Advertisement
ಚಿಕ್ಕಮಗಳೂರು ಜಿಲ್ಲೆ ರಮಣೀಯ ಪ್ರಕೃತಿ ಸೌಂದರ್ಯವನ್ನು ತನ್ನೊಡಲಿನಲ್ಲಿ ಹೊಂದಿದ್ದು, ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿದೆ. ಇಲ್ಲಿಅನೇಕ ಪ್ರವಾಸಿ ತಾಣಗಳನ್ನು ಹೊಂದಿದ್ದರೂಮುಖ್ಯ ಪ್ರವಾಸಿ ತಾಣಗಳನ್ನು ಹೊರತುಪಡಿಸಿಕೆಲವು ಪ್ರವಾಸಿ ತಾಣಗಳು ಅಷ್ಟೊಂದು ಬೆಳಕಿಗೆಬಾರದ ಹಿನ್ನೆಲೆಯಲ್ಲಿ ಆ ಪ್ರವಾಸಿ ತಾಣಗಳುಅಷ್ಟೇನೂ ಜನಪ್ರಿಯತೆ ಪಡೆದುಕೊಂಡಿಲ್ಲ.
Related Articles
Advertisement
ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದ ಸ್ಥಳ ಇದಾಗಿದೆ.ದೇವರಮನೆಯಲ್ಲಿ ನೆಲೆನಿಂತ ಕಾಲಭೈರೇಶ್ವರ:ದೇವರಮನೆ ಪ್ರವಾಸಿ ಕೇಂದ್ರಕ್ಕೆ ಮಾತ್ರಸೀಮಿತವಾಗಿಲ್ಲ, ಇದೊಂದು ಶ್ರದ್ಧಾಭಕ್ತಿಯಕೇಂದ್ರವೂ ಆಗಿದೆ. ಇಲ್ಲಿ ಭವ್ಯವಾದಕಾಲಭೈರೇಶ್ವರ ದೇವಸ್ಥಾನವಿದ್ದು ನಿತ್ಯನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿದೇವರ ದರ್ಶನ ಪಡೆದುಕೊಳ್ಳುತ್ತಾರೆ.ಈ ದೇವಾಲಯಕ್ಕೆ ಸುಮಾರು 1,400ವರ್ಷಗಳ ಇತಿಹಾಸವಿದೆ ಎಂದು ಇಲ್ಲಿನಪೂರ್ವಿಕರು ಹೇಳುತ್ತಾರೆ. ಹೊಯ್ಸಳರಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆಎಂದು ಹೇಳಲಾಗುತ್ತಿದ್ದು, ದೇವಾಲಯದಮೆಟ್ಟಿಲಿನಲ್ಲಿ ವೆಂಕಣ್ಣನ ನಮಸ್ಕಾರಗಳು ಎಂದುಕೆತ್ತಲಾಗಿದ್ದು ಇವರು ಯಾರು ಎಂದು ತಿಳಿದುಬಂದಿಲ್ಲ ಎನ್ನುತ್ತಾರೆ ದೇವಸ್ಥಾನದ ಟ್ರಸ್ಟಿಗಳು.
ಕಾಲಭೈರೇಶ್ವರ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ: ಶಿವ ಕೈಲಾಸದಲ್ಲಿ ನಂದಿಯನ್ನುಕರೆದು ಭೂಲೋಕದಲ್ಲಿ ಜನರು ಹೇಗಿದ್ದಾರೆ ನೋಡಿಕೊಂಡು ಬಾ ಎಂದು ಹೇಳುತ್ತಾನೆ.ಎಲ್ಲವನ್ನು ತಿಳಿದಿರುವ ಶಿವ ನನ್ನನ್ನು ಪರೀಕ್ಷೆಗೊಳಪಡಿಸುತ್ತಿದ್ದಾನೆ ಎಂದು ತಿಳಿದ ನಂದಿ ಭೂಲೋಕಕ್ಕೆ ಬರದೆ ಸುಮ್ಮನಿದು ಬಿಡುತ್ತಾನೆ. ಆ ವೇಳೆಯಲ್ಲಿ ಭೂ ಲೋಕದಲ್ಲಿ ûಾಮ, ಅತಿವೃಷ್ಟಿ- ಅನಾವೃಷ್ಟಿಯಿಂದ ಜನರು ಬದುಕುವುದೇ ಕಷ್ಟವಾಗಿರುತ್ತದೆ.ಸ್ವಲ್ಪ ದಿನಗಳು ಕಳೆದು ಶಿವ ಮತ್ತೆ ನಂದಿಯನ್ನು ಕರೆದು ಭೂಲೋಕಕ್ಕೆ ಹೋಗಿ ಬರಲು ಹೇಳಿದ್ದೇ ಹೋಗಿ ಬಂದೆಯಾ ಎಂದು ಕೇಳುತ್ತಾನೆ. ಆಗ ಭೂಲೋಕದಲ್ಲಿ ಎಲ್ಲವೂ ಚೆನ್ನಾಗಿದೆ. ಜನರು ಸುಖ ಸಂತೋಷದಿಂದಇದ್ದಾರೆ ಎಂದು ಶಿವನಿಗೆ ಸುಳ್ಳುಹೇಳುತ್ತಾನೆ. ಆಗ ಶಿವ ನಾನೇ ಭೂಲೋಕಕ್ಕೆಹೋಗುತ್ತೇನೆಂದು ಶಿವ ಕಾಲಭೈರೇಶ್ವರರೂಪದಲ್ಲಿ ಭೂ ಲೋಕಕ್ಕೆ ಬಂದಿಳಿಯುತ್ತಾನೆ.
