ನವದೆಹಲಿ: ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್ ಸೂಪರ್ ಟೆಕ್ ಅನ್ನು “ದಿವಾಳಿ”ಯಾದ ಕಂಪನಿ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಶುಕ್ರವಾರ (ಮಾರ್ಚ್ 25) ಘೋಷಿಸಿದ್ದು, ಇದರ ಪರಿಣಾಮ 25,000 ಮನೆ ಖರೀದಿದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐದು ವರ್ಷಗಳ ಬಳಿಕ ಲಂಕಾ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಾಲ ಮರುಪಾವತಿ ಮಾಡದಿರುವ ಬಗ್ಗೆ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಂತರ ನ್ಯಾಯಮಂಡಳಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ.
ಎನ್ ಸಿಎಲ್ ಟಿ ಆದೇಶದ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾಗುವುದು ಎಂದು ಸೂಪರ್ ಟೆಕ್ ಡೆವಲರ್ ಕಂಪನಿ ಪ್ರತಿಕ್ರಿಯೆ ನೀಡಿದೆ. ಕಂಪನಿಯ ಎಲ್ಲಾ ಪ್ರಾಜೆಕ್ಟ್ ಗಳು ಲಾಭದಾಯವಾಗಿದ್ದು, ಯಾವುದೇ ರೀತಿಯಿಂದಲೂ ಆರ್ಥಿಕ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇಲ್ಲ. ನ್ಯಾಯಮಂಡಳಿಯ ಆದೇಶದಿಂದ ಕಂಪನಿಯ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸೂಪರ್ ಟೆಕ್ ಗ್ರೂಪ್ ಕಂಪನಿ ತಿಳಿಸಿದೆ.
ಎನ್ ಸಿಎಲ್ ಟಿ ಆದೇಶದಿಂದ ನಮ್ಮ ಕಟ್ಟಡ ನಿರ್ಮಾಣ ಕೆಲಸ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೇ ಖರೀದಿದಾರರಿಗೆ ಫ್ಲ್ಯಾಟ್ ನೀಡಲು ನಾವು ಬದ್ಧರಾಗಿದ್ದೇವೆ. ಕಳೆದ 7 ವರ್ಷಗಳಲ್ಲಿ ನಾವು 40,000ಕ್ಕೂ ಅಧಿಕ ಫ್ಲ್ಯಾಟ್ ಗಳನ್ನು ಗ್ರಾಹಕರಿಗೆ ನೀಡಿದ್ದೇವೆ ಎಂದು ಕಂಪನಿ ಪ್ರತಿಕ್ರಿಯೆ ನೀಡಿದೆ.