Advertisement
ಮುಂದಿನ ಲೋಕಸಭೆ ಮತ್ತು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಇಲ್ಲಿಯ ಮುಳಿಯ ನಿಸರ್ಗ ನಿಲಯದಲ್ಲಿ ರವಿವಾರ ನಡೆದ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ವಿಚಾರದಲ್ಲಾದರೂ ಆತ್ಮವಿಶ್ವಾಸ ಇರಬೇಕು. ಆದರೆ ಅತಿ ಆತ್ಮವಿಶ್ವಾಸ ಇರಬಾರದು. ಇದಕ್ಕೆ ಹಿನ್ನೆಲೆ ಎಂಬಂತೆ ಕಾಂಗ್ರೆಸ್‌ನ ಅನಾಚಾರ, ಹಿಂದುತ್ವದ ಮೇಲಿದ್ದ ಭಾವನೆ ಮುಳ್ಳಾಗಿವೆ. ಸಾಮೂಹಿಕ ಜನರ ಭಾವನೆಗೆ ಸ್ಪಂದಿಸುವಂತಿದ್ದ ಬಿಜೆಪಿಗರಿಗೆ ಈ ಬಾರಿಯ ಚುನಾವಣೆ ಫಲಿತಾಂಶ ನೀಡಿದೆ ಎಂದರು.
ಪುತ್ತೂರು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೊಂದಾಣಿಕೆಯಿಂದ ವಿಧಾನಸಭೆ ಚುನಾವಣೆ ರೀತಿಯಲ್ಲಿ ಪ್ರಯತ್ನಿಸಬೇಕಾದ ಅಗತ್ಯವಿದೆ. ಈ ಬಾರಿ ನಗರಸಭೆ ಚುಕ್ಕಾಣಿಯನ್ನು ಬಿಜೆಪಿ ಬಗಲಿಗೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು ಎಂದರು. ಶಾಸಕ ಸಂಜೀವ ಮಠಂದೂರು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಮುಖಂಡ ಅಪ್ಪಯ್ಯ ಮಣಿಯಾಣಿ, ಮುಳಿಯ ಜುವೆಲರ್ನ ಮುಳಿಯ ಶ್ಯಾಮ್ ಭಟ್, ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಂಜನ್, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಚಂದ್ರಸಿಂಗ್, ವಿನಯ ಭಂಡಾರಿ, ನಿಸರ್ಗ ಮನೆಯ ಕೃಷ್ಣನಾರಾಯಣ ಮುಳಿಯ, ಕೇಶವಪ್ರಸಾದ್ ಮುಳಿಯ, ಸುಲೋಚನಾ ಶ್ಯಾಮ್ ಭಟ್ ಉಪಸ್ಥಿತರಿದ್ದರು.