂಡುಬಿದಿರೆ – ಮಂಗಳೂರಿನಿಂದ ಎಡಪದವು – ಪೂಪಾಡಿಕಲ್ಲು – ಉರ್ಕಿ – ಬೆಳ್ಳೆಚಾರು – ಮೂಲರಪಟ್ನ – ಅರಳ – ಸೊರ್ನಾಡ್ ಆಗಿ ಬಿ.ಸಿ.ರೋಡ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ.
ಪಿಡಬ್ಲ್ಯುಡಿ ಅನುದಾನದಿಂದ ಅಭಿವೃದ್ಧಿ
ಎಡಪದವು ಪೂಪಾಡಿಕಲ್ಲು-ಬೆಳ್ಳೆಚಾರು ರಸ್ತೆ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಒಟ್ಟು 2.6ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. – ಸಂಜೀವ ನಾಯ್ಕ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಜನರ ಬೇಡಿಕೆಗೆ ಸ್ಪಂದನೆ
ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಪರ್ಕ ರಸ್ತೆಗಳು ಪ್ರಾಮುಖ್ಯ ಪಡೆದಿವೆ. ಬಡಗ ಎಡಪದವು ಗ್ರಾ.ಪಂ. ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನರ ಬೇಡಿಕೆಗೆ ಸ್ಪಂದಿಸಲಾಗಿದೆ. ರಸ್ತೆ ಸಮರ್ಪಕವಿಲ್ಲದೆ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಜನರಿಗೆ ಹೆಚ್ಚು ತೊಂದರೆಯಾಗುತ್ತಿತ್ತು. ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿತ್ತು. ಇದು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಅತೀ ಮುಖ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. – ಡಾ| ಭರತ್ ಶೆಟ್ಟಿ ವೈ., ಶಾಸಕರು ಮಂಗಳೂರು ನಗರ ಉತ್ತರ ಕ್ಷೇತ್ರ