Advertisement

ಅಜೀಂ ಪ್ರೇಮ್ ಜೀ ವಿವಿ; ವಿಶ್ವಾದ್ಯಂತ ಮಹತ್ವ ಪಡೆದ ಅಭಿವೃದ್ಧಿ ಶಿಕ್ಷಣ

12:16 PM Dec 30, 2017 | Sharanya Alva |

ಹೊಸದಿಲ್ಲಿ : ದೇಶದಲ್ಲಿ ಸ್ನಾತಕೋತ್ತರ ಅಭಿವೃದ್ಧಿ ಶಿಕ್ಷಣ (ಎಂಎ ಇನ್‌ ಡೆವಲಪ್‌ಮೆಂಟ್‌ ಎಜುಕೇಶನ್‌) ಕಾರ್ಯಕ್ರಮವನ್ನು ಪ್ರಮುಖ ವಿಶ್ವವಿದ್ಯಾಲಯಗಳು ರೂಪಿಸಿದ್ದು ಅವುಗಳಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವೂ ಒಂದಾಗಿದೆ. 

Advertisement

ಸ್ನಾತಕೋತ್ತರ ಅಭಿವೃದ್ಧಿ ಶಿಕ್ಷಣ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಎಂಎ ಪದವಿಯನ್ನು ಗಳಿಸಬಹುದಾಗಿದ್ದು  ಈ ಸ್ನಾತಕೋತ್ತರ ಪದವೀಧರರಿಗೆ ದೇಶ,‌ ವಿದೇಶಗಳಲ್ಲಿನ ‌ ಉದ್ಯೋಗ ಮಾರುಕಟ್ಟೆಯಲ್ಲಿ  ಭಾರೀ ಬೇಡಿಕೆ ಇದೆ. ಸ್ನಾತಕೋತ್ತರ ಅಭಿವೃದ್ಧಿ ಶಿಕ್ಷಣವು ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಪರಿಸರ ಮತ್ತು ರಾಜಕೀಯ ಶಾಸ್ತ್ರವೇ ಮೊದಲಾದ ಹಲವು ಮಾನವಿಕ ವಿಷಯಗಳೊಂದಿಗೆ ಬೆಸೆದುಕೊಂಡಿದೆ. ಹಾಗಾಗಿ  ಮಾನವಿಕ ವಿಷಯಗಳಲ್ಲಿ ಪದವಿ ಪಡೆದವರು ಈ ಬಹು ಬೇಡಿಕೆಯ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಮುಂದಾಗಬಹುದಾಗಿದೆ. 

ಅಭಿವೃದ್ಧಿಶೀಲ ದೇಶಗಳನ್ನು ಕುರಿತು ನಡೆಸುವ ಶಿಕ್ಷಣಕ್ಕೆ ಈ ವರೆಗೆ ಸಾಮಾಜಿಕ ದೃಷ್ಟಿಕೋನ ಮಾತ್ರವೇ ಇತ್ತು. ಆದರೆ 2015ರ ಸೆಪ್ಟಂಬರ್‌ 25ರಂದು ಸುಮಾರ 190 ದೇಶಗಳು ಒಗ್ಗೂಡಿ ತಮ್ಮ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿ ಸಾಧನೆಯ ಪಣ ತೊಟ್ಟು 17 ಗುರಿಗಳನ್ನು ಮತ್ತು 169 ಟಾರ್ಗೆಟ್‌ಗಳನ್ನು ಗುರುತಿಸಿಕೊಂಡವು. ಈ 190 ದೇಶಗಳು ಗುರುತಿಸಿಕೊಂಡಿರುವ ಗುರಿಗಳಲ್ಲಿ  ಬಡತನ, ಹಸಿವು, ಲಿಂಗ ಸಮಾನತೆ, ಗುಣಮಟ್ಟದ ಶಿಕ್ಷಣ, ಶುದ್ಧ ಕುಡಿಯುವ ನೀರು, ಶೌಚ ವ್ಯವಸ್ಥೆ, ಶುದ್ಧ ಇಂಧನ, ಹೊಣೆಯರಿತ ಆಹಾರ ಬಳಕೆ ಮತ್ತು ಹವಾಮಾನ ಸಂರಕ್ಷಣೆ ವಿಷಯಗಳು ಮುಖ್ಯವಾಗಿವೆ. 

