Advertisement

ಪಠ್ಯದೊಂದಿಗೆ ಪ್ರಾಪಂಚಿಕ ಜ್ಞಾನ ಬೆಳೆಸಿ; ಶಾಸಕ ಜಿ. ಕರುಣಾಕರ ರೆಡ್ಡಿ

06:20 PM Sep 06, 2022 | Team Udayavani |

ಹರಪನಹಳ್ಳಿ: ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ, ಪ್ರಾಪಂಚಿಕ ಜ್ಞಾನ ಹಾಗೂ ಮೌಲ್ಯಗಳನ್ನು ಕಲಿಸಬೇಕು ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಶಿಕ್ಷಕರ ಸಂಘ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗಳ ಆಶ್ರಯದಲ್ಲಿ ಸೋಮವಾರ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ಕೊಡುತ್ತೇವೆ. ನಾನು ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ಮೀರಿ ಕೆಲಸಮಾಡಿದ್ದೇನೆ. ತಾಲೂಕಿನಲ್ಲಿ 400 ಶಾಲಾ ತರಗತಿ ಕೊಠಡಿಗಳನ್ನು ನಿರ್ಮಿಸಿದ್ದೇನೆ. ಹಿಂದಿನಿಂದಲೂ ಗುರುಗಳಿಗೆ ಉನ್ನತ ಸ್ಥಾನ ಕೊಡಲಾಗಿದೆ. ಶಿಕ್ಷಕ ಜವಾಬ್ದಾರಿಯುತ ಸ್ಥಾನ ಶ್ರದ್ಧೆಯಿಂದ ಬೋಧನೆ ಮಾಡಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪನವರು ಮಾತನಾಡಿ, ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕರು 9 ಕೋಟಿ ರೂ ಅನುದಾನ ಈವರೆಗೂ ನೀಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಿದ್ದೇವೆ. ಪೋಷಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂದು ಶಿಕ್ಷಕರಿಗೆ ತಿಳಿಸಿದರು.

ಡಿವೈಎಸ್ಪಿ ಹಾಲಮೂರ್ತಿರಾವ್‌ ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಕೇವಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮಾತ್ರ ಆಚರಿಸುತ್ತಿದ್ದಾರೆ. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸಹ ಆಚರಿಸಬೇಕು ಎಂದು ಸಲಹೆ ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಹರಪನಹಳ್ಳಿ ಶಿಕ್ಷಣ ಕಾಶಿಯಾಗಿದೆ. ಅದಕ್ಕಾಗಿ ಪಟ್ಟಣದ ಸ್ವಾಗತ ಫಲಕಕ್ಕೆ ವಿದ್ಯಾಸಿರಿ ನಾಡು ಎಂದು ನಾಮಕರಣ ಮಾಡಲಾಗಿದೆ ಎಂದ ಅವರು ಮಕ್ಕಳಿಗೆ ಸಂಚಾರಿ ನಿಯಮದ ಕುರಿತು ಅರಿವು ಮೂಡಿಸಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷ ಎಚ್‌.ಎಂ. ಅಶೋಕ ಮಾತನಾಡಿ, ಶಿಕ್ಷಕರಿಗೆ ಇನ್ನೂ ಅನೇಕ ಸೌಲಭ್ಯಗಳು ಸರ್ಕಾರ ಒದಗಿಸಬೇಕು ಹಾಗೂ ಶಿಕ್ಷಕರು ಸಹ ಜವಾಬ್ದಾರಿಯುತವಾಗಿ ಕೆಲಸ ಮಾಡಿ ಗುಣ ಮಟ್ಟದ ಶಿಕ್ಷಣ ನೀಡಬೇಕು ಎಂದು ಅವರು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೂ, ನಿಧನ ಹೊಂದಿದ ಶಿಕ್ಷಕರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುರಸಭಾ ಉಪಾಧ್ಯಕ್ಷೆ ಭೀಮವ್ವ ಸಣ್ಣ ಹಾಲಪ್ಪ, ಬಿಆರ್‌ಸಿ ಹೊನ್ನತ್ತೆಪ್ಪ, ಅಕ್ಷರ ದಾಸೋಹದ ಎ.ಡಿ. ಜಯರಾಜ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ. ಪದ್ಮಲತಾ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್‌, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್‌.ಜಿ. ಮನೋಹರ, ಪುರಸಭಾ ಸದಸ್ಯರುಗಳಾದ ಕಿರಣ್‌ ಶಾನ್‌ಭಾಗ್‌, ಜಾವೇದ್‌, ವಿನಯಗೌಳಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಲವೀರಪ್ಪ ಕಳ್ಳಿಮನಿ, ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ, ಹುಚ್ಚಪ್ಪ, ಅರ್ಜುನಪರಸಪ್ಪ, ಎಎಸ್‌ಎಂ ಗುರುಪ್ರಸಾದ, ಎನ್‌.ಜಿ.ಉದಯಶಂಕರ, ಕೆ.ಹವನುಮಂತಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next