Advertisement

ಜನರ ನಿರೀಕ್ಷೆಯಂತೆ ಅಭಿವೃದ್ಧಿ

11:21 AM Oct 11, 2017 | |

ಕೆಂಗೇರಿ: ಬಡಾವಣೆಗಳ ಅಭಿವೃದ್ಧಿ ಹಾಗೂ ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿ ಮೂಲ ಸೌಲಭ್ಯ ಒದಗಿಸುವ ಮೂಲಕ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪತಿಳಿಸಿದರು.

Advertisement

ಕೆಂಗೇರಿ ಉಪನಗರದ ಭಗೀರಥ ಬಡಾವಣೆಯ “ಕುವೆಂಪು ರಸ್ತೆ’ಯ ನಾಮಫ‌ಲಕ ಅನಾವರಣಗೊಳಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಅಡ್ಡಿ ಆತಂಕಗಳು ಎದುರಾಗಿದ್ದವು. ಈ ನಿಟ್ಟಿನಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌ ಹಾಗೂ ಬಿಬಿಎಂಪಿ ಸದಸ್ಯೆ ಶಾರದಾ ಮುನಿರಾಜು ಅವರ ಮನವಿ ಮೇರೆಗೆ ಗೃಹಮಂಡಳಿ ವತಿಯಿಂದ ಸೂಕ್ತ ಸ್ಥಳ ಒದಗಿಸಿ, ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಸಂಪರ್ಕ ರಸ್ತೆಯಿಲ್ಲದೆ ಬಡಾವಣೆ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಚಿವ ಕೃಷ್ಣಪ್ಪಅವರ ಗಮನಕ್ಕೆ ತಂದಾಗ ತಕ್ಷಣವೇ ರಸ್ತೆಗೆ ಅಗತ್ಯವಿರುವ ಜಾಗ ನೀಡಲು ಆದೇಶಿಸುವ ಮುಲಕ ನಾಗರೀಕರ ಸಮಸ್ಯೆಗೆ ಸ್ಪಂದಿಸಿದ್ದರು ಎಂದು ಹೇಳಿದರು.

ಕೆಂಗೇರಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ಸತ್ಯನಾರಾಯಣ್‌, ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು, ಬೆಂಗಳೂರು ದಕ್ಷಿಣ ತಾ.ಪಂ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್‌, ಭಗೀರಥ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಸ್ವಾಮಿನಾಥ್‌, ಉಪಾಧ್ಯಕ್ಷ ಎಂ.ಎನ್‌. ಮಾರ್ತಾಂಡಪ್ಪ, ಕಾರ್ಯದರ್ಶಿ ಸುನೀಲ್‌ ಕುಮಾರ್‌, ಉಪಕಾರ್ಯದರ್ಶಿ ಬಿ.ವಿ.ದೀಪಕ್‌, ಖಜಾಂಚಿ.ಎ.ಶ್ರೀನಾಥ್‌, ಎಸ್‌.ವೆಂಕಟೇಶ್‌ ಮತ್ತಿತ‌ರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next