ಅಂತೆಯೇ ಇವುಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಲ್ಕು ಪರಸ್ಪರ ಸಂಬಂಧಿತ ಸಂಪನ್ಮೂಲಗಳನ್ನು ಗುರುತಿಸಲಾಗಿದೆ. ಅವೆಂದರೆ  ಹಣಕಾಸು ಸಂಪನ್ಮೂಲ, ಮಾನವ ಸಂಪನ್ಮೂಲ, ತಾಂತ್ರಿಕ ಸಂಪನ್ಮೂಲ ಮತ್ತು ಎಲ್ಲ ತತ್ಸಂಬಧಿ ಸಂಸ್ಥೆಗಳನ್ನು ಒಳಗೊಳಿಸಿಕೊಳ್ಳುವ ವ್ಯವಸ್ಥೆ. ಇವುಗಳಲ್ಲಿ  ವೃತ್ತಿಪರ ಮಾನವ ಸಂಪನ್ಮೂಲ ಅತ್ಯವಶ್ಯವಾಗಿರುವುದನ್ನು ಕಂಡುಕೊಳ್ಳಲಾಗಿದೆ. 

ಹಾಗಾಗಿ  ಈ 190 ದೇಶಗಳ ಸಮಗ್ರ ಮತ್ತು ಸರ್ವತೋಮುಖ ಗುರಿಗಳನ್ನು ಸಾಧಿಸುವ ದಿಶೆಯಲ್ಲಿ “ಅಭಿವೃದ್ಧಿ ಶಿಕ್ಷಣವನ್ನು ಸಾತ್ನಕೋತ್ತರ ಮಟ್ಟದಲ್ಲಿ ದೊರಕಿಸುವ ಮೂಲಕ ವೃತ್ತಿಪರರನ್ನು ಸಿದ್ಧಪಡಿಸಬೇಕು’ ಎಂಬ ಅಗತ್ಯವನ್ನು ಕಂಡುಕೊಳ್ಳಲಾಗಿದೆ. 

Advertisement

ಈ  ಹಿನ್ನೆಲೆಯಲ್ಲಿ  ಸ್ನಾತಕೋತ್ತರ ಅಭಿವೃದ್ಧಿ ಶಿಕ್ಷಣಕ್ಕೆ  ಇಂದು ವಿಶ್ವಾದ್ಯಂತ ಮಹತ್ವವಿದೆ. ಈ ಸ್ನಾತಕೋತ್ತರ ಪದವಿ ಪಡೆದವರಿಗೆ ವಿವಿಧ ಸ್ತರಗಳಲ್ಲಿ ವೃತ್ತಿಪರತೆಯನ್ನು ತೋರುವ ಸದವಕಾಶವಿದೆ. ವಿಶ್ವ ಉದ್ಯೋಗ ಮಾರುಕಟ್ಟೆಯಲ್ಲಿ  ಈ  ವೃತ್ತಿಪರರಿಗೆ ಇಂದು ವಿಶೇಷವಾದ  ಘನತೆ, ಗೌರವ ಇದೆ ಎಂದು ಅಜೀಂ ಪ್ರೇಮ್‌ಜಿ ಸ್ಕೂಲ್‌ ಆಫ್ ಡೆವಲಪ್‌ಮೆಂಟ್‌ನ ಪ್ರೊಫೆಸರ್‌ ಡಾ. ಅಶೋಕ್‌ ಸರ್ಕಾರ್‌ ಅಭಿಪ್ರಾಯಪಡುತ್ತಾರೆ. 

ಕಾರಣಗಳು:
*ಮೊದಲನೆಯದಾಗಿ ಆರ್ಥಿಕ, ಸಾಮಾಜಿಕ, ಪರಿಸರ ವಿಜ್ಞಾನ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ವಿವಿಧ ಸ್ತರಗಳ ಜ್ಞಾನದ ಅಭಿವೃದ್ಧಿಯನ್ನು ಮಾಡಿಕೊಳ್ಳಬೇಕಾಗಿದೆ, ಇವೇ ಪ್ರಮುಖ ವಿಶ್ಲೇಷಕ ವಿಷಯಗಳಗಾಗಿವೆ. ಹಾಗೂ ಅಭಿವೃದ್ಧಿಯ ಮತ್ತೊಂದು ಮಜಲಾಗಿದೆ.

1)ಆರೋಗ್ಯ, ಪೌಷ್ಠಿಕಾಂಶ, ಸಣ್ಣ ಆರ್ಥಿಕತೆ, ಲಿಂಗ, ಜೀವಿಸುವುದು, ಉಳಿಕೆ ಹಾಗೂ ಆಡಳಿತ ಇವು ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಮಧ್ಯಪ್ರವೇಶಿಸುವ ಮೂಲಕ ಅಭಿವೃದ್ಧಿಪಡಿಸಬಹುದಾಗಿದೆ.

2) ಕೊನೆಯದಾಗಿ, ಒಂದು ವೇಳೆ ರಾಜ್ಯ ಮತ್ತು ರಾಜ್ಯೇತರವಾಗಿ ನಮ್ಮ ಜ್ಞಾನದ ಹಾಗೂ ಕೌಶಲ್ಯಾಡಳಿತದ ಮೂಲಕ ಗುರಿಯನ್ನು ಸಾಧಿಸಬಹುದಾಗಿದೆ.

