Advertisement
ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಮಾತನಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಸೌಹಾರ್ದತೆಗೆ ಒತ್ತು ನೀಡಿ ಪಕ್ಷದ ಹಿರಿಯ ಕಾರ್ಯಕರ್ತರು, ಯುವ ನಾಯಕರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲದೊಂದಿಗೆ ಮಾಡುತ್ತಿದ್ದೇನೆ. ಯಾರೇ ಅಡ್ಡಿಪಡಿಸಿದರೂ ಅಭಿವೃದ್ಧಿ ಕಾರ್ಯಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿ ಕ್ಷೇತ್ರದ ಜನತೆಗಾಗಿ ಮಾಡಲಾಗುತ್ತದೆ. ಒಂದೆರಡು ಜನರಿಗಾಗಿ ಮಾತ್ರ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇಶವ ಸನಿಲ್ ಮಾತನಾಡಿ ಮುಂದಿನ ಚುನಾವಣೆಗಾಗಿ ಈಗಿನಿಂದಲೇ ತಯಾರಿ ಆರಂಭಿಸಬೇಕಿದ್ದು ಮನೆ ಮನೆ ಕಾಂಗ್ರೆಸ್‌ಗೆ ಈ ಮೂಲಕ ಚಾಲನೆ ನೀಡಲಾಗಿದೆ. ನಿರಂತರವಾಗಿ ಮತದಾರರ ಸಂಪರ್ಕ ಮಾಡಲಾಗುತ್ತಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಕುಂತಲಾ ಕಾಮತ್, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಮಂಗಳೂರು ಬಾವಾ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ ಅಮೀನ್, ಎಸ್.ಸಿ-ಎಸ್.ಟಿ ಅಧ್ಯಕ್ಷ ಮಲ್ಲಿಕಾರ್ಜುನ, ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಹಿಂದುಳಿದ ವರ್ಗದ ಅಧ್ಯಕ್ಷ ಎಂ.ರಾಮಚಂದ್ರ(ಎಮ್‌ಆರ್), ಮಾಜಿ ಮೇಯರ್ ಹಿಲ್ಡಾ ಆಳ್ವ, ಶ್ಯಾಮ ಸುಂದರ್, ಸ್ಥಳೀಯ ಕಾರ್ಪೊರೇಟರ್ ದೀಪಕ್, ಸುಹೆ„ಲ್ ಕಂದಕ್, ಶಿಫಾಲ್ ರಾಜ್, ವರುಣ್ ರಾಜ್ ಅಂಬಟ್, ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಉತ್ತಮ ಆಳ್ವ, ಕೆಡಿಪಿ ಜಿಲ್ಲಾ ಸದಸ್ಯ ಮಹಮ್ಮದ್ ಅಲಿ ಕೂಳೂರು, ಷರೀಫ್ ಕೂಳೂರು, ರಾಜು ಬಂಗೇರ, ಕೂಳೂರು ಅನಿಲ್, ನಜೀರ್ ಕೂಳೂರು, ಮತ್ತಿತರರು ಉಪಸ್ಥಿತರಿದ್ದರು.