Advertisement
ನಿಪ್ಪಾಣಿ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಅಕ್ಕೋಳದ ಸರ್ಕಾರಿಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಸೌಂದಲಗಾ ಸರ್ಕಾರಿ ಹಿರಿಯ ಪ್ರಾಥಮಿಕಕನ್ನಡ ಶಾಲೆ ಹೀಗೆ ಮೂರು ಶಾಲೆಗಳನ್ನುದತ್ತು ಪಡೆದಿದ್ದಾರೆ. ಈ ಶಾಲೆಗಳಲ್ಲಿ ಆಗಬೇಕಾದ ಮೂಲಸೌಲಭ್ಯಗಳ ಕುರಿತುಅಂದಾಜು 2.40 ಕೋಟಿ ರೂ. ವೆಚ್ಚದಯೋಜನೆ ಸಿದ್ಧಪಡಿಸಿದ್ದಾರೆ.
Related Articles
Advertisement
ನಿಪ್ಪಾಣಿ ತಾಲೂಕಿನಲ್ಲಿ ದೊಡ್ಡ ಗ್ರಾಮವಾದ ಅಕ್ಕೋಳ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕಕನ್ನಡ ಶಾಲೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಶಾಲೆಯಲ್ಲಿ 1ರಿಂದ 8ತರಗತಿಯವರೆಗೆ ಸುಮಾರು 300 ಮಕ್ಕಳು ಅಧ್ಯಯನ ಮಾಡುತ್ತಾರೆ.ಶಾಲೆಗೆ ಪ್ರಮುಖವಾಗಿ ಮಕ್ಕಳಿಗೆಆಟದ ಮೈದಾನ, ನಾಲ್ಕು ಶೌಚಾಲಯ,ಎರಡು ಹೊಸ ಕಟ್ಟಡ, ಕಾಂಪೌಂಡ್‌ಬೇಡಿಕೆ ಸೇರಿ ಒಟ್ಟು 81.40 ಲಕ್ಷ ರೂ. ಯೋಜನೆ ಸಿದ್ಧಪಡಿಸಿದ್ದಾರೆ.
ಅಕ್ಕೋಳ ಶಾಲೆ ಅಭಿವೃದ್ಧಿ ಪಡಿಸಲು ಸಚಿವರು ಮನಸ್ಸು ಮಾಡಿದ್ದು ಸಂತಸ ತಂದಿದೆ. ಶಾಲೆಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಾಗೂಸಚಿವರಿಗೆ ಮನವರಿಕೆ ಮಾಡಲಾಗಿದೆ. ಶೀಘ್ರವಾಗಿ ಅಭಿವೃದ್ಧಿ ಕೆಲಸಗಳು ಆರಂಭವಾಗಬೇಕು. – ಬಿ.ಜಿ. ಲಠ್ಠೆ, ಮುಖ್ಯಾಧ್ಯಾಪಕ
ಕರ್ನಾಟಕ ಪಬ್ಲಿಕ್ ಸ್ಕೂಲ್, ನಿಪ್ಪಾಣಿ : ನೂತನ ತಾಲೂಕಾ ಕೇಂದ್ರವಾದ ನಿಪ್ಪಾಣಿ ನಗರದಲ್ಲಿ ಆರಂಭವಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮೂಲಭೂತ ಸೌಲಭ್ಯ ಮರೀಚಿಕೆಯಾಗಿರುವುದು ಕಂಡು ಬಂದಿದೆ. ಇತ್ತೀಚೆಗೆ ಆರಂಭವಾಗಿರುವ ಶಾಲೆಯಲ್ಲಿ ಸುತ್ತಮುತ್ತ ಕಾಂಪೌಂಡ್ ನಿರ್ಮಾಣವಾಗಬೇಕಿದೆ. 1ರಿಂದ 10ನೇ ತರಗತಿವರೆಗೆ 456 ಮಕ್ಕಳ ಹಾಜರಾತಿ ಇದ್ದು, ಹೆಚ್ಚುವರಿ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್, ಕಾಂಪೌಂಡ್, ಗ್ರಂಥಾಲಯ ಹೀಗೆ ಸೌಲಭ್ಯಗಳ ಕಲ್ಪಿಸಲು ಸುಮಾರು 81.40 ಲಕ್ಷ ರೂ. ಖರ್ಚು ಮಾಡಲು ನಿರ್ಧರಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಸೌಂದಲಗಾ : 1ರಿಂದ 8ನೇ ತರಗತಿಯವರೆಗೆ 278 ಮಕ್ಕಳು ದಾಖಲಾಗಿದ್ದು,ಸೌಂದಲಗಾ ಗಡಿ ಗ್ರಾಮವಾಗಿದ್ದರಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿ, ಗ್ರಂಥಾಲಯ, ಲ್ಯಾಬ್, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಲು 81.40 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿ ಮಾಡಿರುವ ಶಾಲೆ ದತ್ತು ಯೋಜನೆ ಯಶಸ್ವಿಯಾಗಲು ತಕ್ಷಣಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು. ಸಚಿವೆ ಶಶಿಕಲಾ ಜೊಲ್ಲೆ ವಿಶೇಷ ಪ್ರಯತ್ನದಿಂದ ನಮ್ಮ ಶಾಲೆ ಅಭಿವೃದ್ಧಿಯಾಗುವುದು ಗಡಿ ಭಾಗದ ಸರ್ಕಾರಿ ಶಾಲೆ ಬೆಳವಣಿಗೆಗೆ ಸಹಕಾರಿಯಾಗಲಿದೆ. –ಎ.ಕೆ. ಪನ್ನೂರೆ, ಮುಖ್ಯಾಧ್ಯಾಪಕ
ನಾಲ್ಕೈದು ವರ್ಷದಲ್ಲಿ ನಿಪ್ಪಾಣಿ ಕ್ಷೇತ್ರದ ಸರ್ಕಾರಿ ಶಾಲೆಗಳ ಪ್ರಗತಿಗೆ ವಿಶೇಷ ಕಾಳಜಿವಹಿಸಿದ್ದು, ಶಾಲೆಗೆ ಬೇಕಾದ ಮೂಲಸೌಲಭ್ಯ ಒದಗಿಸಲು ಪ್ರಯತ್ನ ಮಾಡಲಾಗಿದೆ. ಈಗ ರಾಜ್ಯ ಸರ್ಕಾರದ ಆದೇಶನ್ವಯ ಮೂರು ಶಾಲೆ ದತ್ತು ಪಡೆದುಕೊಂಡು ಅಲ್ಲಿಆಗಬೇಕಾದ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ. ಗಡಿ ಭಾಗದಲ್ಲಿಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. – ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ
-ಮಹಾದೇವ ಪೂಜೇರಿ