ಎರಡನೇಯದಾಗಿ, ಈಗ ಅಭಿವೃದ್ಧಿಯನ್ನು ಹಲವು ರೀತಿಯಲ್ಲಿ ಕೈಗೆತ್ತಿಕೊಳ್ಳಬಹುದು, ಅದು ಸ್ಥಳ ಮತ್ತು ಶ್ರೇಣಿಗಳ ಆಧಾರದಲ್ಲಿ, ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ. ನೀತಿ, ಕಾರ್ಯಸೂಚಿ, ಸ್ಥಳ ಬದಲಾವಣೆ, ಪ್ರಚಾರ, ಪ್ರತಿಷ್ಠಾನಗಳ ರೂಪ ಕೊಡುವ ಮೂಲಕ ಅಭಿವೃದ್ಧಿ ಮಾಡಬಹುದಾಗಿದೆ.

1)ಅಭಿವೃದ್ಧಿ ವೃತ್ತಿಪರರನ್ನು ಸ್ಥಳೀಯ ಎನ್ ಜಿಒಗಳು, ಸಿಬಿಓಎಸ್, ರಾಷ್ಟ್ರಮಟ್ಟದ ಸಿಎಸ್ ಓ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಹೀರಾತುಗಳ ಮೂಲಕ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

2)ಇವರ ಪ್ರಮುಖ ಪಾತ್ರ ಕಮ್ಯೂನಿಟಿ ನಡವಳಿಕೆಯನ್ನು ಬದಲಾಯಿಸುವುದು, ಜಿಲ್ಲಾಮಟ್ಟದ ಕಾರ್ಯಕ್ರಮಗಳ ಮೇಲೆ ನಿಗಾ ಇಡುವ ನೀತಿಯನ್ನು ವಿಶ್ಲೇಷಿಸುವುದು, ಕಾರ್ಯಕ್ರಮಗಳ ರೂಪರೇಷೆ, ಮೌಲ್ಯಮಾಪನ.

ಮೂರರನೇಯದಾಗಿ, ಒಂದು ಕ್ಷೇತ್ರ ಹೆಚ್ಚು ವೃತ್ತಿಪರವಾಗುವುದು ದಕ್ಷ ಅಭಿವೃದ್ಧಿ ಕೆಲಸವನ್ನು ಒದಗಿಸುವ ಮೂಲಕ ಸಾಧ್ಯವಾಗುತ್ತದೆ. ವ್ಯಕ್ತಿಗಳು ತಮ್ಮ ಸ್ಥಾನಗಳ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮೇಲಕ್ಕೇರಲು ಸಾಧ್ಯ. ನಿಜಕ್ಕೂ ಅಭಿವೃದ್ಧಿ ಕ್ಷೇತ್ರಗಳು ಜೀವನೋಪಾಯಕ್ಕಾಗಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾದ ಅವಕಾಶವನ್ನು ಒದಗಿಸುತ್ತಿವೆ. ಈ ಬಗ್ಗೆ ಹಲವಾರು ಜನರು ಸ್ವತಃ ಅನುಭವಿಸಿದ್ದಾರೆ. ಉತ್ತಮ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳಬೇಡಿ, ಭಾರತದಲ್ಲಿ ಎಸ್ ಡಿಜಿ ಗುರಿ ಸಾಧಿಸಿದೆ. ಇದು ಹಲವು ರಾಷ್ಟ್ರಗಳಲ್ಲಿಯೂ ಮುಂದುವರಿದಿದೆ. ಅಲ್ಲಿ ಇಂತಹ ಸಾವಿರಾರು ಅಭಿವೃದ್ಧಿ ವೃತ್ತಿಪರರ ಅವಶ್ಯಕತೆ ಇದೆ.

ಇಂದು ಭಾರತದಲ್ಲಿ ಅಭಿವೃದ್ಧಿ ಶಿಕ್ಷಣ ನೀಡುವ ಹಲವು ವಿಶ್ವವಿದ್ಯಾಲಯಗಳಿವೆ. ಕೆಲವು ಆಯ್ದ ಕೌಶಲ್ಯವನ್ನು ಮತ್ತು ಜ್ಞಾನವನ್ನು ಕೇಂದ್ರೀಕರಿಸಿ ಶಿಕ್ಷಣವನ್ನು ನೀಡುತ್ತಿವೆ. ಅದೇ ರೀತಿ ಎಂಎ ಅಭಿವೃದ್ಧಿ ಶಿಕ್ಷಣ ಕೂಡಾ ಇದೆ. ಹೀಗೆ ವಿದ್ಯಾರ್ಥಿಗಳು ತಮ್ಮ ಜೀವನ ಮತ್ತು ಬದುಕಿನಲ್ಲಿ ಉತ್ತಮ ಶಿಕ್ಷಣದ ಮೂಲಕ ವಿವಿಧ ಸಂಸ್ಥೆಗಳಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸುವ ಸಾಮರ್ಥ್ಯ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next