ವನ್ನು ಸರಿಯಾದ ಪಥದಲ್ಲಿ ಮುನ್ನಡೆಸಿದಾಗ ಅದು ಫಲಪ್ರದವಾಗಿ ಯಶಸ್ವಿಯಾಗಬಲ್ಲದು. ಉದ್ಯೋಗ, ಕುಟುಂಬದ ಸಂರಕ್ಷಣೆ, ಮುಂಬಯಿ ಮಹಾನಗರದಲ್ಲಿ ಸ್ವಂತ ಮನೆ ಇತ್ಯಾದಿ ಸೌಕರ್ಯಗಳಿಗೆ ಸಹಕರಿಸಿದ ಭಾರತ್ ಬ್ಯಾಂಕ್ ನಮ್ಮೆಲ್ಲರ ಮಾತೃಸ್ವರೂಪಿಣಿ ಎಂದು ಭಾರತ್ ಬ್ಯಾಂಕ್ ಎಂಪ್ಲಾ ಯೀಸ್ ಯೂನಿಯನ್ ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಸನಿಲ್ ಅಭಿಪ್ರಾಯಪಟ್ಟರು.
Advertisement
ಇತ್ತೀಚೆಗೆ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಮುಲುಂಡು ಪೂರ್ವ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಶೇಖರ ಎನ್. ಬಿಲ್ಲವ ಅವರನ್ನು ಸಮ್ಮಾನಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಬ್ಯಾಂಕ್‌ಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿದೆ. ಕಾನೂನು ನಿಯ ಮಗಳನ್ನು, ನಮ್ಮಲ್ಲಿರುವ ವಿನೂತನ ಸವಲತ್ತುಗಳನ್ನು ಖಾತೆದಾರರಿಗೆ ವಿವರಿಸಿ ಮಾನವ ಸಂಪನ್ಮೂಲಗಳಗನ್ನು ಕ್ರೋಢೀಕರಿಸಬೇಕು. ಪ್ರಾಮಾಣಿಕತೆ, ಸತ್ಯಸಂಧತೆ, ಸನ್ನಡತೆಗಳಿಂದ ನಾವು ಅಭಿವೃದ್ಧಿಯ ಗುರಿ ತಲಪಲು ಸಾಧ್ಯವಾಗುತ್ತದೆ ಎಂದರು.
Related Articles
Advertisement
ರಮೇಶ್ ಕುಂದರ್, ಶಿಶಿರ್ ಸಾಲ್ಯಾನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಅಶೋಕ್ ಎಲ…. ಕೋಟ್ಯಾನ್, ಉಪಕಾರ್ಯಾಧ್ಯಕ್ಷ ಲೋಹಿತಾಕ್ಷ ಎಸ್. ಅಂಚನ್, ಜತೆ ಕಾರ್ಯದರ್ಶಿ ಪ್ರಿಯಾ ಬಿ. ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ ಕೆ. ಪೂಜಾರಿ, ಜತೆ ಕೋಶಾಧಿಕಾರಿ ವಿನೂತಾ ಪೂಜಾರಿ, ಪದಾಧಿಕಾರಿಗಳಾದ ಗಿರೀಶ್ ಎ. ಸಾಲ್ಯಾನ್, ಶ್ರೀಧರ ಎಚ್. ಪೂಜಾರಿ, ರಾಘವೇಂದ್ರ ಪ್ರಸಾದ್ ಸಾಲ್ಯಾನ್, ಸುಜೀತ್ ಜಿ. ಕೋಟ್ಯಾನ್ ಶುಭ ಹಾರೈಸಿದರು. ಹಿರಿಯ ಅಧಿಕಾರಿ ಸುನೀತಾ ಜೆ. ಪೂಜಾರಿ ಸ್ವಾಗತಿಸಿದರು. ಅರುಣಾ ಕೆ. ಬಂಟ್ವಾಳ್ ವಂದಿಸಿದರು.