Advertisement

Ayyappa Swamy; ಚಿನ್ನದ ಲಾಕೆಟ್‌ ಮಾರಾಟಕ್ಕೆ ದೇವಸ್ವಂ ಬೋರ್ಡ್‌ ಚಿಂತನೆ

12:41 AM Dec 13, 2024 | Team Udayavani |

ಪತ್ತನಂತಿಟ್ಟ: ಬರೋಬ್ಬರಿ 12 ವರ್ಷಗಳ ಬಳಿಕ ಅಯ್ಯಪ್ಪ ಸ್ವಾಮಿ ಚಿತ್ರವಿರುವ ಚಿನ್ನದ ಲಾಕೆಟ್‌ ಅನ್ನು ಮಾರಾಟ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ ಮುಂದಾಗಿದೆ. ಈ ಬಗ್ಗೆ ಮುಂದಿನ ಬುಧ­ವಾರ ನಡೆಯಲಿರುವ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

Advertisement

ಟಿಡಿಬಿಯ ವಜ್ರ­ಮ­­ಹೋ­ತ್ಸವ ಆಚರಣೆಯ ಭಾಗವಾಗಿ ಚಿನ್ನದ ಲಾಕೆಟ್‌ ಅನ್ನು ಬಿಡುಗಡೆ ಮಾಡಲು ನಿರ್ಧರಿಸಲಾ­ಗಿದೆ. ಲಾಕೆಟ್‌ಗಳು 1 ಗ್ರಾಂನಿಂದ 8 ಗ್ರಾಂ ತೂಕವಿ­ರು­ತ್ತವೆ. ಪ್ರಮುಖ ಆಭರಣ ತಯಾರಕರು ಲಾಕೆಟ್‌ಗಳ ತಯಾರಿಕೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಮಂಡಳಿಯ ಸದಸ್ಯ ಎ.ಅಜಿಕುಮಾರ್‌ ಹೇಳಿದ್ದಾರೆ. 2011-12ನೇ ಸಾಲಿನಲ್ಲಿ ಕೊನೆಯ ಬಾರಿಗೆ ಲಾಕೆಟ್‌ ವಿತರಿಸಲಾಗಿತ್ತು. 1980ರ ದಶಕದಲ್ಲಿ ಲಾಕೆಟ್‌ ಮಾರಾಟ ವ್ಯವಸ್ಥೆ ಆರಂಭಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next