Advertisement
ಡಿಜಿಟಲ್ ಇಂಡಿಯಾ ಕನಸಿನ ಇಂದಿನ ಸಮಾಜದಲ್ಲಿಯೇ ಮೂಲ ಆದಿವಾಸಿ ಜನಾಂಗಗಳು ಆದಿಕಾಲದ ನಿಸ್ತೇಜ ಸ್ಥಿತಿ ಯಲ್ಲೇ ಬದುಕು ಸವೆಸುತ್ತಿದ್ದಾರೆ. ಪೌಷ್ಟಿಕ ಆಹಾರದ ಕೊರತೆ ಮತ್ತು ದುಷcಟಗಳಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವ ಅಸಮಾಧಾನವಿದೆ.
Related Articles
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಆದಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸರಕಾರ ಪೌಷ್ಟಿಕ ಆಹಾರವನ್ನು ನೀಡುತ್ತಿದೆ ಎಂದು ಜಿಲ್ಲಾ ಗಿರಿಜನ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
Advertisement
ಪೌಷ್ಟಿಕ ಆಹಾರ ಯೋಜನೆ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಮೈಸೂರು, ಕೊಡಗು, ಚಾಮರಾಜನಗರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಮೂಲ ನಿವಾಸಿ ಪಂಗಡವಾದ ಕೊರಗ, ಜೇನು ಕುರುಬ ಹಾಗೂ ಇತರೆ ಪರಿಶಿಷ್ಟ ಪಂಗಡವಾದ ಕಾಡು ಕುರುಬ, ಸೋಲಿಗ, ಯರವ, ಮಲೆಕುಡಿಯ ಮತ್ತು ಸಿದ್ಧಿ ಜನಾಂಗದವರಿಗೆ ಮಳೆಗಾಲದ ಅವಧಿಯಲ್ಲಿ 6 ತಿಂಗಳವರೆಗೆ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಆದಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವುದರೊಂದಿಗೆ ಮನೆಗಳು° ನಿರ್ಮಿಸಿ ಕೊಡಲಾಗುತ್ತದೆೆ. ತಟ್ಟೆಕೆರೆ, ಕೊಡಂಗೆ ಪ್ರದೇಶವನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆರೋಗ್ಯ ಸೌಲಭ್ಯಗಳನ್ನು ನೀಡ ಲಾಗುತ್ತಿದ್ದು, ಇಡೀ ಜಿಲ್ಲೆಯಲ್ಲಿ ಆದಿವಾಸಿ ಮಕ್ಕಳಿಗಾಗಿ 11 ಆಶ್ರಮ ಶಾಲೆ ಮತ್ತು 8 ವಸತಿ ನಿಲಯಗಳಿವೆ. ಬಾಳುಗೋಡು ವಿನಲ್ಲಿ ಮೊರಾರ್ಜಿ ವಸತಿ ಶಾಲೆಗಳಿವೆ. ಆಹಾರ ಪದಾರ್ಥದ ಪ್ರಮಾಣ
ಮಾಸಿಕ ಅಕ್ಕಿ, ರಾಗಿ, ಗೋಧಿ ತಲಾ 15 ಕೆ.ಜಿ., ತೊಗರಿ ಬೇಳೆ, ಹೆಸರು ಕಾಳು, ಹುರುಳಿಕಾಳು, ಅಲಸಂಡೆಕಾಳು ತಲಾ 5 ಕೆ.ಜಿ., ಅಡುಗೆ ಎಣ್ಣೆ 2ಲೀ, ಸಕ್ಕರೆ, ಬೆಲ್ಲ ತಲಾ 4 ಕೆ.ಜಿ., ಮೊಟ್ಟೆ ತಿಂಗಳಿಗೆ 45, ನಂದಿನಿ ತುಪ್ಪ 1 ಕೆ.ಜಿ. ನೀಡಲಾಗುತ್ತಿದೆ. ಆದಿವಾಸಿಗಳ ಉಪಯೋಜನೆ ವಿಶೇಷ ಕೇಂದ್ರೀಯ ಸಹಾಯಧನದಡಿಯಲ್ಲಿ ವಿಶೇಷ ಆರ್ಥಿಕ ಸೌಲಭ್ಯಗಳು ಲಭ್ಯವಿದೆ. ಈ ಯೋಜನೆಯಡಿಯಲ್ಲಿ ಸಂವಿಧಾನ ಅನುಚ್ಛೇದನ 275(1) ಅಡಿಯಲ್ಲಿ ಪರಿಶಿಷ್ಠ ಪಂಗಡದ ಕಾಲನಿಗಳಲ್ಲಿ ಮೂಲ
