Advertisement

ಯುದ್ಧ ಭೂಮಿಯಲ್ಲಿ ಬೇಲಿ ಹಾಕುವ ವಾಹನ ಅಭಿವೃದ್ಧಿ

03:10 PM May 20, 2021 | Team Udayavani |

ಬೆಂಗಳೂರು: ಯದ್ಧಭೂಮಿಗಳಲ್ಲಿಅತ್ಯಂತ ಕಡಿಮೆ ಅವಧಿಯಲ್ಲಿ ಯಾಂತ್ರಿಕವಾಗಿ ಗಡಿರೇಖೆಗಳನ್ನು ಎಳೆಯುವುದರಜತೆಗೆ ಬೇಲಿ ಹಾಕುವ ಅತ್ಯಾಧುನಿಕವಾಹನ ಎಂಎಂಎಂಇ ಎಂಕೆ-2 ಅನ್ನುಭಾರತ್‌ ಅರ್ತ್‌ ಮೂವರ್ ಲಿ.,(ಬಿಇಎಂಎಲ್‌) ಅಭಿವೃದ್ಧಿಪಡಿಸಿದೆ.

Advertisement

ಮಾನವನ ಶ್ರಮ ಮತ್ತು ಹಸ್ತಕ್ಷೇಪಕಡಿಮೆ ಮಾಡುವ ಈ ಸೆಮಿ-ಅಟೋಮೆಟಿಕ್‌ ವಾಹನದ ಮೊದಲಪೊ›ಟೊಟೈಪ್‌ ಅನ್ನು ಬುಧವಾರಬಿಇಎಂಎಲ್‌ ಬಿಡುಗಡೆ ಮಾಡಿದೆ.ಕೇಂದ್ರದ ಆತ್ಮನಿರ್ಭರ ಯೋಜನೆ ಅಡಿರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಸಂಸ್ಥೆ (ಡಿಆರ್‌ಡಿಒ)ಯ ಪುಣೆಮೂಲದ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಶ್‌ಮೆಂಟ್‌ (ಎಂಜಿನಿಯರ್) ಸಹಯೋಗದಲ್ಲಿ ಇದನ್ನುರೂಪಿಸಲಾಗಿದೆ.ಪ್ರತಿ ಗಂಟೆಗೆ ಕನಿಷ್ಠ 1.2 ಕಿ.ಮೀ.ಮಾರ್ಗದಲ್ಲಿ ಗಡಿ ರೇಖೆಯನ್ನುಎಳೆಯುವುದರ ಜತೆಗೆ ಮಾರ್ಗದುದ್ದಕ್ಕೂಪ್ರತಿ 15 ಮೀಟರ್‌ ಅಂತರದಲ್ಲಿ ಬೇಲಿಹಾಕಲು ಅನುವಾಗುವಂತೆ ಕಂಬ(ಪಿಲ್ಲರ್‌) ಗಳನ್ನು ಅಳವಡಿಸುವ ಸಾಮರ್ಥ್ಯ ಹೊಂದಿದೆ.

ಕನಿಷ್ಠ 10ರಿಂದಗರಿಷ್ಠ 35 ಮೀಟರ್‌ ಅಂತರದಲ್ಲಿ ಕಂಬಗಳನ್ನು 450 ಮಿಲಿಮೀಟರ್‌ಆಳದವರೆಗೆ ಅಳವಡಿಸಬಲ್ಲದು ಎಂದುಬಿಇಎಂಎಲ್‌ ತಿಳಿಸಿದೆ. ಏಕಕಾಲದಲ್ಲಿ ಗರಿಷ್ಠ 500ಕಂಬಗಳನ್ನು 15 ಕಿ.ಮೀ.ವರೆಗೆ ಅಳವಡಿಸುವ ಸಾಮರ್ಥ್ಯ ಹೊಂದಿದೆ.

ಈವಾಹನವನ್ನು ವಿಶೇಷವಾಗಿಪಂಜಾಬ್‌ ಹಾಗೂ ಮರುಭೂಮಿ ಪ್ರದೇಶ ಹೊಂದಿರುವ ರಾಜಸ್ತಾನದಲ್ಲಿ ಎಲ್ಲತರಹದ ವಾತಾವರಣದಲ್ಲಿ ಕಾರ್ಯಾಚರಣೆ ಮಾಡುವಂತಹದ್ದಾಗಿದೆ. ವರ್ಚುವಲ್‌ ಆಗಿ ಈ ವಾಹನವನ್ನುಬಿಇಎಂಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ರಾಜಶೇಖರ್‌ ಬಿಡುಗಡೆ ಮಾಡಿದರು.

ನಿರ್ದೇಶಕ(ಸಂಶೋಧನೆ ಮತ್ತು ಅಭಿವೃದ್ಧಿಎಂಜಿನಿಯರಿಂಗ್‌ ವಿಭಾಗ) ವಿ.ವಿ.ಪಾರ್ಲಿಕರ್‌ ಮತ್ತಿತರರು ಉಪಸ್ಥಿತರಿದ್ದರು. ಇದರ ಯಶಸ್ವಿ ಕಾರ್ಯಾಚರಣೆನಂತರ ರಕ್ಷಣಾ ಸಚಿವಾಲಯದಿಂದಸುಮಾರು 55 ಈ ಮಾದರಿಯ ವಾಹಗನಳಿಗೆ ಬೇಡಿಕೆ ಇಡುವ ನಿರೀಕ್ಷೆಇದೆ ಎಂದೂ ಬಿಇಎಂಎಲ್‌ಪ್ರಕಟಣೆಯಲ್ಲಿ ತಿಳಿಸಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next