Advertisement

ನರೇಗಾ ಮೂಲಕ ಕೆರೆಗಳ ಅಭಿವೃದ್ಧಿ: ಶಾಸಕ

06:18 AM May 21, 2020 | Lakshmi GovindaRaj |

ಚನ್ನರಾಯಪಟ್ಟಣ/ಬಾಗೂರು: ಲಾಕ್‌ಡೌನ್‌ ವೇಳೆ ಕೆಲಸ ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ಮತ್ತು ರೈತ ವರ್ಗಕ್ಕೆ ನೆರವಾಗುವ ಸಲುವಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ)  ಮೂಲಕ 53.76 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

Advertisement

ತಾಲೂಕಿನ ಬಾಗೂರು ಹೋಬಳಿ ಕೆ.ದಾಸಾಪುರ ಗ್ರಾಮದ ಕೆರೆ ಅಭಿವೃದ್ಧಿಗೆ ನರೇಗಾ  ಜನೆಯಡಿ  ಕೆರೆ ಹೂಳು ತೆಗೆಯವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಲಸಂವರ್ಧನೆ, ಅರಣ್ಯೀ ಕರಣ, ಕೃಷಿ ಭೂಮಿಗೆ ಬದು ನಿರ್ಮಾಣ, ಕೃಷಿ ಹೊಂಡ ಹಾಗೂ ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದ್ದು,  17 ಲಕ್ಷ ಮಾನವ ದಿನಗಳು ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ರೈತರು ಹಾಗೂ ಕೂಲಿ ಕಾರ್ಮಿಕರು ಈ ಯೋಜ ನೆಯ ಲಾಭ ಪಡೆದುಕೊಳ್ಳಬೇಕು. ತಾಲೂಕಿನ ನೂರಾರು ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿ ಕೊಂಡಿದ್ದು,  ಸದ್ಯ ಈಗಾಗಲೇ 80 ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ದಾಸಾಪುರ ಕೆರೆ 110 ಎಕರೆ ಸ್ತೀರ್ಣ ಹೊಂದಿದ್ದು 5 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ  ಎಂದರು.

ಸರ್ಕಾರವು ದಿನವೊಂದಕ್ಕೆ ಒಬ್ಬ ಕಾರ್ಮಿಕನಿಗೆ 275 ರೂ. ಕೂಲಿಯಂತೆ 100 ದಿನಗಳು ಕೆಲಸ ನೀಡಲಿದ್ದು ಒಟ್ಟು 27,500 ರೂ. ಹಣ ಸಿಗಲಿದೆ. ಇದರಿಂದ ಪ್ರತಿಯೊಬ್ಬ ಕಾರ್ಮಿಕನ ಬದುಕು ಹಸನಾಗಲಿದೆ.   ಸರ್ಕಾರದ ಗಮನ  ಸೆಳೆದು ಹೆಚ್ಚುವರಿಯಾಗಿ ನರೇಗಾ ಯೋಜನೆಯನ್ನು ತಾಲೂಕಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಕೆಂಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next