Advertisement

ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ ಹೈನುಗಾರಿಕೆ: ಸುನಿಲ್‌

06:15 AM Mar 25, 2018 | Team Udayavani |

ಕಾರ್ಕಳ: ಹೈನುಗಾರಿಕೆ ಪ್ರಮುಖ ಲಾಭದಾಯಕ ಉದ್ಯಮ ವಾಗಿ ಬೆಳೆಯುತ್ತಿದೆ. ಸರಕಾರವೂ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಹೈನುಗಾರರ ಸಂಖ್ಯೆಯೂ ಬೆಳೆಯುತ್ತಿದ್ದು, ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ನಿರ್ದೇಶಕರಿಗೆ ತಿಳಿಸಬೇಕು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಮಾ. 24ರಂದು ಉದ್ಘಾಟಿಸಿ ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯುತ್‌ ಜನಕ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಗ್ರಾಮೀಣ ಭಾಗದಲ್ಲಿ 80 ಶೇಕಡದಷ್ಟು ಕೃಷಿ ನಡೆಸಲಾಗುತ್ತಿತ್ತು. ರೈತರು ಕೃಷಿಯಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದರು. ಅನಂತ ರದ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕೃಷಿಗೆ ಪೂರಕವಾಗಿ ಬೆಳೆದು ನಿಂತಿರುವ ಹೈನುಗಾರಿಕೆ ರೈತರ ಆರ್ಥಿಕತೆ ಯನ್ನೂ ಸುಧಾರಿಸುವಂತೆ ಮಾಡಿದೆ ಎಂದರು.

ಪ್ರಶಂಸನೀಯ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್‌ ಹೆಗ್ಡೆ ಮಾತನಾಡಿ, ತಾಲೂಕಿನಲ್ಲಿ 38,000 ಲೀ. ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿ ಉತ್ಪಾದನೆಯಾದ ಹಾಲನ್ನು ಮಣಿಪಾಲಕ್ಕೆ ಕೊಂಡೊಯ್ಯ ಬೇಕಾಗುತ್ತದೆ. ಮಣಿಪಾಲಕ್ಕೆ ಸಾಗಿಸುವ ವೇಳೆ ಹಾಲಿನ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಸಾಂದ್ರಶೀತಲೀಕರಣದ ನಿರ್ಮಾಣದಿಂದಾಗಿ ಹಾಲಿನ ಗುಣ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯ ವಾಗುತ್ತದೆೆ. ಕೇವಲ ಒಂದೂವರೆ ಲೀ. ಹಾಲು ಉತ್ಪಾದನೆಯಲ್ಲಿ ಪ್ರಾರಂಭವಾದ ಪಳ್ಳಿ ಸಂಘವು 1,000 ಅಧಿಕ ಲೀ. ಹಾಲು ಉತ್ಪಾದನೆ ನಡೆಸುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌, ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಹಾಗೂ ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಉದಯ ಎಸ್‌. ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಅವರು ಮಾತನಾಡಿದರು.

Advertisement

ಮುನಿಯಾಲ್‌ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಉದಯ ಕುಮಾರ್‌ ಶೆಟ್ಟಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನವೀನ್‌ಚಂದ್ರ ಜೈನ್‌, ನಾಮನಿರ್ದೇಶಿತ ನಿರ್ದೇಶಕ ನೀರೆ ಕೃಷ್ಣ ಶೆಟ್ಟಿ, ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಬೈಲೂರು, ವಿದ್ಯಾ ಎನ್‌. ಸಾಲಿಯಾನ್‌, ಸಂಗೀತಾ ನಾಯಕ್‌, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.

ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಸ್ವಾಗತಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಎಸ್‌. ಪೂಜಾರಿ ವಂದಿಸಿದರು. ಪ್ರದೀಪ್‌ ಆಚಾರ್ಯ ನಿಟ್ಟೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next