Advertisement

ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿ ಅಭಿವೃದ್ಧಿ: ಗಡ್ಕರಿ ಭೇಟಿಯಾದ ಡಾ.ನಾರಾಯಣಗೌಡ

03:10 PM Apr 20, 2022 | Team Udayavani |

ದೆಹಲಿ: ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು  ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದನಾರಾಯಣಗೌಡ ಅವರು, ಶ್ರೀರಂಗಪಟ್ಟಣ- ಕೆಆರ್ ಪೇಟೆ- ಚನ್ನರಾಯಪಟ್ಟಣ- ಅರಸೀಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಮನವಿ ಮಾಡಿದರು. ಸಚಿವ ಡಾ.ನಾರಾಯಣಗೌಡ ಅವರ ಮನವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಸಚಿವ ಡಾ.ನಾರಾಯಣಗೌಡ ಮಾತನಾಡಿ, ಶ್ರೀರಂಗಪಟ್ಟಣ- ಕೆಆರ್ ಪೇಟೆ- ಚನ್ನರಾಯಪಟ್ಟಣ- ಅರಸೀಕೆರೆ ರಸ್ತೆ ಶಿವಮೊಗ್ಗ, ಮೈಸೂರು ನಗರಗಳಿಗೆ ಸಂಪರ್ಕ ಕಲ್ಪಿಸಲಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದ್ದೇನೆ. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಭಾರತ್ ಮಾಲಾ -2 ಯೋಜನೆಯಡಿ ಇದನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಮಂಡ್ಯ, ಹಾಸನ, ಶಿವಮೊಗ್ಗ,ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂಓದಿ:ಸರಕಾರದ ಶೇ.40 ಕಮಿಷನ್ ಲಂಚ ಹಾಗೂ ಮಂಚದ ಬಗ್ಗೆ ಪ್ರಧಾನಿ ಮಾತನಾಡಲಿ: ಮಾಜಿ ಸಂಸದ ಶಿವರಾಮಗೌಡ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕದ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಅವರ ಪರ್ವ ಕಾದಂಬರಿ ಇಂಗ್ಲೀಷ್ ಅನುವಾದಿತ ಪ್ರತಿಯನ್ನು ನಾರಾಯಣಗೌಡ ಅವರು ಉಡುಗೊರೆಯಾಗಿ ನೀಡಿದರು. ಈ ವೇಳೆ ಕುತೂಹಲಭರಿತರಾಗಿ ಕಾದಂಬರಿ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವರು, ಇದನ್ನು ಖಂಡಿತವಾಗಿ ಓದುತ್ತೇನೆ ಎಂದು ಹೇಳಿದ್ದಾರೆ.

Advertisement

ಈ ವೇಳೆ ನಾರಾಯಣಗೌಡ ಅವರ ಆಪ್ತ ಕಾರ್ಯದರ್ಶಿ ಹೆಚ್ ಜಿ ಪ್ರಭಾಕರ್ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next