Advertisement

ಒಂದೇ ಪಕ್ಷದ ಸರಕಾರಗಳಿಂದ ಅಭಿವೃದ್ಧಿ: ಪ್ರಧಾನಿ

11:32 PM Aug 05, 2021 | Team Udayavani |

ಲಕ್ನೊ:  ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳು ಇದ್ದರೆ ಅದು ಅಭಿವೃದ್ಧಿಗೆ ಸಹಕಾರಿ ಯಾಗುತ್ತದೆ. ಇದಕ್ಕೆ ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಇರುವ ಸರಕಾರಗಳು ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯ ಉತ್ತರ ಪ್ರದೇಶದ ಫ‌ಲಾನುಭವಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.

ಉತ್ತರ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ವಾರಾಣಸಿ, ಗೋರಖ್‌ಪುರ, ಮೊರಾದಾಬಾದ್‌, ಹಮೀರ್‌ಪುರ, ಅಯೋಧ್ಯಾ, ಬಾರಾಬಂಕಿ, ಬಹರೈಚ್‌, ಶಹಜಹಾನ್‌ಪುರ್‌, ಕೌಶಂಬಿ ಹಾಗೂ ಆಗ್ರಾದಲ್ಲಿರುವ ಯೋಜನೆಯ ಫ‌ಲಾನು ಭವಿಗಳ ಜತೆಗೆ ಪ್ರಧಾನಿ, ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದರು. ಈ ವೇಳೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next