Advertisement

ಸೋಂಕು ಪ್ರದೇಶ ಸೀಲ್‌ಡೌನ್‌ಗೆ ಆಗ್ರಹ

04:50 PM Jul 09, 2020 | Naveen |

ದೇವರಹಿಪ್ಪರಗಿ: ಕೋವಿಡ್ ಪ್ರಕರಣ ಪತ್ತೆಯಾದ ಪ್ರದೇಶದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯತ್‌ ನಿರ್ಧಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಹೊಸನಗರದಲ್ಲಿ ಎರಡು ದಿನಗಳ ಹಿಂದೆ ಕೋವಿಡ್ ದೃಢವಾಗುತ್ತಿದ್ದಂತೆಯೇ ಆ ಪ್ರದೇಶದಲ್ಲಿ ನೆಪಕ್ಕೆ ಮಾತ್ರ ಸೀಲ್‌ ಡೌನ್‌ ಮಾಡಲಾಗಿದೆ. ಅಂಗಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದು ಪಟ್ಟಣ ಪಂಚಾಯಿತಿ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸೀಲ್‌ಡೌನ್‌ ಪ್ರದೇಶದಲ್ಲಿ ಕೂಡಲೇ ರಾಸಾಯನಿಕ ಸಿಂಪರಣೆ ಕ್ರಮಕ್ಕೆ ಮುಂದಾಗಿ ಸೋಂಕು ಹರಡದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕರವೇ ತಾಲ್ಲೂಕು ಅಧ್ಯಕ್ಷ ಮಡುಗೌಡ ಬಿರಾದಾರ, ವಲಯ ಅಧ್ಯಕ್ಷ ರಾಜು ಮೆಟಗಾರ, ದಿನೇಶ ಪಾಟೀಲ, ರಾವುತ ಅಗಸರ, ನಾಗೇಂದ್ರ ಇಂಡಿ ಆಗ್ರಹಿಸಿದ್ದಾರೆ.

ಸೋಂಕಿತ ಕುಟುಂಬದ ಮನೆಗೂ ಹಾಗೂ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಈಗಾಗಲೇ ರಾಸಾಯನಿಕ ಸಿಂಪರಣೆ ಮಾಡಲಾಗಿದೆ.
ಎಲ್‌.ಡಿ. ಮುಲ್ಲಾ,
ಪಪಂ ಮುಖ್ಯಾಧಿಕಾರಿ, ದೇವರಹಿಪ್ಪರಗಿ

Advertisement

Udayavani is now on Telegram. Click here to join our channel and stay updated with the latest news.

Next