Advertisement
2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರೆಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ3.70ಕೋಟಿ ರೂ., ತಡಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1.45 ಕೋಟಿ ರೂ . ಹಾಗೂ ದೊಡ್ಡಪಾಳ್ಯದಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು2.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
Related Articles
Advertisement
ಶಿಕ್ಷಕರ ಕೊರತೆ: ತಡಗವಾಡಿ ಗ್ರಾಮದ ಶಾಲೆಗೆ ಶಿಕ್ಷಕರಕೊರತೆ ಇದೆ. 5 ಮಂದಿ ಇದ್ದರು. ಅದರಲ್ಲಿ ಇಬ್ಬರುಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಶಾಲೆಗಳು ತೆರೆಯದಹಿ ನ್ನೆಲೆಯಲ್ಲಿ ತೊಂದರೆಯಾಗಿಲ್ಲ.ಇಲ್ಲದಿದ್ದರೆತೊಂ ದರೆಯಾಗುತ್ತಿತ್ತು. ಅರೆಕೆರೆ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆ ಶಿಕ್ಷಕರಕೊರತೆ ಇಲ್ಲ. ಮೂರು ಶಾಲೆಗಳಲ್ಲಿ ಗುಣಮಟ್ಟದಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಅದರಂತೆ ಅರೆಕೆರೆಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.
ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ದೊಡ್ಡಪಾಳ್ಯ ಹಾಗೂ ತಡಗವಾಡಿಶಾಲೆಗಳಿಗೆ ಕ್ರೀಡಾಂಗಣದ ಕೊರತೆಇದೆ. ಇದರಿಂದ ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ತೊಂದರೆಯಾಗಿದೆ. ಕ್ರೀಡಾಂಗಣ ಇದ್ದರೂ ಅಭಿವೃದ್ಧಿಯಾಗಿಲ್ಲ. ತಡಗವಾಡಿ ಶಾಲೆಗೆದೈಹಿಕ ಶಿಕ್ಷಕರಿಲ್ಲ. ದೊಡ್ಡಪಾಳ್ಯ ಶಾಲೆಗೆದೈಹಿಕ ಶಿಕ್ಷಕರಿದ್ದರೂ ಕ್ರೀಡಾಂಗಣವಿಲ್ಲ. ಅರಕೆರೆಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಂಥಾಲಯವಿದ್ದರೆ, ತಡಗವಾಡಿ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆಯಾವುದೇ ಗ್ರಂಥಾಲಯವಿಲ್ಲ. ಈ ಎರಡು ಶಾಲೆಗಳಿಗೆ ಗ್ರಂಥಾಲಯ ಅಗತ್ಯವಾಗಿದೆ.
ಎಸ್‌ಡಿಎಂಸಿ ಸಕ್ರಿಯ: ಮೂರು ಶಾಲೆಗಳಲ್ಲಿ ಎಸ್ ಡಿಎಂಸಿ ಇದ್ದು, ಸಕ್ರಿಯವಾಗಿವೆ. ಶಾಲೆಯ ಮಕ್ಕಳ ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.ಮೂರು ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಉತ್ತಮವಾಗಿದೆ. ಆದರೆ, ಮಕ್ಕಳ ಊಟ ತಯಾರಿಕೆಗೆ ಅಡುಗೆಗೆ ಪ್ರತ್ಯೇಕ ಕೊಠಡಿಗಳ ಅಗತ್ಯವಿದೆ. ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.
ಮಾದರಿ ಶಾಲೆಯಾಗಿ ಅಭಿವೃದ್ಧಿಗೆ ಕ್ರಮ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮೂರುಶಾಲೆಗಳನ್ನು ಅಭಿವೃದ್ಧಿಪಡಿಸಲು ಅನುದಾನದ ಅಂದಾಜು ಮೊತ್ತದಪಟ್ಟಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಅನುದಾನ ಮಂಜೂರು ಮಾಡಿದರೆ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮೂರು ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಶಾಲೆ ಮಾಡಲು ಪಣತೊಟ್ಟಿದ್ದೇವೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.
–ಎಚ್.ಶಿವರಾಜು