Advertisement
ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದ ಬಸವೇಶ್ವರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೃದಯ ಶ್ರೀಮಂತಿಕೆ ಇರುವವರಿಗೆ ದೇವರು ಸದಾ ಒಳ್ಳೆಯದನ್ನು ಮಾಡುತ್ತಾನೆ. ಇದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು.
Related Articles
Advertisement
ಭ ವಿಷ್ಯದಲ್ಲಿ ಗಂಡಾಂತರ: ಮನುಷ್ಯ ಇಂದು ತನ್ನ ದುರ್ವರ್ತನೆಯಿಂದ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದು, ಪ್ರಾಣಿಗಳಿಗಿಂತ ಕೀಳಾಗುತ್ತಿದ್ದಾನೆ. ಆದ್ದರಿಂದ ಎಲ್ಲರೂ ದೇವರು ಮತ್ತು ಹಿರಿಯರಲ್ಲಿ ನಂಬಿಕೆ ಇಟ್ಟು ಉತ್ತಮ ಮನುಷ್ಯರಾಗಿ ಬದುಕಬೇಕು ಎಂದು ಸಲಹೆ ನೀಡಿದ ಶ್ರೀಗಳು, ಮಾನವನ ದುರಾಸೆಯಿಂದ ಪ್ರತಿನಿತ್ಯ ದೌರ್ಜನ್ಯಗಳು ನಡೆಯುತ್ತಿದ್ದು ಅದು ನಿಲ್ಲದಿದ್ದರೆ ಭವಿಷ್ಯದಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾತಿ ಸಂಕೋಲೆಯಿಂದ ಹೊರ ಬನ್ನಿ: ದೇವಾಲಯಗಳನ್ನು ನಿರ್ಮಾಣ ಮಾಡಿ ಪೂಜೆ ಸಲ್ಲಿಸಿ ಮನಸ್ಸಿನಲ್ಲಿ ಇತರರನ್ನು ದ್ವೇಷ ಮಾಡಿದರೆ ಎಲ್ಲಾ ಪೂಜೆಗಳೂ ವ್ಯರ್ಥವಾಗುತ್ತವೆ. ಹಾಗಾಗಿ ನಾವೆಲ್ಲಾ ಮಾಡುವ ಕಾಯಕದಲ್ಲಿ ದೇವರನ್ನು ಕಂಡು ಜಾತಿ ಸಂಕೋಲೆಯಿಂದ ಹೊರ ಬರಬೇಕು ಎಂದು ತಿಳಿಸಿದ ನಟರಾಜಶ್ರೀಗಳು ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಜಲ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.ಮುಖಂಡರಿಗೆ ಸನ್ಮಾನ: ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿಸ್ವಾಮೀಜಿ, ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದಸ್ವಾಮೀಜಿ ಮತ್ತು ಅರಕೆರೆ ವಿರಕ್ತ ಮಠದ ಸಿದ್ದೇಶ್ವರಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಸೇರಿದಂತೆ ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷ ಎಂ.ನಾಗರಾಜು, ಗ್ರಾಪಂ ಅಧ್ಯಕ್ಷೆ ಸುಕನ್ಯ, ಎಪಿಎಂಸಿ ಮಾಜಿ ನಿರ್ದೇಶಕ ನಂಜುಂಡಸ್ವಾಮಿ, ಗ್ರಾಮದ ಮುಖಂಡರಾದ ಶಿವಶಂಕರಪ್ಪ, ಮಹದೇವ್, ಆನಂದಚಾರ್, ಅಣ್ಣಯ್ಯ, ದ್ವಾರಕೀಶ್, ರಾಜನಾಯಕ, ರಂಗಪ್ಪ, ಪುಟ್ಟರಾಜು, ನಾಗೇಶ್, ಸೋಮಶೇಖರ್, ತಹಶೀಲ್ದಾರ್ ಎಂ.ಮಂಜುಳಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ರಮೇಶ್ ಮತ್ತಿತರರು ಇದ್ದರು.