ಶಿವ ಬಂದಿಳಿದ ಪುಣ್ಯಭೂಮಿಯೇ ಈದೇವರಮನೆಯಾಗಿದೆ.ಶಿವ ಭೂಲೋಕ್ಕೆ ಬಂದು ಇಲ್ಲಿಯ ಜನರು ಬರಗಾಲ, ಅತಿವೃಷ್ಟಿ, ಅನಾವೃಷ್ಟಿ,ಉಳುಮೆಗೆ ಕಷ್ಟಪಡುವುದನ್ನು ಕಂಡು ಮತ್ತೆ ಕೈಲಾಸಕ್ಕೆ ಹೋಗಿ ನಂದಿಯನ್ನು ಕರೆದು ನನ್ನ ಬಳಿ ಸುಳ್ಳು ಹೇಳಿದ್ದೀಯ. ಆದ್ದರಿಂದ ಭೂಲೋಕಕ್ಕೆ ಹೋಗಿ ರೈತರು ಜಮೀನು ಉಳಿಮೆ ಮಾಡಲು ಸಹಾಯ ಮಾಡು ಎಂದು ಶಾಪ ನೀಡುತ್ತಾನೆ. ಅದರಂತೆ ಅಂದಿನಿಂದ ರೈತರ ಉಳುಮೆಗೆ ನಂದಿ ನೆರವಾದನುಎಂದು ಇಲ್ಲಿನ ಜನರ ನಂಬಿಕೆಯಾಗಿದೆ.
ಇದರ ನೆನಪಿಗಾಗಿ ಇಂದಿ ಗೂ ಕೂಡ ಇಲ್ಲಿನಸುತ್ತಮುತ್ತ ಗ್ರಾಮಗಳ ಜನರು ಕಟ್ಟುನಿಟ್ಟಿನನಿಯಮಗಳನ್ನು ಅನುಸರಿಸಿ ಮೇ ತಿಂಗಳಲ್ಲಿ ಹಬ್ಬವನ್ನು ಆಚರಿಸುವುದು ವಾಡಿಕೆಯಾಗಿದೆ. ಪ್ರತೀ ವರ್ಷ ದೇವಸ್ಥಾನದಲ್ಲಿ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗಿರುವ ದೇವಾಲಯದ ಸಮೀಪದಲ್ಲೇವೃಕ್ಷವಿದ್ದು ಅಲ್ಲಿಯೇ ಶಿವ ಕಾಲಭೈರವನರೂಪದಲ್ಲಿ ಧರೆಗಿಳಿದ್ದಾನೆ ಎಂಬ ನಂಬಿಕೆ ಇದೆ.ಇದು ಶಿವನು ಕೈಲಾಸದಿಂದ ಭೂಮಿಗಿಳಿದ ಪುಣ್ಯಭೂಮಿ.
ಆದ್ದರಿಂದ ಈ ಸ್ಥಳವನ್ನುದೇವರಮನೆ ಎಂದು ಹೆಸರಿಟ್ಟು ಅಂದಿನಚೋಳರ ರಾಜ ಬಲ್ಲಾಳರಾಯ ಕಾಲಭೈರವನದೇವಾಲಯವನ್ನು ನಿರ್ಮಿಸಿದ. ಈಹಿನ್ನೆಲೆಯಲ್ಲಿ ಈ ಪುಣ್ಯಭೂಮಿಗೆ ದೇವರಮನೆಎಂದು ಹೆಸರು ಬಂತು ಎಂದು ಇಲ್ಲಿನಹಿರಿಯರು ಹೇಳು ತ್ತಾರೆ.
