ಗದಗ : ಪಕ್ಷದಲ್ಲಿ ಇರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ ..ಹೀಗೆ ಹೇಳಿದವರು ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು.
ಗದಗದಲ್ಲಿ ಸುದ್ದಿಗಾರರು ಕಡೂರು ಶಾಸಕ ವೈ.ಎಸ್.ವಿ.ದತ್ತಾ ಅವರಿಗೆ ಟಿಕೇಟ್ ನೀಡುವುದಿಲ್ಲವಂತೆ ಎಂದು ಪ್ರಶ್ನಿಸಿದಾಗ ದೇವೇಗೌಡ ಅವರು ಹೀಗೆ ಪ್ರತಿಕ್ರಿಯಿಸಿದ್ದು ಅವರಿಗೂ ಟಿಕೇಟ್ ನೀಡುತ್ತೇವೆ,ಯಾವುದೇ ಕಾರಣಕ್ಕೂ ಅವರನ್ನು ಕೈಬಿಡುವುದಿಲ್ಲ ಎಂದರು.
ಜಿಲ್ಲೆಯ ಕಪ್ಪತಗುಡ್ಡ ಖನಿಜ ಸಂಪತ್ತು ತೆಗೆಯಲು ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ . ಇದರ ವಿರುದ್ಧ ಹೋರಾಟದ ನೇತೃತ್ವ ವಹಿಸಿರುವ ತೋಂಟದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಜೆಡಿಎಸ್‌ನ ಸಂಪೂರ್ಣ ಬೆಂಬಲ ಇದೆ. ಹೋರಾಟಕ್ಕೂ ಪಕ್ಷ ಸಿದ್ದವಾಗಿದೆ ಎಂದರು.
ಕಳಸಾ ಬಂಡೂರಿ ಹೋರಾಟಗಾರರ ಗಡಿಪಾರು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಹೀಗೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಲ್ಯಾಂಡಿಂಗ್ ವೇಳೆ ಮತ್ತೆ ಟೇಕ್ ಆಫ್ ಆದ ಕ್ಯಾಪ್ಟರ್
ದೇವೆಗೌಡ ಅವರು ಬಂದಿಳಿದ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಆಗುವ ವೇಳೆ ಮತ್ತೆ ಟೇಕ್ ಆಫ್ ಆಗಿ ಪುನಃ ಲ್ಯಾಂಡಿಂಗ್ ಆದ ಪ್ರಸಂಗ ನಡೆಯಿತು.