Advertisement

ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಿ

11:21 AM May 20, 2018 | Team Udayavani |

ಬಸವಕಲ್ಯಾಣ: ತಾಂತ್ರಿಕ ಕ್ಷೇತ್ರದಲ್ಲಿ ಆಗುವ ಬದಲಾವಣೆ ಗಮನಿಸಿ ವಿದ್ಯಾರ್ಥಿಗಳು ಸಮಯಕ್ಕೆ ಅನುಗುಣವಾಗಿ ವಿಚಾರಧಾರೆ ಬದಲಿಸುವುದು ಅಗತ್ಯವಾಗಿದೆ ಎಂದು ಆಟೋಡೆಸ್ಕ್ ಸಿಇಒ ಪ್ರದೀಪ ಕಲ್ಲೂರೆ ಅಭಿಪ್ರಾಯಪಟ್ಟರು.

Advertisement

ನಗರದ ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಕಲಬುರ್ಗಿ ವಿಭಾಗದ ಅಂತರ ಕಾಲೇಜು ಮಟ್ಟದ ಟೆಕ್ನೋ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ತಾಂತ್ರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕ್ರಿಯಾಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಂಡು ಕಾರ್ಯಪ್ರವತ್ತರಾಗಬೇಕು ಎಂದು ಹೇಳಿದರು.

ಕಲಬುರಗಿ ಪಿಡಿಎ ಕಾಲೇಜು ಪ್ರೊ| ಬಾಬುರಾವ್‌ ಶೇರಿಕಾರ ಮಾತನಾಡಿ, ನಮ್ಮ ವಿಚಾರ ಸಂಕಿರರ್ಣ ಕಾರ್ಯಕ್ರಮ ತಾಂತ್ರಿಕ ಸುಧಾರಣೆಗಾಗಿ ಪ್ರಯೋಗಿಸುತ್ತಾ ಹೊಸ ಆವಿಷ್ಕಾರಗಳಿಗೆ ನಾಂದಿಯಾಗಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂತಹ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ತಾಂತ್ರಿಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಸ್‌. ಬಿ. ಕಿವಡೆ ಮಾತನಾಡಿ, ಸಾಧನೆಗೆ ಸಾಧಿಸುವ ಮನಸ್ಸು ಮತ್ತು ಇದಕ್ಕೆ ಪೂರಕವಾದ ಪರಿಶ್ರಮ ಅವಶ್ಯ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ತಮ್ಮಲ್ಲಿಯ ಎಲ್ಲ ಶಕ್ತಿಯನ್ನು ಪರಿಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಸಂಯೋಜಕ ಪ್ರೊ| ಬಾಲಾಜಿ ದೇಶಮುಖ, ಪ್ರೊ| ವಿವೇಕಾನಂದ ಅಲೋಜಿ, ಪ್ರೊ| ಪ್ರವೀಣ ಪವಾರ, ಕಾಲೇಜು ಕುಲಸಚಿವ ಪ್ರೇಮಸಾಗರ ಪಾಟೀಲ ಇದ್ದರು. ಕಾರ್ಯಕ್ರಮದ ಸಂಚಾಲಕ, ವಿಭಾಗದ ಮುಖ್ಯಸ್ಥ ಪ್ರೊ| ದಯಾನಂದ ಶೀಲವಂತ ಸ್ವಾಗತಿಸಿದರು. ಪ್ರೊ| ಮೀನಾಕ್ಷಿ ಪವಾರ ನಿರೂಪಿಸಿದರು. ಪ್ರೊ| ರಾಹುಲ ರೆಡ್ಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next