Advertisement
ತುಮಕೂರು: ತುಮಕೂರು ಜಿಲ್ಲೆ ಹಲವು ಸ್ವಾತಂತ್ರ್ಯ ಯೋಧರನ್ನು ನೀಡಿದ ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನೂರಾರು ಜನರು ಭಾಗವಹಿಸಿ ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ಇಂಥ ಗಂಡು ಮೆಟ್ಟಿದ ಕಲ್ಪತರು ನಾಡು ತುಮಕೂರಿಗೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಸಾರ್ವಜನಿಕ ಸಮಾರಂಭ ನಡೆಸಿ ಸರ್ಕಾರಿ ಜೂನಿಯರ್ ಕಾಲೇಜಿನ ಕೊಠಡಿಯಲ್ಲಿ ತಂಗಿದ್ದರು. ಅಂದಿನಿಂದಲೂ ಈಕೊಠಡಿಯನ್ನು ಸ್ಮಾರಕವಾಗಿ ಮಾಡಬೇಕೆನ್ನುವ ಕೂಗು ಇದ್ದರೂ ಇಂದಿಗೂ ಅದುಕಾರ್ಯಗತವಾಗಲೇ ಇಲ್ಲ.
Related Articles
Advertisement
ಸ್ವಾರಕ ಅಭಿವೃದ್ಧಿಗೆ ತೀರ್ಮಾನ: ಸ್ಮಾರ್ಟ್‌ಸಿಟಿ ಯೋಜನೆ ಹಣದಲ್ಲಿ 4.75 ಕೋಟಿ ಹಣ ಖರ್ಚು ಮಾಡಿ ಮೂಲ ಸ್ಮಾರಕ ಇರುವ ಜಾಗ ಬಿಟ್ಟು ಬೇರೆ ಕಡೆ ಗಾಂಧಿ ಸ್ಮಾರಕ ನಿರ್ಮಿಸಲು ಮುಂದಾಗಿದ್ದರು. ಆದರೆ ನಾಗರಿಕರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಅದು ಸ್ಥಗಿತವಾಗಿದೆ. ಶಾಸಕ ಜಿ.ಬಿ. ಜ್ಯೋತಿ ಗಣೇಶ್ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲರು ಉಪ ನ್ಯಾಸಕರು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆ ನಡೆಸಿ ಇರುವ ಸ್ಮಾರಕದ ಸ್ಥಳದಲ್ಲಿಯೇ ಅಭಿವೃದ್ಧಿ ಪಡಿಸಲು ತೀರ್ಮಾನ ಕೈಗೊಂಡಿದ್ದಾರೆ.
ಈ ಹಿಂದೆ ಶಾಸಕರಾಗಿದ್ದ ಡಾ.ಎಸ್. ರಫೀಕ್ ಅಹಮದ್ ಕೂಡಾ ಭೇಟಿ ನೀಡಿ ಸಣ್ಣ ಪುಟ್ಟ ದುರಸ್ತಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಈ ವೇಳೆ ಇಲ್ಲಿ ಗಾಂಧಿ ಪುತ್ಥಳಿ ಅನಾವರಣಗೊಳಿಸುವ ಭರವಸೆನೀಡಿದ್ದರು ಅದು ಈಡೇರಿಲ್ಲ. ಈಗ ಸ್ಮಾರ್ಟ್‌ಸಿಟಿ ಯಿಂದ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಶೀಘ್ರವಾಗಿ ಅಭಿವೃದ್ಧಿಯಾಗಲೆಂದು ಜನರ ಹಾಗೂವಿದ್ಯಾರ್ಥಿಗಳ ಆಯಶವಾಗಿದೆ.
ಒಂದು ದಿನ ವಿಶ್ರಾಂತಿ : 1932ರಲ್ಲಿ ಮಹಾತ್ಮಗಾಂಧಿಯವರು ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸದರಿ ಜಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಒಂದು ದಿನ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ಮಹಾತ್ಮಗಾಂಧಿ ಸ್ಮಾರಕಕಟ್ಟಡವಾಗಿ ಮಾಡಲಾಗಿತ್ತು. ಆದರೆಇದರ ನಿರ್ವಹಣೆ ಅಭಿವೃದ್ಧಿ ಪಡಿಸದೆ ಇಡೀಕಟ್ಟಡ ಹಾಳಾಗಿ ಹೋಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಸರ್ಕಾರಿ ಜೂನಿಯರ್‌ಕಾಲೇಜಿನ ವತಿಯಿಂದ ಸುಣ್ಣ ಬಣ್ಣ ಬಳಿದುಕಟ್ಟಡ ಹಾನಿಯಾಗದಂತೆ ನೋಡಿಕೊಂಡು ಬಂದಿದೆ.
ತುಂಬೆ ಹಾಗೂ ಟುಮುಕಿಯ ಊರು ತುಮಕೂರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಂದು ತಂಗಿ ಇಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದರು. ಅವರು ತಂಗಿದ್ದ ಸರ್ಕಾರಿ ಜೂನಿಯರ್‌ಕಾಲೇಜಿನ ಕೊಠಡಿಯನ್ನು ಸ್ಮಾರಕವಾಗಿ ಅಂದಿನಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಮೂಲ ಕಟ್ಟಡಕ್ಕೆಯಾವುದೇ ತೊಂದರೆ ಆಗದಂತೆ ಆ ಜಾಗವನ್ನು ಅಭಿವೃದ್ಧಿ ಪಡಿಸಿ ಗ್ರಂಥಾಲಯ ಸೇರಿದಂತೆ ಗಾಂಧೀಜಿಯವರ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೊರಕುವಂತೆ ಮಾಡಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿಕಾಮಗಾರಿ ಕೈಗೊಳ್ಳಲು ತೀರ್ಮಾನಕೈಗೊಂಡಿದ್ದೇವೆ. – ಜಿ.ಬಿ.ಜ್ಯೋತಿಗಣೇಶ್, ಶಾಸಕ
ಚಿ.ನಿ.ಪುರುಷೋತ್ತಮ್