Advertisement
ಶುಕ್ರವಾರ ಸಂಜೆ ಸಂಸ್ಥೆಯ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ತಮ್ಮ 84ನೇ ಅಮೃತ ಮಹೋತ್ಸವ ಮತ್ತು ವೈವಾಹಿಕ ಜೀವನದ ರಜತ ಮಹೋತ್ಸವ, ಪೂಜ್ಯ ದಾಕ್ಷಾಯಣಿ ತಾಯಿ ಅವರ 49ನೇ ಜನ್ಮೋತ್ಸವ ಹಾಗೂ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ 9ನೇ ಭಾವಿ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪ್ರಥಮ ಜನ್ಮೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವಿಶ್ವದ 200 ಪ್ರಮುಖ ವಿವಿಗಳಲ್ಲಿ ದೇಶದ ವಿವಿಗಳು ಉನ್ನತ ಸ್ಥಾನ ಪಡೆಯುವಂತಾಗಲು ಗುಣಮಟ್ಟದ ಶಿಕ್ಷಣದಿಂದ ಸಾಧ್ಯ ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಮುನ್ನಡೆದರೆ ಯಶಸ್ಸು ನಿಶ್ಚಿತವಾಗಿದೆ. ಬಹು ಮುಖ್ಯವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಗುಣಮಟ್ಟತೆಯಲ್ಲಿ ಶ್ರೇಷ್ಠತೆ ಹೊಂದಿದ್ದರ ಪರಿಣಾಮ ಇಂದು ವಿವಿಯಾಗಿ ಹೊರ ಹೊಮ್ಮಿದೆ ಎಂದರು.
Related Articles
Advertisement
ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಸ್ವಾಮೀಜಿ, ಶಾಸಕರಾದ ಡಾ| ಉಮೇಶ ಜಾಧವ, ಎಂ.ವೈ. ಪಾಟೀಲ, ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ಮಾರುತಿರಾವ್ ಮಾಲೆ, ಶಶೀಲ ನಮೋಶಿ, ದೇವರಾಯ ನಾಡೆಪಲ್ಲಿ, ಡಾ| ಮಲ್ಲಿಕಾರ್ಜುನ ನಿಷ್ಠಿ, ಸಮ ಕುಲಪತಿ ಎನ್.ಎಸ್. ದೇವರಕಲ್, ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಶಿವರಾಜ ಹೊನ್ನಳ್ಳಿ, ಟಿ. ರಾಮರಾವ್, ಎಸ್ .ಟಿ. ರಾವ್, ವಿಜಯ ರಾಮರಾಜು, ಶರಣಬಸಪ್ಪ ದೇಶಮುಖ, ಪ್ರೊ| ನರಕೆ, ಡಾ| ಗಂಗಾಂಬಿಕಾ ನಿಷ್ಟಿ, ದೊಡ್ಡಪ್ಪ ನಿಷ್ಠಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪದಾಧಿಕಾರಿಗಳು, ಸಿಬ್ಬಂದಿಗಳು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ| ಸುರೇಶ ನಂದಗಾಂವ ಮತ್ತು ಪ್ರೊ| ಬಿ.ಸಿ. ಚವ್ಹಾಣ ಕುಟುಂಬದವರು ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜೀ ದಂಪತಿಗಳನ್ನು ಮತ್ತು ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ತುಲಾಭಾರ ಮಾಡಿದರು. ಪ್ರಾರಂಭದಲ್ಲಿ ಡಾ| ಅಪ್ಪ ಅವರ ಸುಪುತ್ರಿಯರಾದ ಶಿವಾನಿ, ಕೋಮಲಾಮ ಮಹೇಶ್ವರಿ ಪ್ರಸ್ತುತಪಡಿಸಿದ ನೃತ್ಯ ಗಾಯನ ಸರ್ವರ ಗಮನ ಸೆಳೆಯಿತು.
ಶರಣಬಸವ ವಿವಿ ಡೀನ್ ಡಾ| ಲಿಂಗರಾಜ ಶಾಸ್ತ್ರೀ ನಿರೂಪಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿದರು. ಕುಲಸಚಿವ ಡಾ| ಅನಿಲಕುಮಾರ ಬಿಡವೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ ವಂದಿಸಿದರು.
ಮಠಾಧೀಶರು, ಸ್ವಾಮೀಜಿಯವರು ತಾವು ಶತಾಯುಷಿಗಳಾಗಲೆಂದು ಹಾರೈಸಿದರೆ ಭಕ್ತ ವೃಂದವರು ಸಹ ಪ್ರಾರ್ಥಿಸಿದ್ದಾರೆ. ಆದರೆ ತಮ್ಮ ಮನಸ್ಸು ಸದಾ ಗುಣಮಟ್ಟದ ಶಿಕ್ಷಣದತ್ತ ತುಡಿಯುತ್ತದೆ. ಡಾ| ಶರಣಬಸವಪ್ಪ ಅಪ್ಪ, ಕುಲಾಧಿಪತಿಗಳು, ಶರಣಬಸವ ವಿವಿ ಡಾ| ಶರಣಬಸವಪ್ಪ ಅಪ್ಪ ಗುಣಮಟ್ಟದ ಶಿಕ್ಷಣ ಸಂಸ್ಥೆ ಜತೆಗೆ ಸಂಸತ್ತಿನ ಎದುರು ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡಿರುವುದು ಸಾಮಾಜಿಕ ದೊಡ್ಡ ಕೊಡುಗೆಗಳಾಗಿವೆ. ಡಾ| ಅಪ್ಪ ರಚಿಸಿದ ದಾಸೋಹ ಸೂತ್ರಗಳು ಮಾನವ ಜನಾಂಗಕ್ಕೆ ದಾರಿ ದೀಪವಾಗಿವೆ.
ಡಾ| ನಿರಂಜನ್ ನಿಷ್ಠಿ, ಕುಲಪತಿಗಳು, ಶರಣಬಸವ ವಿವಿ