ನವದೆಹಲಿ: ಸರ್ಕಾರಿ ಸ್ವಾಮ್ಯದಲ್ಲಿ ಇದ್ದ ಏರ್‌ಇಂಡಿಯಾ ವಿರುದ್ಧ ಅಮೆರಿಕದಲ್ಲಿ ದೇವಾಸ್ ಮಲ್ಟಿಮೀಡಿಯಾ ಪ್ರೈ.ಲಿ ಹೂಡಿದ್ದ ದಾವೆ ವಾಪಸ್ ಪಡೆಯಬೇಕು ಎಂದು ಗುರುವಾರ ಅಮೆರಿಕದ ಕೋರ್ಟ್‌ಗೆ ಅರಿಕೆ ಮಾಡಿಕೊಳ್ಳಲಾಗಿದೆ.
ಸಂಸ್ಥೆಯ ಮಾಲೀಕತ್ವದಲ್ಲಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದೆ.
ಸದ್ಯ ಟಾಟಾ ಸನ್ಸ್ ಮಾಲೀಕತ್ವದಲ್ಲಿರುವ ಸಂಸ್ಥೆ ದೂರಸಂಪರ್ಕ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ದೇವಾಸ್ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ನಂತರ ಅದನ್ನು ರದ್ದುಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ದೇವಾಸ್ ಹಲವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಗಳಲ್ಲಿ ದಾವೆ ಹೂಡಿ, ಗೆದ್ದುಕೊಂಡಿತ್ತು.
ಇದನ್ನೂ ಓದಿ:ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ
ಈ ಪೈಕಿ ಅಮೆರಿಕದ ಕೋರ್ಟ್‌ನಲ್ಲಿಯೂ ಒಂದು ಕೇಸು ದಾಖಲಾಗಿದೆ. ಅದರ ಪ್ರಕಾರ ಏರ್ ಇಂಡಿಯಾ 9 ಸಾವಿರ ಕೋಟಿ ರೂ. ಮೊತ್ತವನ್ನು ನೀಡಬೇಕಾಗಿದೆ. ಇಲ್ಲದೆ ಇದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಏರ್ ಇಂಡಿಯಾ ಆಸ್ತಿ ವಶಕ್ಕೆ ಅವಕಾಶ ಕೊಡಬೇಕು ಎಂದು ಅರಿಕೆ ಮಾಡಿಕೊಂಡಿತ್ತು.