ಚಿಕ್ಕಮಗಳೂರು ಜಿಲ್ಲೆ, ಹಾಸನ, ದಕ್ಷಿಣಕನ್ನಡ ಜಿಲ್ಲೆಯ ಅನೇಕ ಕುಟುಂಬಗಳ ಮನೆದೇವರಾಗಿದ್ದು ಆಗಾಗ್ಗೆ ಭೇಟಿ ನೀಡಿ ದೇವರದರ್ಶನ ಪಡೆದುಕೊಳ್ಳುತ್ತಾರೆ. ಈ ದೇವಾಲಯ18 ಸಾವಿರ ಭಕ್ತರನ್ನು ಒಳಗೊಂಡಿದ್ದು 11ಗ್ರಾಮಗಳಿಗೆ ಸೇರಿದ್ದಾಗಿದೆ. 2019ರಿಂದದೇವಸ್ಥಾನದ ಟ್ರಸ್ಟ್ ರಚಿಸಿಕೊಂಡುನಡೆಸಲಾಗುತ್ತಿದೆ. ಪ್ರತೀ ನಿತ್ಯ ಇಲ್ಲಿಗೆ ಭಕ್ತರುಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡುಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ.
ಸರ್ಕಾರದಿಂದ ಆಗಬೇಕಿರುವ ಮೂಲಸೌಲಭ್ಯಗಳು: ದೇವರಮನೆ ಪ್ರವಾಸಿತಾಣ ಹಾಗೂ ಧಾರ್ಮಿಕ ಕೇಂದ್ರವನ್ನುಒಳಗೊಂಡಿದ್ದು, ಈಗಾಗಲೇ ಕೆಲವೊಂದಷ್ಟುಅಭಿವೃದ್ಧಿ ಕಂಡಿದೆ. ಯಾತ್ರಾ ಭವನ ನಿರ್ಮಾಣಕಾರ್ಯ ನಡೆಯುತ್ತಿದೆ. ದೇವಾಲಯದಮುಂಭಾಗದಲ್ಲಿರುವ ಕಲ್ಯಾಣಿ ಅಭಿವೃದ್ಧಿಕಾರ್ಯ ನಡೆಯುತ್ತಿದೆ. ಒಂದಿಷ್ಟು ರಸ್ತೆಅಭಿವೃದ್ಧಿ ಕಂಡಿದ್ದರೂ ಕೆಲವು ಕಡೆಗಳಲ್ಲಿ ರಸ್ತೆಶಿಥಿಲ ಗೊಂಡಿರುವುದರಿಂದ ಪ್ರವಾಸಿಗರುಇಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಈಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಯಾಗಬೇಕಿದೆ.
ದೇವರಮನೆಗೆ ಯಾವುದೇ ವಾಹನಸೌಲಭ್ಯವಿಲ್ಲ, ಸ್ವಂತ ವಾಹನದಲ್ಲಿ ಹೋಗಲುಮಾತ್ರ ಸಾಧ್ಯವಾಗಿದೆ. ಧಾರ್ಮಿಕ ಸ್ಥಳ ಮತ್ತುಪ್ರವಾಸಿ ಕೇಂದ್ರವಾಗಿರುವುದರಿಂದ ವಾಹನವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದರಿಂದಪ್ರವಾಸಿಗರಿಗೆ ಮತ್ತು ಇಲ್ಲಿಗೆ ಬರುವ ಭಕ್ತರಿಗೆಅನುಕೂಲವಾಗುತ್ತದೆ ಹಾಗೂ ದೇವಾಲಯದಸುತ್ತ ಕಾಂಪೌಂಡ್ ಹಾಗೂ ಇಲ್ಲಿಗೆ ಬರುವಪ್ರವಾಸಿಗರಿಂದ ಕಾಡುಪ್ರಾಣಿಗಳಿಗೆಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಬೇಕೆಂಬುದು ಇಲ್ಲಿಯ ಜನರಒತ್ತಾಯವಾಗಿದೆ. ದೇವರಮನೆಯ ಸುತ್ತಮುತ್ತಇನಷ್ಟು ಪ್ರವಾಸಿ ಕೇಂದ್ರಗಳು ಮತ್ತು ಧಾರ್ಮಿಕಕೇಂದ್ರಗಳಿದ್ದು ಇಲ್ಲಿಯ ನಿಸರ್ಗವನ್ನು ಸವಿಯಬಹುದಾಗಿದೆ ಒಟ್ಟಾರೆಯಾಗಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುವವರು ಮಿಸ್ ಮಾಡದೆದೇವರ ಮನೆಗೊಮ್ಮೆ ಭೇಟಿ ನೀಡುವುದು ಒಳಿತು.
ಸಂದೀಪ ಜಿ.ಎನ್. ಶೇಡ್ಗಾರ್