ಕಾಸರಗೋಡು: ಬಾಲ್ಯದಲ್ಲೇ ಉತ್ತಮ ಸಂಸ್ಕಾರಕೊಟ್ಟು ರಾಷ್ಟ್ರದ ಶಿಲ್ಪಿಗಳಾಗಿ ಮಕ್ಕಳನ್ನು ಬೆಳೆಸಬೇಕೆಂದು ಬಿಎಂಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಪಿ. ಮುರಳೀಧರನ್ ಹೇಳಿದರು.
ಅವರು ನುಳ್ಳಿಪ್ಪಾಡಿ ಕೋಟೆಕಣಿ ಅಡ್ಡರಸ್ತೆಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಹಾಗು ಮಲ್ಲಿಕಾರ್ಜುನ ಫ್ರೆಂಡ್ಸ್‌ನ ಪ್ರಥಮ ವಾರ್ಷಿಕೋತ್ಸವವನ್ನು ಶ್ರೀ ಮಲ್ಲಿಕಾ ರ್ಜುನ ದೇವಸ್ಥಾನ ಪರಿಸರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸತತ ಸಾಧನೆ ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಪಟ್ಟ ಅವರು ಈ ಹಿನ್ನೆಲೆಯಲ್ಲಿ ಈ ಬಾಲಗೋಕುಲದ ಕಳೆದ ಒಂದು ವರ್ಷದ ಸಾಧನೆ ಶ್ಲಾಘನೀಯ. ಬಾಲ್ಯದಲ್ಲಿ ಸಿಗುವ ಉತ್ತಮ ಶಿಕ್ಷಣ ಜೀವನದಲ್ಲಿ ಬೆಳಕಾಗಿ ಸತ್ಪÅಜೆಯಾಗಿ ಬಾಳಲು ಸಾಧ್ಯವಾಗುವುದು ಎಂದು ಕೆಲವೊಂದು ಉದಾಹರಣೆಗಳ ಸಹಿತ ಹೇಳಿದರು. ಬಾಲಗೋಕುಲಗಳು ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ದಾಟಿಸುವ ಮೂಲಕ ದೇಶವನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುವುದು ಎಂದು ಅಭಿಪ್ರಾಯಪಟ್ಟ ಅವರು ಬಾಲಗೋಕುಲದಲ್ಲಿ ಕಲಿತ ಸಂಸ್ಕಾರ ಮುಂದಿನ ಜೀವನಕ್ಕೆ ದಾರಿದೀಪವಾಗುವುದು ಎಂದರು.
ಸ್ವಸ್ಥ ಸಮಾಜ ನಿರ್ಮಾಣ : ಬಾಲಗೋಕುಲಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸುತ್ತಾ ಸ್ವಸ್ಥ ಸಮಾಜ ನಿರ್ಮಾಣ ಕೆಲಸ ಮಾಡುತ್ತಿವೆ. ನಮ್ಮ ತನವನ್ನು ಮಕ್ಕಳಲ್ಲಿ ಬೆಳೆಸಲು ಶಿಕ್ಷಣ ನೀಡಲಾಗುತ್ತಿದೆ. “ಮತೇತರ’ ಎಂಬ ಹೆಸರಿನಲ್ಲಿ ದೇಶದ ಚರಿತ್ರೆಯನ್ನೇ ಬದಲಾಯಿಸುವ ಕೆಲಸ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ತಪ್ಪು ಮಾಹಿತಿಗಳು ಲಭಿಸುತ್ತಿವೆೆ. ಇಂತಹ ತಪ್ಪು ಮಾಹಿತಿಗಳಿಂದ ದೂರವಾಗಿಡಲು ಮಕ್ಕಳಿಗೆ ಬಾಲಗೋಕುಲಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಕೇವಲ ಒಂದಿಬ್ಬರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರÂ ಲಭಿಸಿಲ್ಲ. ಆದರೆ ಇಂದು ದೇಶಕ್ಕೆ ಸ್ವಾತಂತ್ರÂ ಒಂದಿಬ್ಬರಿಂದ ಲಭಿಸಿತು ಎಂಬಂತೆ ಪ್ರಚಾರವಾಗುತ್ತಿದೆ.