Advertisement
ಇತಿಹಾಸ: ಆಂಗ್ಲರ ಆಳ್ವಿಕೆಯ ವೇಳೆ ಬ್ರಿಟೀಷ್ ಅಧಿಕಾರಿಗಳು ತಂಗಲು ಒಂದು ಕೊಠಡಿ ಮತ್ತು ಪ್ರಾರ್ಥನಾ ಮಂದಿರ ನಿರ್ಮಿಸಿಕೊಂಡಿದ್ದರು. 1893ರಲ್ಲಿ ಇದೇ ಕಟ್ಟಡದಲ್ಲಿ ದಿ ವೆಸ್ಲಿಯನ್‌ನ ಮಿಷನ್ ಏಡೆಡ್ ಇಂಗ್ಲಿಷ್ ಸ್ಕೂಲ್ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿತ್ತು. 1924ರಲ್ಲಿ ಈ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಿ ವೆಸ್ಲಿಯನ್ ಮಿಡಲ್ ಸ್ಕೂಲ್ ಎಂದು ಮರು ನಾಮಕರಣದೊಂದಿಗೆ ಮುಂದುವರಿಯಿತು.
Related Articles
Advertisement
ದುರಸ್ತಿಗೆ ಅವಕಾಶವಿಲ್ಲದ ಕಾರಣ ಕಟ್ಟಡವನ್ನು ಕೆಡವಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಗಮನ ಹರಿಸಿದ್ದ ಶಾಸಕರುಗಳಾದ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಂ.ಎಲ್.ಸಿ ಸಿ.ಎಂ.ಲಿಂಗಪ್ಪ, ತಾಪಂ ಅಧ್ಯಕ್ಷರಾಗಿದ್ದ ಗಾಣಕಲ್ ನಟರಾಜ್ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಮನವೊಲಿಸಿದ್ದರಿಂದ ಕಂಪನಿಯ ಸಿ.ಎಸ್.ಆರ್. ನಿಧಿಯಿಂದ 4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡುತ್ತಿದೆ. ಸಿ.ಎಸ್.ಆರ್. ನಿಧಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯೂ ಒಂದೇ ಒಂದು ಯೋಜನೆಗೆ ಇಷ್ಟು ದೊಡ್ಡ ಮೊತ್ತ ವಿನಿಯೋಗಿಸುತ್ತಿರುವುದು ಇದು125 ವರ್ಷಗಳ ಇತಿಹಾಸ ಹೊಂದಿರುವ ರಾಮನಗರದ ಜಿಕೆಬಿಎಂಎಸ್ ಕನ್ನಡ ಮಾಧ್ಯಮ ಶಾಲೆ ಕಟ್ಟಡ ಶಿಥಿಲಗೊಂಡಿದ್ದ ಬಗ್ಗೆ ಈ ಹಿಂದೆ “ಉದಯವಾಣಿ’ ಪತ್ರಿಕೆ ಗಮನ ಸೆಳೆದಿತ್ತು.
ದಿಗ್ಗಜರು ಓದಿದ ಶಾಲೆ : ಹಳೇ ಕಾಲದ ಚರ್ಚ್ ಮಾದರಿತಲ್ಲೇ ಗೋಚರಿಸುತ್ತಿದ್ದ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಮಾಜಿ ಸಿಎಂ ದಿ.ಕೆಂಗಲ್ ಹನುಮಂತಯ್ಯ, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದ ಸಿ.ಡಿ.ನರಸಿಂಹಯ್ಯ, ಮಾಜಿ ಐಎಎಸ್ ಅಧಿಕಾರಿ ದಿ.ಬಿ.ಪಾರ್ಥ ಸಾರಥಿ, ಜಿ.ವಿ.ಕೆ.ರಾವ್ ಮುಂತಾದ ಖ್ಯಾತನಾಮರು ಈ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ.
ಪೋಷಕರು ಖಾಸಗಿ ಶಾಲೆ ವ್ಯಾಮೋಹ ಬಿಡಲಿ : 125 ವರ್ಷಗಳ ಇತಿಹಾಸ ಹೊಂದಿರುವ ರಾಮನಗರದ ಜಿಕೆಬಿಎಂಎಸ್ ಕನ್ನಡ ಮಾಧ್ಯಮ ಶಾಲೆ ಕಟ್ಟಡ ಶಿಥಿಲಗೊಂಡಿದ್ದ ಬಗ್ಗೆ ಈ ಹಿಂದೆ “ಉದಯವಾಣಿ’ ಪತ್ರಿಕೆ ಗಮನ ಸೆಳೆದಿತ್ತು. ನಾನು ಆ ಕ್ಷೇತ್ರದ ಶಾಸಕನಾಗಿ ಶಾಲೆ ಅಭಿವೃದ್ಧಿ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿ ಕಿರ್ಲೋಸ್ಕರ್ ಮೋಟಾರು ಕಂಪನಿಯ ಜತೆಯೂ ಮಾತನಾಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಶಾಲೆಯ ಪುನರ್ ನವೀಕರಣ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಅವರು, ಇದೀಗ ಶಾಲೆಯು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಪುನರ್ ನವೀಕರಣಗೊಂಡು ಸುಸಜ್ಜಿತವಾಗಿರುವುದು ಸಂತೋಷದ ಸಂಗತಿ. ಇದರಿಂದ ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಲಿ ಎಂದು ತಿಳಿಸಿದರು.
ರಾಮನಗರದ ಇತಿಹಾಸದ ಪುಟದಲ್ಲಿ ದಾಖಲಾಗಿರುವ ಕಟ್ಟಡವನ್ನು ಟೊಯೋಟಾ ಕಂಪನಿ ನೂತನವಾಗಿ ನಿರ್ಮಿಸಿಕೊಟ್ಟಿದೆ. ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಕಟ್ಟಡ ಮಾತ್ರವಲ್ಲದೇ ಟೊಯೋಟಾ ಕಂಪನಿ ಎಲ್ಲಾ ರೀತಿಯ ಸವಲತ್ತನ್ನು ಸಹ ಉಚಿತವಾಗಿ ಒದಗಿಸುತ್ತಿದೆ. –ಬಿ.ಎನ್.ಮರೀಗೌಡ, ಬಿಇಒ ಮತ್ತು ಎಚ್.ಶ್ರೀನಿವಾಸ್, ಮುಖ್ಯ ಶಿಕ್ಷಕರು, ಜಿ.ಕೆ.ಬಿ.ಎಂ.ಎಸ್
-ಬಿ.ವಿ.ಸೂರ್ಯ ಪ್ರಕಾಶ್