Advertisement

ನೈಜ ಪರೀಕ್ಷೆ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಿ

09:27 PM Aug 12, 2019 | Team Udayavani |

ಮೈಸೂರು: ಸಮಾಜದಲ್ಲಿರುವ ಸಮಸ್ಯೆ ಬಗೆಹರಿಸುವ ಸಂವೇಧನಾಶೀಲತೆ ಬೆಳೆಸಿಕೊಂಡಾಗ ಮಾತ್ರ ನೈಜ ಪರೀಕ್ಷೆ ಎದುರಿಸಲು ಸಾಧ್ಯ ಎಂದು ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯೀಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಹೇಳಿದರು. ಜ್ಞಾನಬುತ್ತಿ ಸಂಸ್ಥೆಯಿಂದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 2019ರ ಐಎಎಸ್‌/ ಕೆಎಎಸ್‌ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದಲ್ಲಿ ಮಾತನಾಡಿದರು.

Advertisement

ಸಮಾಜದ ಮೂಲ ಸಮಸ್ಯೆಗಳನ್ನು ಮೊದಲು ಪರಿಹರಿಸುವುದು, ಸಮಾಜದ ಕಟ್ಟ ಕಡೆ ವರ್ಗಕ್ಕೂ ಸೌಲಭ್ಯ ತಲುಪುವಂತೆ ಮಾಡುವುದು ಮುಖ್ಯ ಪರೀಕ್ಷೆಯಾಗಿದೆ. ಶೈಕ್ಷಣಿಕವಾಗಿ ಹಲವು ಪರೀಕ್ಷೆಗಳನ್ನು ನಾವು ಪಾಸ್‌ ಮಾಡುತ್ತೇವೆ. ಐಎಎಸ್‌ ಹಾಗೂ ಇತರೆ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಲ್ಲಿ ಪಾಸ್‌ ಆಗುತ್ತೇವೆ. ಆದರೆ, ಸಮಾಜದ ಸಮಸ್ಯೆಗಳನ್ನು ಬಗೆಹರಿಸುವುದೇ ನೈಜ ಪರೀಕ್ಷೆಯಾಗಿದೆ. ನೈಜ ಪರೀಕ್ಷೆ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ಇದೇ ವಿಚಾರ ಸಂದರ್ಶನದಲ್ಲೂ ಬರಬಹುದು. ಐಎಎಸ್‌ನಲ್ಲಿ ಹೀಗಿರುವ ಪತ್ರಿಕೆಯೊಂದಿಗೆ ಮೌಲ್ಯ(ಎಥಿಕ್ಸ್‌ ) ಎಂಬ ವಿಷಯ ಸೇರಿಸಲಾಗಿದ್ದು, ಮೌಲ್ಯ ಮೈಗೂಡಿಸಿಕೊಳ್ಳಿ. ಏಕೆ ಐಎಎಸ್‌ ಅಧಿಕಾರಿಯಾಗಬೇಕೆಂಬುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದರು. ರಾಜ್ಯದಲ್ಲಿರುವ 6 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿಯಷ್ಟು ಬಡತನ ರೇಖೆಯಿಂದ ಕಡಿಮೆ ಇರುವ ಬಡವರಿದ್ದಾರೆ.

ಇವರಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಪಡಿತರ ಸೇರಿದಂತೆ ಇತ್ಯಾದಿಗಳನ್ನು ನೀಡುವುದರಿಂದ ಬಡತನ ನಿರ್ಮೂಲನೆಯಾಗುವುದೇ ಎಂಬುದನ್ನು ತಿಳಿದುಕೊಳ್ಳಬೇಕು. ಇವರೆಲ್ಲರನ್ನು ಒಳಗೊಳ್ಳುವ ಸಮಗ್ರ ಯೋಜನೆ ರೂಪಿಸುವ ದೂರದೃಷ್ಟಿ ಇರಬೇಕು ಎಂದರು. ಇಂದಿನ ಯುವ ಸಮುದಾಯದಲ್ಲಿ ಗುರಿ ಇಲ್ಲದೆ ಜೀವಿಸುವವರೇ ಹೆಚ್ಚಾಗಿದ್ದಾರೆ. ಗುರಿ ಮತ್ತು ಕನಸು ಇಲ್ಲದೆ ಹೇಗೆ ಬದುಕಿದರೆ ಆಯಿತು ಎಂಬ ಆಸಡ್ಡೆ ಭಾವನೆಯಲ್ಲಿ ಮುಳುಗಿದ್ದಾರೆ.

ಮೈಸೂರಿನಲ್ಲಿ ಯುವಶಕ್ತಿ ಎಷ್ಟಿದೆ?, ಇಲ್ಲಿ ತರಬೇತಿಗೆ ಬಂದಿರುವವರು ಎಷ್ಟು?. ಪ್ರಪಂಚದಲ್ಲೇ ಭಾರತದ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ದೇಶ ಎಂದು ಹೇಳಲಾಗುತ್ತದೆ. ಆದರೆ, ಯುವ ಸಮುದಾಯದಲ್ಲಿ ಎಷ್ಟು ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿದೆ ಎಂಬುದನ್ನು ಮನ ಗಾಣಬೇಕಿದೆ ಎಂದರು.

Advertisement

ಯುವಕರಿಗೆ ಸರಿ ಮಾರ್ಗ ತೋರಿಸುವವರು ಕಡಿಮೆ ಇರುವ ಸಂದರ್ಭದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡರಂತವರು ಯುವಕರಿಗೆ ತರಬೇತಿ ಶಿಬಿರ ಏರ್ಪಡಿಸಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದ‌ರು. ಈ ಸಂದರ್ಭ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಜೈನಹಳ್ಳಿ ಸತ್ಯನಾರಾಯಣ ಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next