Advertisement
ಕೆರೆ ಅಭಿವೃದ್ದಿಯ ಜೊತೆಗೆ, ಕೆರೆಗೆ ನೀರು ಹರಿದು ಬರುವ ಕಾಲುವೆ, ಹಳ್ಳ, ನಾಲೆಗಳನ್ನು ಸಹ ದುರಸ್ತಿ ಕೈಗೊಳ್ಳಲಾಗುವುದು. ಅಗತ್ಯ ವಿರುವೆಡೆ ಜೆಕ್ ಡ್ಯಾಂಗಳನ್ನು ನಿರ್ಮಿಸಲಾಗುವುದು. ಕೆರೆ ಯಲ್ಲಿ ನೀರು ನಿಂತರೆ ಪ್ರಾಣಿ-ಪಕ್ಷಿಗಳಿಗೆ ನೀರು ಸಿಗಲಿದೆ. ಅಂತರ್ಜಲ ಮಟ್ಟವು ಸುಧಾರಿಸಲಿದೆ. ಕಾರ್ಯಕ್ರಮದ ಯಶಸ್ವಿಗೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಹಯೋಗ ಪಡೆದು ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಜಲಾಮೃತ ಕಾರ್ಯಕ್ರಮದ ಯಶಸ್ಸಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಸೇರಿದಂತೆ ಸಾರ್ವಜನಿಕರು ಸಹಕರಿಸುತ್ತಿದ್ದು ತಾಲೂಕಿನಲ್ಲಿ ಈಗಾಗಲೇ 10 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಗಳು ಪ್ರಗತಿಯಲ್ಲಿವೆ ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಯಶಂಕರ್ ಮಾತನಾಡಿ, ಗ್ರಾಪಂನಲ್ಲಿ ಸಮುದಾಯ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ರಸ್ತೆ, ಚರಂಡಿ ಕಾಲುವೆಗಳ ಮರು ನಿರ್ಮಾಣ ಸೇರಿದಂತೆ ಕೆರೆ-ಕುಂಟೆಗಳ ಅಭಿವೃದ್ಧಿಗೆ ಪ್ರಥಮ ಆಧ್ಯತೆ ನೀಡಿದೆ. ಜಲಾಮೃತ ವರ್ಷ 2019 ರ ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ಬನ್ನಿಕುಪ್ಪೆ ಗ್ರಾಮದ ದೊಡ್ಡಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಜಲಮರು ಪೂರ್ಣ ಯೋಜನೆ ಮುಖಾಂತರ ನರೇಗಾ ಯೋಜನೆ ಯಶಸ್ಸಿಗೆ ಗ್ರಾಪಂ ಮುಂದಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಭಾಗ್ಯ ಚಂದ್ರಗಿರಿ, ಸದಸ್ಯ ಶಂಕರ್, ಬಿಲ್‌ಕಲೆಕ್ಟರ್ ಗಿರೀಶ್, ಮುಖಂಡರಾದ ಕೆಂಪೇಗೌಡ, ವೆಂಕಟೇಶ್, ಪಾಪಣ್ಣ ಹಾಜರಿದ್ದರು. Advertisement
ಗ್ರಾಮ ಪಂಚಾಯ್ತಿ ಗೊಂದು ಕೆರೆ ಅಭಿವೃದಿ
01:04 PM Jul 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.