Advertisement
ಐವನ್ ಡಿ’ಸೋಜ ಅವರು ವಕೀಲರನ್ನು ಸ್ವಾಗತಿಸಿ, ಸುಜ್ಞಾನವಂತ ಮತ್ತು ಬಹಳ ಅನುಭವ ಹೊಂದಿದ ಜೆ.ಆರ್. ಲೋಬೋರವರು ಮಂಗಳೂರು ನಗರ ಮತ್ತು ದ.ಕ ಜಿಲ್ಲೆಯ ಅಭಿವೃದ್ಧಿಗಾಗಿ ಶಾಸಕರಾಗುವುದು ಅತೀ ಅವಶ್ಯ. ಆದ್ದರಿಂದ ಎಲ್ಲ ವಕೀಲರು ಸೇರಿ ಅವರನ್ನು ಚುನಾಯಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
Related Articles
Advertisement
1,500 ಎಕರೆ ಭೂ ಸ್ವಾಧೀನಪಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತಿತರ ಕ್ರೀಡಾ ಮೈದಾನಗಳನ್ನು ಸ್ಥಾಪಿಸಿದಲ್ಲಿ ಜಗತ್ತಿನ ಎಲ್ಲ ಮೂಲೆಗಳಿಂದಲೂ ಜನರು ಮಂಗಳೂರಿಗೆ ಬರುವಂತಾಗುತ್ತದೆ, ಇದರಿಂದಾಗಿ ಪ್ರವಾಸೋದ್ಯಮ ಬೆಳೆಯುತ್ತದೆ. ವ್ಯವಹಾರಗಳು ಹೆಚ್ಚುತ್ತವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಮುಖಾಂತರ ಮಂಗಳೂರಿನಲ್ಲಿ ಲಭ್ಯವಿರುವ ನೆಲ, ಜಲ, ವಾಯು ಮಾರ್ಗಗಳ ಸಂಪರ್ಕದ ಪ್ರಯೋಜನ ಪಡೆದು ಬಹುದೊಡ್ಡ ಹೂಡಿಕೆದಾರರನ್ನು ಸೆಳೆಯಲು ಅವಕಾಶವಿದೆ.
ಇದರಿಂದ ಕ್ಷೇತ್ರದ ಜನರಿಗೆ ನೆಮ್ಮದಿ ಉಂಟಾಗುವುದು ಮಾತ್ರವಲ್ಲ, ವಕೀಲರಿಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಕೀಲ ವೃತ್ತಿಯನ್ನು ಉನ್ನತ ಮಟ್ಟದಲ್ಲಿ ನಡೆಸಲು ಹಲವು ಅವಕಾಶಗಳು ಲಭಿಸುತ್ತವೆ. ಕರ್ನಾಟಕ ಉತ್ಛ ನ್ಯಾಯಾಲಯದ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಹೋರಾಡುವೆ ಮತ್ತು ಸಂಚಾರಿ ಪೀಠ ಸ್ಥಾಪನೆಯಿಂದ ಜನರಿಗೆ ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗಲು ಅವಕಾಶ ಲಭಿಸುತ್ತದೆ. ಮಾತ್ರವಲ್ಲ ಮಂಗಳೂರಿನ ವಕೀಲರು ಬಹಳ ಬುದ್ಧಿವಂತರಾಗಿರುವುದರಿಂದ ವಕೀಲ ವೃತ್ತಿಯೂ ಸಮೃದ್ಧಿಭರಿತವಾಗಲಿದೆ ಎಂದು ಹೇಳಿದರು.
ವಕೀಲರು ಹೌಸಿಂಗ್ ಸೊಸೈಟಿಯನ್ನು ರಚಿಸಿದರೆ ಸರಕಾರಿ ಜಮೀನಿನಲ್ಲಿ ಅಥವಾ ಭೂ ಸ್ವಾಧೀನ ಮಾಡಿ ವಕೀಲರಿಗೆ ಹೌಸಿಂಗ್ ಲೇ ಔಟ್‌ನ್ನು ಸ್ಥಾಪಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಹಿರಿಯ ವಕೀಲರಾದ ನಾರಾಯಣ ಪೂಜಾರಿ, ಎಂ.ಪಿ.ಶೆಣೈ, ಮುಜಾಫರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಎ.ಸಿ.ಜಯರಾಜ್ ಉಪಸ್ಥಿತರಿದ್ದರು. ದಿನಕರ ಶೆಟ್ಟಿ ವಂದಿಸಿದರು.