Advertisement
ಸಮಸ್ಯೆಗಳು ಗೌಣಜಿಲ್ಲೆಯ ರೈತರನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕುಡಿಯಲು, ನೀರಾವರಿಗೆ ನೀರಿನ ಸಮಸ್ಯೆ ಇದ್ದದ್ದೇ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಗಂಭೀರ ಪ್ರಯತ್ನ ನಡೆದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ಕೆಆರ್‌ಎಸ್ ಪಕ್ಕದಲ್ಲೇ ಗಣಿಗಾರಿಕೆ ನಡೆದಿದ್ದರೂ ತಡೆಯುವ ಕೆಲಸವಾಗುತ್ತಿಲ್ಲ. ಈ ಮಧ್ಯೆ, ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್‌ನಲ್ಲಿ ಮನೋರಂಜನ ಪಾರ್ಕ್ ನಿರ್ಮಿಸಲು ರಾಜ್ಯ ಸರಕಾರ ಮುಂದಾ ಗಿದ್ದು, ಇದು ಸ್ಥಳೀಯರ ಪ್ರತಿಭಟನೆಗೂ ಕಾರಣವಾಗಿದೆ.
ಸುಮಲತಾ ರಾಜ ಕೀಯ ಪ್ರವೇಶವನ್ನು ಯಾರೂ ನಿರೀಕ್ಷಿಸಿರ ಲಿಲ್ಲ. ಅವರ ಆಗಮನ ದಿಂದ ಜೆಡಿಎಸ್‌ಗೆ
ಸುಲಭ ತುತ್ತಾಗುತ್ತಿದ್ದ ಕ್ಷೇತ್ರ ಈಗ ಬಿಸಿತುಪ್ಪವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಈಗಾಗಲೇ ಜಿಲ್ಲಾದ್ಯಂತ ಸಂಚರಿಸುತ್ತಾ, ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪುತ್ರ ನಿಖೀಲ್‌ರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿ ಪೂರ್ವತಯಾರಿ ಆರಂಭಿಸಿದ್ದ ಸಂದರ್ಭದಲ್ಲೇ ಸುಮಲತಾ ಸ್ಪರ್ಧೆಗೆ ಆಸಕ್ತಿ ವಹಿಸಿದ್ದು ಜೆಡಿಎಸ್ ನಾಯಕ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿ ಅಸ್ತ್ರ
ಬಿಜೆಪಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೋ ಇಲ್ಲ ಸುಮಲತಾರನ್ನು ಬೆಂಬಲಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಒಗ್ಗೂಡಿ ಜೆಡಿಎಸ್ ಕೈ ಹಿಡಿದಿತ್ತು. ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಚೆಲ್ಲಿದರೂ ಪ್ರಗತಿಯ ಚಿತ್ರಣ ಕಾಣುತ್ತಿಲ್ಲ. ಬಹು ನಿರೀಕ್ಷಿತ ರೈತರ ಸಾಲಮನ್ನಾದಲ್ಲೂ ಸ್ಪಷ್ಟತೆ ದೊರಕಿಲ್ಲ. 9 ತಿಂಗಳಿನಿಂದ ಮಂಡ್ಯ ರಸ್ತೆಗಳ ಸ್ಥಿತಿಯೂ ಬದಲಾಗಿಲ್ಲ. ಇದೆಲ್ಲವೂ ಬಿಜೆಪಿಗೆ ಚುನಾವಣಾ ಅಸ್ತ್ರ.
Related Articles
ಮಂಡ್ಯದ ಸೊಸೆ ಎಂಬ ಅಭಿಮಾನ, ಸ್ಥಳೀಯ ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ, ಚಿತ್ರರಂಗದ ಒಕ್ಕೊರಲ ಬೆಂಬಲ, ಅಂಬರೀಶ್ ಅಭಿಮಾನಿ ಬಳಗ, ಪ್ರಬುದ್ಧ ಮಾತು, ನಡೆ ಸುಮಲತಾರ ಪ್ಲಸ್ ಪಾಯಿಂಟ್.
Advertisement
ಜೆಡಿಎಸ್ ಚುನಾವಣ ಅಸ್ತ್ರಒಕ್ಕಲಿಗ ಸಮುದಾಯ ಪಕ್ಷದ ಹಿಂದಿರುವುದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿರುವುದು, ರಾಜ್ಯದಲ್ಲಿ ಅಧಿಕಾರ, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಕೋಟ್ಯಂತರ ರೂ. ಚೆಲ್ಲಿರುವುದು, ಪ್ರಬಲ ಸಂಘಟನೆ, ದೇವೇಗೌಡರ ವರ್ಚಸ್ಸು ಜೆಡಿಎಸ್‌ಪ್ಲಸ್ ಪಾಯಿಂಟ್. ಮಂಡ್ಯ ಮಂಜುನಾಥ್