ಮುಂಬೈ: ಭಾರತದ ಅಭಿವೃದ್ಧಿಯು ಇಲ್ಲಿನ ಜನರ ದೃಷ್ಟಿಕೋನ ಮತ್ತು ಅವರ ಆಕಾಂಕ್ಷೆಗಳನ್ನು ಅವಲಂಬಿಸಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಮೆರಿಕ ಅಥವಾ ಚೀನ ನೋಡಿ ಅದರಂತೆ ಅಭಿವೃದ್ಧಿಯಾಗಬೇಕು ಎನ್ನುವುದು ಭಾರತದ ಅಭಿವೃದ್ಧಿಯಲ್ಲ. ಹಾಗೇ ಆದರೆ ಅದು ಚೀನ ಮತ್ತು ಅಮೆರಿಕದಂತೆ ಆಗುತ್ತದೆ,’ ಎಂದರು.
“ಭಾರತದ ಅಭಿವೃದ್ಧಿಯು ಇಲ್ಲಿನ ನಾಗರಿಕರ ಪರಿಸ್ಥಿತಿ ಮತ್ತು ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಪ್ರಪಂಚದ ಕಡೆಗೆ ನಮ್ಮ ದೃಷ್ಟಿಕೋನವನ್ನು ಆಧರಿಸಿದೆ,’ ಎಂದು ಅಭಿಪ್ರಾಯಪಟ್ಟರು.
“ಮನುಷ್ಯನನ್ನು ಉನ್ನತ ಮಟ್ಟಕ್ಕೆ ಏರಿಸುವುದೇ ಧರ್ಮ. ಪ್ರಕೃತಿಯನ್ನು ನಾಶ ಮಾಡುವುದು ಧರ್ಮವಲ್ಲ. ಭಾರತ ಬಲಿಷ್ಠವಾದರೆ ನಾವು ಚೀನ ಅಥವಾ ಅಮೆರಿಕದಂತೆ ದಂಡ ಪ್ರಯೋಗಿಸುವುದಿಲ್ಲ,’ ಎಂದು ಭಾಗವತ್ ಹೇಳಿದರು.