Advertisement

ಸೇವಾ ಮನೋಭಾವ ಬೆಳೆಸಿಕೊಳ್ಳಿ

02:04 PM Apr 06, 2021 | Team Udayavani |

ಚಿಂತಾಮಣಿ: ಯುವಜನತೆ ಸೇವಾ ಮನೋಭಾವವನ್ನು ಬೆಳೆಸಿಕೊಂಡುಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್‌.ಆನಂದ್‌ ಹೇಳಿದರು.

Advertisement

ತಾಲೂಕಿನ ಹನುಮೈಗಾರಹಳ್ಳಿಯಲ್ಲಿ ಕುರುಬೂರು ರೇಷ್ಮೆ ಕೃಷಿ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ದಿಂದ ನಡೆದ ವಾರ್ಷಿಕ ಶಿಬಿರದಲ್ಲಿಮಾತನಾಡಿ, ಸತ್ಯ ಮತ್ತು ಸೇವೆಯೇ ರಾಷ್ಟ್ರೀಯ ಸೇವಾ ಯೋಜನೆಯ ಎರಡು ಮುಖಗಳು. ಇವು ಒಂದಕ್ಕೊಂದು ಪೂರಕವಾಗಿದೆ. ದೇಶದ ಶಕ್ತಿ ಎಂದರೆ ಆದೇಶದ ಯುವ ಶಕ್ತಿಯೇ ಆಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾಗಿದೆ ಎಂದರು.

ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ: ಸಮಾಜಕ್ಕೆ ಹೊಂದಿಕೊಳ್ಳುವ ಮೌಲ್ಯಗಳು, ಶ್ರಮದಾನ, ಜೀವನ ಕೌಶಲ್ಯಗಳನ್ನು ವೃದ್ಧಿಸುವ ಅಂಶಗಳನ್ನು ಇಂತಹಶಿಬಿರಗಳಿಂದ ಪಡೆದುಕೊಳ್ಳಬಹುದಾಗಿದೆ.ಶಿಕ್ಷಣದ ಜೊತೆಯಲ್ಲಿ ಸೇವಾಮನೋಭಾವ ಬೆಳೆಸಿಕೊಂಡಲ್ಲಿವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಯುವಜನತೆ ರೂಢಿಸಿಕೊಳ್ಳಬೇಕಾಗಿದೆ. ಸಕಾರಾತ್ಮಕಚಿಂತನೆಗಳನ್ನು ಬೆಳೆಸಿಕೊಂಡು,ಸಮಾಜಮುಖೀಯಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಿದೆ ಎಂದರು.

ಜನರ ಕಷ್ಟಸುಖಕ್ಕೆ ಸ್ಪಂದಿಸಿ: ಶಿಬಿರಾಧಿಕಾರಿ ಡಾ.ಶ್ರೀನಿವಾಸರೆಡ್ಡಿಮಾತನಾಡಿ, ಯುವಜನತೆಯ ಮಾನಸಿಕ ಒತ್ತಡ ಕಡಿಮೆ ಮಾಡಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿಯಾಗಿದೆ. ಶಿಬಿರದಿಂದ ಸಂಯಮ, ಶಿಸ್ತನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಗ್ರಾಮೀಣ ಜನರಕಷ್ಟಸುಖಗಳಿಗೆ ಸ್ಪಂದಿಸುವ ಭಾವನೆಬೆಳೆಸಿಕೊಳ್ಳಬೇಕು. ಶ್ರಮದಾನದ ಮೂಲಕ ಸ್ವಚ್ಛತೆಯ ಅರಿವುಮೂಡಿಸಬೇಕು ಎಂದರು.

ಗ್ರಾಮದ ಪ್ರಮುಖ ರಸ್ತೆಗಳನ್ನು ಸ್ವತ್ಛಗೊಳಿಸುವಮೂಲಕ ಶ್ರಮದಾನ ಮಾಡಲಾಯಿತು.ಶಿಬಿರದ ಸಂಚಾಲಕ ಸಂಜೀವಕ್ಯಾತಪ್ಪನವರ್‌ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next