Advertisement

ಬಜೆಟ್‌ಗೆ ದೇವೇಗೌಡರ ಸಲಹೆ ಪಡೆದ ಮೇಯರ್‌

11:37 AM Mar 19, 2017 | |

ಬೆಂಗಳೂರು: ಬಿಬಿಎಂಪಿ ಬಜೆಟ್‌ ಅನ್ನು ಮಾರ್ಚ್‌ 25 ರಂದು ಮಂಡಿಸಲು ನಿರ್ಧರಿಸಿರುವ ಹಿನ್ನೆಲೆ­ಯಲ್ಲಿ ಮೇಯರ್‌ ಜಿ.ಪದ್ಮಾವತಿ ನೇತೃತ್ವದಲ್ಲಿ ಪಾಲಿಕೆ ಸದಸ್ಯರ ನಿಯೋಗ ಶನಿವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರನ್ನು ಭೇಟಿ ಮಾಡಿ ಸಲಹೆ ಪಡೆಯಿತು.

Advertisement

ಬಿಬಿಎಂಪಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಇರುವುದರಿಂದ ಬೆಂಗಳೂರು ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿಯೋಗವು ದೇವೇಗೌಡರ ಜತೆ ಸಮಾಲೋಚನೆ ನಡೆಸಿತು.   ಜನಸಾಮಾನ್ಯರು ಮತ್ತು ನಗರದಲ್ಲಿನ ಬಡವರ ಅಭಿವೃದ್ಧಿಗೆ ಪೂರಕವಾದ ಕಾರ್ಯ­ಕ್ರಮಗಳನ್ನು ಘೋಷಿಸು­ವಂತೆ ದೇವೇಗೌಡರು ಮೇಯರ್‌ ನೇತೃತ್ವದ ನಿಯೋಗಕ್ಕೆ ಸೂಚಿಸಿದರು.  

ಬೆಂಗಳೂರು ಅಭಿವೃದ್ಧಿಯೊಂದಿಗೆ ನಗರದ ಪರಿಸರ ಮತ್ತು ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುವಂತೆ ಮತ್ತು ಪಾಲಿಕೆಯಲ್ಲಿ ಪಾರದರ್ಶಕ ಆಡಳಿತ ನೀಡಲು ಹೆಚ್ಚಿನ ಮಹತ್ವ ನೀಡುವಂತೆಯೂ ತಿಳಿಸಿದರು. ಬಜೆಟ್‌ ಅಂತಿಮಗೊಳಿಸುವ ಮೊದಲು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರ­ಸ್ವಾಮಿ ಅಭಿಪ್ರಾಯ ಪಡೆಯುವಂತೆಯೂ ತಿಳಿಸಿದರು ಎನ್ನಲಾಗಿದೆ.  

ಭೇಟಿ ನಂತರ ಮಾತನಾಡಿದ ಮೇಯರ್‌ ಜಿ.ಪದ್ಮಾವತಿ, ಬಿಬಿಎಂಪಿ ಬಜೆಟ್‌ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರ ಸಲಹೆಗಳನ್ನು ಪಡೆಯಲಾ­ಗಿದೆ. ಅವರು ನಗರದ ಜನತೆಯ ಹಿತದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಸೂಚಿಸಿದ್ದಾರೆ ಎಂದು ಹೇಳಿದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌, ಉಪ­ಮೇಯರ್‌ ಎಂ.ಆನಂದ್‌, ಬಿಬಿಎಂಪಿ ಜೆಡಿಎಸ್‌ ಪಕ್ಷದ ನಾಯಕಿ ಆರ್‌.ರಮೀಳಾ ಉಮಾಶಂಕರ್‌, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಭದ್ರೇಗೌಡ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next