Advertisement

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಕಾರಜೋಳ

02:43 PM Mar 14, 2021 | Team Udayavani |

ಮುಧೋಳ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರರಾಗಬೇಕು. ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿವೈಜ್ಞಾನಿಕ ಮನೋಭಾವ ಹೆಚ್ಚಿಸುವುದರ ಜತೆಗೆಸೃಜನಶೀಲತೆ, ಕೌಶಲ ಹಾಗೂ ಕ್ರಿಯಾಶೀಲತೆ ವ್ಯಕ್ತಪಡಿಸಲು ಒಂದು ವೇದಿಕೆ ದೊರೆಯುತ್ತದೆಎನ್ನುವ ಸದುದ್ದೇಶದಿಂದ ವಿದ್ಯಾರ್ಥಿಗಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ಶನಿವಾರ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಇಂಟರ್‌ನ್ಯಾಶನಲ್‌ ಸಿಬಿಎಸ್‌ಇ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಗ್ಯಾಲಾಕ್ಷಿ -2021 ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳುತಯಾರಿಸಿದ ವಿವಿಧ ಬಗೆಯ ವಿಜ್ಞಾನ ಮಾದರಿ ವೀಕ್ಷಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವಿಜ್ಞಾನದ ತತ್ವಗಳನ್ನು ಬಳಸಿಕೊಂಡುಜನಸಾಮಾನ್ಯರಿಗೆ ಉಪಯುಕ್ತ ತಂತ್ರಜ್ಞಾನ ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು ಮುಂದಾಗಬೇಕಾಗಿದೆ.ತಂತ್ರಜ್ಞಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ವಿಜ್ಞಾನ ದ್ವನಿಯ ಮೂಲಕ ವಿದ್ಯುತ್‌ ಹಾಗೂ ಇತರ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಚಾಲನೆ, ಕೋವಿಡ್‌ ಸ್ವತ್ಛತೆಯ ಸಲಕರಣೆ, ನ್ಯೂಟನ್‌ನ ಜಡತ್ವದ ನಿಯಮ, ಮಾನವನ ಹೃದಯ, ದೇಹ, ಬೆಳಕಿನ ಪ್ರತಿಫಲನ, ಕಾಡು, ಹನಿನೀರಾವರಿ, ರೇಷ್ಮೆ ಸಾಕಾಣೆಯ ಹಂತಗಳು, ಗ್ರಂಥಾಲಯದ ವಿಜ್ಞಾನದ ಪುಸ್ತಕಗಳು, ಸಿರಿಧಾನ್ಯಗಳು, ಸೂಕ್ಷ್ಮದರ್ಶಕ, ಬಹುಪ್ರತಿಫಲನ, ಋತುಮಾನಗಳು, ದ್ಯುತಿಸಂಶ್ಲೇಷಣೆ, ಮೂತ್ರಜನಕಾಂಗ, ಸೌರವ್ಯೂಹ ರೋಗಗಳ ಮುನ್ನೆಚ್ಚರಿಕೆ ಸೇರಿದಂತೆ 178 ವಿಜ್ಞಾನ ಮಾದರಿಗಳನ್ನು ಮಕ್ಕಳು ರೂಪಿಸಿ ಪ್ರದರ್ಶಿಸಿದರು. ಅವುಗಳ ಬಗ್ಗೆ ಉಪಮುಖ್ಯಮಂತ್ರಿಗಳಿಗೆ ಹಾಜರಿದ್ದವರಿಗೆ ಮಾಹಿತಿನೀಡಿದರು. ಸಂಸ್ಥೆ ಅಧ್ಯಕ್ಷ ಶಿವಕುಮಾರ ಮಲಘಾಣ,ಕಾರ್ಯಾಧ್ಯಕ್ಷ ಶಿಶಿರ ಮಲಘಾಣ, ಎಪಿಎಂಸಿ ಅಧ್ಯಕ್ಷಭೀಮಸಿ ತಳವಾರ, ಬಸವರಾಜ ಮಾನೆ, ನಾಗಪ್ಪ ಅಂಬಿ, ಡಾ| ಸತೀಶ ಮಲಘಾಣ, ಪ್ರಾಚಾರ್ಯ ಎಸ್‌. ಖಾನ್‌, ವೆಂಕಟೇಶ ಗುಡೆಪ್ಪನವರ, ಆಡಳಿತಾ ಧಿಕಾರಿ ಮಲ್ಲು ಕಳ್ಳೆನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next