ವಿಜಯಪುರ: ಗ್ರಾಮಗಳ ಅಭಿವೃದ್ಧಿಗೆ ಕೇವಲ ಶಾಸಕರ ಮೇಲೆ ಅವಲಂಬಿತರಾಗದೇ ಗ್ರಾಪಂ ಸದಸ್ಯರು ಕೂಡ ಪ್ರಾಮಾಣಿಕವಾಗಿ ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಲು ಸಾಧ್ಯ ಎಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಯ ಮೇಲ್ಮನೆ ಶಾಸಕ ಸುನೀಲಗೌಡ ಪಾಟೀಲ್ ಹೇಳಿದರು.
ವಿಜಯಪುರ ತಾಲೂಕಿನ ತೊರವಿ ಗ್ರಾಮದ ಲಕ್ಷಿ$¾à ದೇವಸ್ಥಾನದಲ್ಲಿ ತಿಕೋಟಾ ತಾಲೂಕಿನ ಗ್ರಾಪಂ ನೂತನ ಸದಸ್ಯರನ್ನು ಗುರುವಾರ ಸನ್ಮಾನಿಸಿ ಅವರು ಮಾತನಾಡಿದರು. ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಒಂದೊಮ್ಮೆ ಸಣ್ಣಪುಟ್ಟ ತೊಡಕುಗಳು ಕಂಡು ಬಂದಲ್ಲಿ ಕೂಡಲೇ ನನ್ನ ಗಮನಕ್ಕೆ ತಂದರೆ ಸಮಸ್ಯೆ ನಿವಾರಿಸಿ ಪರಿಸ್ಥಿತಿ ನಿರ್ವಹಿಸುವಲ್ಲಿ ಮುಂದಾಗುತ್ತೇನೆ ಎಂದರು.
ಕೋವಿಡ್ ಸಾಂಕ್ರಾಮಿಕ ರೋಗ ಸೇರಿದಂತೆ ಇತರೆ ರೋಗಗಳ ನಿವಾರಣೆ ವಿಷಯದಲ್ಲಿ ಗ್ರಾಮಗಳ ಸ್ವತ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕುಡಿವ ನೀರಿನ ಸೌಲಭ್ಯ ಹಾಗೂ ಪ್ರತಿ ಮನೆ-ಮನೆಗೆ ಶೌಚಾಲಯ ವ್ಯವಸ್ಥೆ ಹೀಗೆ ಹಲವು ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡಲ್ಲಿ ಯೋಜನೆಗಳು ಸಹಜವಾಗಿ ಪೂರ್ಣಗೊಳ್ಳುತ್ತವೆ. ಇದರಿಂದ ಗ್ರಾಮಾಭಿವೃದ್ಧಿ ಹೊಂದಲು ಸಾಧ್ಯ ಎಂದರು. ಕೊರೊನಾ ಮಹಾಮಾರಿ ಇದೀಗ ಮೂರನೆ ಅಲೆಗೆ ಕಾಲಿರಿಸಲಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕಾಯಿಲೆ ತಡೆಯಲು ನಮ್ಮಿಂದಲೇ ಸಾಧ್ಯ. ಹೀಗಾಗಿ ಎಲ್ಲರೂ ಜಾಗೃತರಾಗಬೇಕು. ಗ್ರಾಪಂ ಸದಸ್ಯರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು. ಈ ವೇಳೆ ತಿಕೋಟಾ ತಾಪಂ ಇಒ ಮೈಬೂಬ ಜಿಲಾನಿ, ಪಂಚಾಯಿತಿ ಅಭಿವೃದ್ಧಿ ಅ ಧಿಕಾರಿಗಳಾದ ಐ.ಎ. ಬಿರಾದಾರ, ರೇಖಾ ಪವಾರ, ಪದ್ಮಿನಿ ಬಿರಾದಾರ, ರಾಜಶ್ರೀ ತುಂಗಳ, ರಾಜಶ್ರೀ ದಶವಂತ ಸೇರಿದಂತೆ ಎಲ್ಲ ಗ್ರಾಪಂ ಅಧಿ ಕಾರಿಗಳು ಉಪಸ್ಥಿತರಿದ್ದರು. ಸುರೇಶ ಕಳ್ಳಿಮನಿ ಸ್ವಾಗತಿಸಿ, ವಂದಿಸಿದರು.