ಸೌಕರ್ಯಗಳಾದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಕುಡಿ ಯುವ ನೀರು, ಸಮುದಾಯ ಭವನ ಮುಂತಾದವು ಗಳನ್ನು ಒದಗಿಸಲಾಗುತ್ತಿದೆ. ಮೂಲ ಆದಿವಾಸಿ ಜನಾಂಗದ ಅಭಿವೃದ್ಧಿ ಯೋಜನೆ
ಮೂಲ ನಿವಾಸಿ ಜೇನು ಕುರುಬ ಜನಾಂಗದವರಿಗೆ ಮನೆಗಳ ನಿರ್ಮಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ನೀರಾವರಿ ಸೌಲಭ್ಯ, ಸೋಲಾರ್ ಬೀದಿ ದೀಪ ಮುಂತಾದ ಕಾಮಗಾರಿಗಳು ನಡೆಯುತ್ತದೆ.
ಆರ್ಥಿಕೋನ್ನತಿ ಕಾರ್ಯಕ್ರಮಗಳಾದ ಹಸು, ಹಂದಿ ಮರಿ ವಿತರಣೆ ಮತ್ತು ಸಾಕಾಣಿಕೆ ತರಬೇತಿಗಳನ್ನು ನೀಡಲಾಗುವುದು. ಯರವ, ಸೋಲಿಗ ಜನಾಂಗದ ಅಭಿವೃದ್ಧಿ ಯೋಜನೆ
ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪರಿಶಿಷ್ಟ ಪಂಗಡಗಳಾದ ಎರವ ಮತ್ತು ಸೋಲಿಗ ಜನಾಂಗದವರಿಗೆ ಮನೆ ನಿರ್ಮಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಆರೋಗ್ಯ ಕಾರ್ಯಕ್ರಮ ಹಾಗೂ ಸ್ವಯಂ ಉದ್ಯೋಗ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ. ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿವೇಶನ ಒದಗಿಸುವುದು ಹಾಗೂ ವಸತಿ ನಿರ್ಮಾಣ ಮಾಡಿಕೊಡಲಾಗುತ್ತದೆ. ಅರಣ್ಯ ಹಕ್ಕು ಕಾಯ್ದೆಗಳು
ಅನುಸೂಚಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006 ಮತ್ತು ನಿಯಮಗಳು 2008 ಹಾಗೂ ತಿದ್ದು ಪಡಿ ನಿಯಮ 2012ರ ಅನ್ವಯ ಅರಣ್ಯದಲ್ಲಿ ವಾಸಿಸುವ ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಪತ್ರ ನೀಡಲಾಗುತ್ತದೆ. ಹಲವು ಮೂಲ ಸೌಲಭ್ಯ
ಅರಣ್ಯ ಹಕ್ಕು ಪತ್ರ ಪಡೆದ ಹಾಗೂ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ಮನೆಗಳ ನಿರ್ಮಾಣ, ಮನೆಗಳ ದುರಸ್ಥಿ, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಕುಡಿಯುವ ನೀರು, ಸಾಮುದಾಯ ಭವನ, ಸೋಲಾರ್ ಬೀದಿ ದೀಪ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ ಎಂದು ಅಧಿಕಾರಿ ಪ್ರಕಾಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.